Tuesday, 20 October 2020

ಪರಿಸರ ಹೋರಾಟಗಳು

ಪರಿಸರ ಹೋರಾಟಗಳು • ಡಾ.ಲಿಂಗರಾಜ ರಾಮಾಪೂರ, ಪರಿಸರ ತಜ್ಞರು. ಹುಬ್ಬಳ್ಳಿ ಮೊ-9964571330 ಎಲ್ಲ ಪರಿಸರ ಹೋರಾಟಗಳೆಲ್ಲವೂ ಸಂಘಟಿತ ಪ್ರಯತ್ನಗಳು. ಇಲ್ಲಿ ವ್ಯಕ್ತಿ ಶಕ್ತಿಯಾಗಿ ತಮ್ಮ ಜೀವನವನ್ನೇ ಪರಿಸರ ಉಳಿಸುವ ಹೋರಾಟಕ್ಕೆ ಮೀಸಲಿಟ್ಟ ಉದಾಹರಣೆಗಳು ಅಷ್ಟೇ. ಇಂತಹ ಹಲವಾರು ವ್ಯಕ್ತಿಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಜಾಗತಿಕ ಮಟ್ಟದಿಂದ ಹಿಡಿದು ನಮ್ಮ ಶಾಲಾ ಹಂತಗಳವರೆಗೂ ಹಲವಾರು ಜಾಗೃತಿ ಮೂಡಿಸುವ ಹಾಗೂ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಜಾಗೃತ ಸಮಾಜದಲ್ಲಿ ಪರಿಸರದ ವೈಪರೀತ್ಯಗಳಿಂದ ಎಚ್ಚೆತ್ತ ನಾಗರಿಕ ಸಮಾಜ, ಸಮಾಜಮುಖಿ ಚಳುವಳಿಗಳನ್ನು ಆರಂಭಿಸಿರುವುದು ಶ್ಲಾಘನೀಯ. ಅವುಗಳಲ್ಲಿ ಕೆಲವು ಆಂದೋಲನದ ರೂಪದಲ್ಲಿ ಹೊರಹೊಮ್ಮಿವೆ ಮತ್ತು ಯಶಸ್ವಿಯಾಗಿವೆ. ಚಿಪ್ಕೋ ಚಳುವಳಿ, ಅಪ್ಪಿಕೋ ಚಳುವಳಿ, ಕೈಗಾ ಅಣುಸ್ಥಾವರ ವಿರೋಧಿ ಚಳುವಳಿ, ಪಶ್ಚಿಮಘಟ್ಟ ಉಳಿಸಿ ಆಂದೋಲನ ಇತ್ಯಾದಿ. ಇಲ್ಲಿ ಯಾವುದೇ ವೈಯಕ್ತಿಕ ಸ್ವಾರ್ಥಗಳಿಲ್ಲ. ಸ್ವಾರ್ಥವಿರುವುದು ಭೂಮಿಯನ್ನು ಉಳಿಸುವುದಕ್ಕಾಗಿ, ಸ್ವಾರ್ಥವಿರುವುದು ಮುಂದಿನ ಪೀಳಿಗೆಗೆ ಭೂಮಿಯನ್ನು ಸುಗಮ ಸ್ಥಿತಿಯಲ್ಲಿ ನೀಡುವುದಕ್ಕಾಗಿ ಅಷ್ಟೇ. 1)ಅಪ್ಪಿಕೋ ಚಳವಳಿ ಮಲೆನಾಡಿನ ಹಳ್ಳಿಗಳಲ್ಲಿ ಹಸಿ ಮರಗಳ ನಾಶದ ವಿರುದ್ಧದ ವಿಶಿಷ್ಟ ಪ್ರತಿಭಟನೆಯಾಗಿ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದ ಅಪ್ಪಿಕೋ ಚಳವಳಿಗೆ ಈಗ ಮೂರು ದಶಕಗಳು ಸಂದಿವೆ. ಹೊರ ರಾಜ್ಯಗಳಲ್ಲಿಯೂ ಇಂಥ ಆಂದೋಲನಕ್ಕೆ ಪ್ರೇರಣೆಯಾದ ಚಳವಳಿಯ ನೆನಪು ಪರಿಸರ ಆಂದೋಲನದ ಕ್ಷೇತ್ರದಲ್ಲಿ ಇಂದಿಗೂ ಹಸಿರಾಗಿದೆ. ಮಲೆನಾಡಿನ ಹಳ್ಳಿಗಳಲ್ಲಿ ಹಸಿ ಮರಗಳ ನಾಶದ ವಿರುದ್ಧದ ವಿಶಿಷ್ಟ ಪ್ರತಿಭಟನೆಯಾಗಿ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದ ಅಪ್ಪಿಕೋ ಚಳವಳಿಗೆ ಈಗ ಮೂರು ದಶಕಗಳು ಸಂದಿವೆ. ಹೊರ ರಾಜ್ಯಗಳಲ್ಲಿಯೂ ಇಂಥ ಆಂದೋಲನಕ್ಕೆ ಪ್ರೇರಣೆಯಾದ ಚಳವಳಿಯ ನೆನಪು ಪರಿಸರ ಆಂದೋಲನದ ಕ್ಷೇತ್ರದಲ್ಲಿ ಇಂದಿಗೂ ಹಸಿರಾಗಿದೆ. 1983ರ ಸೆಪ್ಟೆಂಬರ್ 8ರಂದು ಶಿರಸಿ ತಾಲೂಕಿನ ಕಳಾಸೆ ಕುದ್ರಗೋಡ ಅರಣ್ಯ್ಯದಲ್ಲಿ ಚಳುವಳಿ ಪ್ರಾರಂಭವಾದ ಅಪ್ಪಿಕೋ ಚಳವಳಿಯು ಇಡಿ ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿತು. ಅದಕ್ಕೂ ಮುನ್ನ ರಾಷ್ಟ್ರೀಯ ಖ್ಯಾತಿಯ ಪರಿಸರ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರು ಬಾಳೆಗದ್ದೆಯ ಬಿಳಗಲ್ ಅಡವಿಗೆ ಭೇಟಿಯಿತ್ತು ಹಳ್ಳಿಗರೊಡನೆ ಚರ್ಚೆ ನಡೆಸಿದ್ದು, ಮರ ಉಳಿಸಲು ಅಹಿಂಸಾತ್ಮಕ ಹೋರಾಟದ ಪ್ರತಿಜ್ಞೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ನಂತರದಲ್ಲಿ ಜನಮನ ಗೆದ್ದ ಈ ಚಳುವಳಿ ಇತಿಹಾಸದ ಪುಟ ಸೇರಿ ಶಾಲಾ ಮಕ್ಕಳ ಪಠ್ಯಕ್ರಮದ ಭಾಗವಾಗಿದೆ. ಈ ಚಳುವಳಿಯಿಂದ ಪ್ರೇರಣೆ ಪಡೆದು ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಅರಣ್ಯ ರಕ್ಷಣೆಯ ಬಗ್ಗೆ ಸ್ಥಳೀಯ ಗುಂಪುಗಳು ಆಂದೋಲನವನ್ನು ನಡೆಸಿವೆ. ಮೂರು ದಶಕಗಳ ಅಪ್ಪಿಕೋ ಚಳವಳಿ ಹಾಗೂ ನಂತರದ ವಿದ್ಯಮಾನಗಳು, ಬೆಳವಣಿಗೆಗಳ ಬಗ್ಗೆ ಚಳವಳಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಂಡುರಂಗ ಹೆಗಡೆ ಅನೇಕ ವಿವರ ನೀಡುತ್ತಾರೆ. ಅಪ್ಪಿಕೋ ಚಳವಳಿ ಮರಗಳ ರಕ್ಷಣೆಗೆ ಸೀಮಿತವಾಗಿರದೇ ನಂತರದಲ್ಲಿ ಜೇನು ಸಂತತಿಯನ್ನು ಉಳಿಸಲು 1992ರಲ್ಲಿ ಜೇನು ಉಳಿಸಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ ಜೇನು ಸಾಕಾಣಿಕೆ, ಜೇನು ಸಂರಕ್ಷಣೆಯನ್ನು ಮಾಡಲು ಜೇನು ಹಬ್ಬವನ್ನು ಆಚರಿಸಲಾಗುತ್ತಿದೆ. ಕಾಳಿ ನದಿಯಲ್ಲಿ ಕಾಗದ ಕಾರಖಾನೆಯ ತ್ಯಾಜ್ಯವನ್ನು ಬಿಡುವುದರ ವಿರುದ್ಧ, ಕಾಳಿ ಬಚಾವೋ ಆಂದೋಲನ ಆರಂಭವಾದದ್ದು ಸಹ ಅಪ್ಪಿಕೋದ ಪ್ರೇರಣೆಯಿಂದಲೇ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಅವಲೋಕನ ಎಂಬ ವಿನೂತನ ಕಾರ್ಯಕ್ರಮ ಶರಾವತಿ ನದಿಯ ದಡದಲ್ಲಿ ಪಾದಯಾತ್ರೆಯನ್ನು ಮಾಡಿ ನದಿಯನ್ನು ಉಳಿಸಲು ಹೊಸ ಪ್ರಯತ್ನ ಆರಂಭವಾಯಿತು. ಇದಕ್ಕೂ ಸಹ ಬಹುಗುಣರು ಆಗಮಿಸಿ ಪೆÇ್ರೀತ್ಸಾಹಿಸಿದರು. ಈ ಚಳುವಳಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ದಕ್ಷಿಣದ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತದಲ್ಲಿ ಹಬ್ಬಲು ಪಶ್ಚಿಮ ಘಟ್ಟ ಉಳಿಸಿ ಆಂದೋಲನವನ್ನು 2009ರಲ್ಲಿ ಆರಂಭವಾಯಿತು. ಇದರ ಪರಿಣಾಮವಾಗಿ ಕೇಂದ್ರ ಸರಕಾರವು ಗಾಡಗೀಳ ನೇತ್ರತ್ವದಲ್ಲಿ ಸಮಿತಿ ನೇಮಿಸಿ ವರದಿ ಪಡೆದದ್ದು ಗಮನಾರ್ಹವಾಗಿದೆ. ಆದರೆ ಈ ಎಲ್ಲ ಪ್ರಯತ್ನಗಳಿಂದ ಅಪ್ಪಿಕೋದ ಮೂಲ ಮಂತ್ರವಾದ “ಉಳಿಸು ಬೆಳಸು ಮತ್ತು ಮಿತವಾಗಿ ಬಳಸು” ಎಂಬ ವಿಚಾರ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ? 1989ರಿಂದ ಜಾರಿಯಲ್ಲಿರುವ ಹಸಿರು ಮರದ ಕಡಿತದ ಆದೇಶ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವದು ಕೂಡಾ ಇಂದು ಮಹತ್ವದ್ದಾಗಿದೆ. ಜಾಗತೀಕರಣದ ನಂತರ ಸರ್ಕಾರ ಅನುಸರಿಸಿದ ನೀತಿಗಳಿಂದಾಗಿ ಉಳಿದಿರುವ ಕಾಡನ್ನು ಬಹತ್ ಯೋಜನೆಗಳಿಗೆ ಬಲಿಕೊಡಲಾಗುತ್ತಿದೆ. ಒಂದೆಡೆ ಕಾಡಿನಲ್ಲಿ ಹಸಿರು ಮರದ ಕಡಿತ ನಿμÉೀಧಿಸುವ ಸರಕಾರಿ ಆದೇಶವಿದ್ದರೂ ಸಹ ಅದೇ ಸರ್ಕಾರ ಬಹತ್ ನೀರಾವರಿ, ಜಲವಿದ್ಯುತ್ ಯೋಜನೆಗಳಿಗಾಗಿ ಪ್ರತಿ ವರ್ಷ ಸಾವಿರಾರು ಎಕರೆ ಅರಣ್ಯನಾಶಕ್ಕೆ ಎಡೆಮಾಡಿ ಕೊಟ್ಟಿದೆ. ನೈಸರ್ಗಿಕ ಕಾಡಿನ ರಕ್ಷಣೆ ಬಹಳ ಕಷ್ಟಕರ . ಕಾಡು ಬರಿದಾಗಿ ಬೀಡಾಗಲು, ಸರಕಾರ, ಕಳ್ಳ ಸಾಗಾಣಿಕೆದಾರರು, ಹಾಗೂ ಅರಣ್ಯ ಇಲಾಖೆಯ ವೈಫಲ್ಯವೇ ಮುಖ್ಯ ಕಾರಣವಾಗಿದೆ ಎನ್ನುವ ಆಕ್ಷೇಪವೂ ಕೇಳಿ ಬರುತ್ತಿದೆ. ಇನ್ನೂ ಅರಣ್ಯ ಬೆಳಸುವ ಬದಲು ನೆಡುತೋಪನ್ನು ಅಕೇಶಿಯಾ ಎಂಬ ಹಸಿರು ಮರೀಚಿಕೆಯನ್ನು ಸ್ಥಾಪಿಸಿ ಕಾಡನ್ನು ಇನ್ನಷ್ಟು ಬರಡಾಗಿಸಲಾಗುತ್ತಿದೆ. ಜೀವ ವಿವಿಧತೆಯನ್ನು ರಕ್ಷಿಸುವ ಬದಲಾಗಿ ವಿವಿಧತೆಯನ್ನು ನಾಶಪಡಿಸುವ ಯೋಜನೆ, ಅರಣ್ಯೀಕರಣದಲ್ಲಿ ಏಕಜಾತಿಯ ಗಿಡಗಳ ಸಾರ್ವಭೌಮತ್ವ ಅಪಾಯಕಾರಿ ಮಟ್ಟ ತಲುಪಿದ್ದು ಹಸಿರು ಮರುಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಎಂದು ಪರಿಸರ ಸಂರಕ್ಷಣ ಕೇಂದ್ರದ ಮುಖ್ಯಸ್ಥ ಪಾಂಡುರಂಗ ಹೆಗಡೆ ವಿμÁದ, ಆಕ್ಷೇಪ ವ್ಯಕ್ತಪಡಿಸುತ್ತಾರೆ. 2)ಸುಂದರಲಾಲ ಬಹುಗುಣ ಸುಂದರ್ ಲಾಲ್ ಬಹುಗುಣ (ಜನನ 9 ಜನವರಿ 1927) ಒಬ್ಬ ಗರ್ವಾಲಿ ಪರಿಸರವಾದಿ ಮತ್ತು ಚಿಪೆÇ್ಕ ಚಳುವಳಿಯ ನಾಯಕ. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದಾರೆ. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು. ಆರಂಭಿಕ ಜೀವನ ಸುಂದರ್ ಲಾಲ್ ಬಹುಗುಣ ರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927ರಂದು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಬಹುಗುಣರವರು 1947ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು 4700 ಕಿಲೋಮೀಟರ್ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು. Chipko ಚಳುವಳಿ Chipko ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ 26 ಮಾರ್ಚ್ 1974ರಂದು ಪ್ರಾರಂಭಿಸಿದರು. ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಚಿಪೆÇ್ಕ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಬಹುಗುಣರವರು 'ಪರಿಸರವು ಶಾಶ್ವತ ಆರ್ಥಿಕತೆ' ಎಂಬ Chipko ಘೋಷಣೆಯನ್ನು ರಚಿಸಿದ್ದಾರೆ. ಅವರು ಚಳುವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು 1981ರಿಂದ 1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳುವಳಿಗೆ ಬೆಂಬಲವನ್ನು ಪಡೆದರು. Chipko ಚಳುವಳಿ ಅಥವಾ Chipko ಆಂದೋಲನ ಎಂಬುದು ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಪ್ರಮುಖ ಚಳುವಳಿಯಾಗಿದೆ. ಚಿಪೆÇ್ಕೀ ಚಳುವಳಿಯು ಮೊದಲಿಗೆ 1970ರಲ್ಲಿ ಉತ್ತರಖಂಡದ ಗರ್ವಾಲ ಹಿಮಾಲಯ ಹಾಗೂ ಉತ್ತರಪ್ರದೇಶದಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯನಾಶದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆರಂಭವಾಯಿತು. ಮಾರ್ಚ್ 26, 1974ರಲ್ಲಿ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೇನಿಹಳ್ಳಿ ಮತ್ತು ಹೇಮ ವಾಲ್ಘಂಟೆಯಲ್ಲಿ ಕೆಲವು ಮಹಿಳೆಯರು ಭಯಬೀತರಾಗಿ ತಮ್ಮ ಕಾಡಿನ ಸಾಂಪ್ರದಾಯಿಕ ಹಕ್ಕನ್ನು ವಾಪಸ್ಸು ಪಡೆಯುವ ಸಲುವಾಗಿ ಇವರು ಮರಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಸಿದರು. ಈ ಘಟನೆಯನ್ನು ಈ ಚಳುವಳಿಯ ಪ್ರಮುಖ ಘಟನೆ ಎನ್ನಬಹುದು. ಏಕೆಂದರೆ ಈ ಹೋರಾಟ ಇಂತಹ ನೂರಾರು ಘಟನೆಗಳಿಗೆ ಸ್ಪೂರ್ತಿಯಾಯಿತು ಮತ್ತು ಇದು ಪ್ರಖ್ಯಾತ ಉತ್ತರಖಂಡದಾದ್ಯಂತ ಹಬ್ಬಿತು. ನಂತರ 1980ರ ವೇಳೆಗೆ ಈ ಚಳುವಳಿ ಇಡೀ ಭಾರತದಾದ್ಯಂತ ವ್ಯಾಪಿಸಿತು ಮತ್ತು ಬಿಂದ್ಯಾ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅತೀ ಹೇರಳವಾಗಿ ನಡೆಯುತ್ತಿದ್ದ ಅರಣ್ಯ ನಾಶಕ್ಕೆ ಪೂರ್ಣವಿರಾಮ ನೀಡಲು ಈ ಘಟನೆ ಸಹಾಯಕವಾಯಿತು. ಈಗ ಈ ಘಟನೆ ಗರ್ವಾಲದ ಚಿಪೆÇ್ಕೀ ಚಳುವಳಿಗೆ ಮುನ್ಸೂಚನೆ ಹಾಗೂ ಸ್ಪೂರ್ತಿಯ ಸೆಲೆಯಾಗಿ ಕಾಣುತ್ತಿದೆ. ಇದರ ಪ್ರಮುಖ ನಾಯಕರು ಸುಂದರ್ ಲಾಲ್ ಬಹುಗುಣ ಆಗಿದ್ದರು. ಬಹುಗುಣರಿಗೆ ಸಂದ ಪ್ರಶಸ್ತಿಗಳು • 1981ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಆದರೆ ಅದನ್ನು ನಿರಾಕರಿಸಿದರು. • 1987ರಲ್ಲಿ ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪೆÇ್ಕ ಚಳುವಳಿ). • 1986ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ. • 1989ರಲ್ಲಿ ಐಐಟಿ ರೂರ್ಕಿ ಅವರು ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ ನೀಡಿದರು. • 2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ. 3)ಸಾಲುಮರದ ತಿಮ್ಮಕ್ಕ ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೆÇೀರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ. ಜೀವನ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಚಿಕ್ಕರಂಗಯ್ಯ; ತಾಯಿ ವಿಜಯಮ್ಮ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು, ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು ಎಂದು ಹೇಳಲಾಗಿದೆ. ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು. ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೆÇದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ತಿಮ್ಮಕ್ಕನವರ ಸಾಧನೆಯ ಪಲಕ ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು. ಒಟ್ಟಾರೆ 284 ಸಸಿಗಳನ್ನು ನೆಡಲಾಗಿ, ಇಂದಿಗೆ ಅವುಗಳ ಮೌಲ್ಯವು ಸುಮಾರು 15 ಲಕ್ಷ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಪ್ರಶಸ್ತಿ, ಗೌರವ ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ರಾಷ್ಟ್ರೀಯ ಪೌರ ಪ್ರಶಸ್ತಿ - 1995[4] ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ - 1997[4] ರಾಜ್ಯೋತ್ಸವ ಪ್ರಶಸ್ತಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ. 2010ರ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಲಭಿಸಿದೆ. 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರಸ್ತುತದ ಚಟುವಟಿಕೆಗಳು ತಿಮ್ಮಕ್ಕ ಅವರ ಪತಿ 1991ರಲ್ಲಿ ಮೃತಪಟ್ಟರು. ಇಂದು, ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತದೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣವೂ ಸೇರಿದಂತೆ ಇವರು ಇತರೆ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಇವರು ತಮ್ಮ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟುವ ಆಸೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಾಗಿ ಒಂದು ನ್ಯಾಸ ನಿಧಿಯನ್ನು ನಿಯೋಜಿಸಲಾಗಿದೆ. 4)ತುಳಸಿ ಗೌಡ ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆಯುತ್ತಿರುವ ಮತ್ತೋರ್ವ ಮಹಿಳಾ ಸಾಧಕಿ ತುಳಸಿ ಗೌಡ. ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ! ಹುಟ್ಟು,ಬಾಲ್ಯ ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944ರಲ್ಲಿ ಜನಿಸಿದವರು ತುಳಸಿ ಗೌಡರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡರು, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು. ಪರಿಸರ ಪ್ರೇಮಿ ಪರಿಸರ ಪ್ರೇಮ ಅನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಮಾಡುತಿದ್ದರು. ಪರಿಸರದ ಮೇಲೆ ಕಾಳಜಿ ಇದ್ದುದರಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ತುಳಸಿ ಗೌಡ. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನು ಮಾಡುತ್ತಿದ್ದ ತುಳಸಿ ಗೌಡರಿಗೆ, ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ಉದ್ಯೋಗ ಪರಿಸರದ ಮೇಲಿನ ಈಕೆಯ ಪ್ರೀತಿಯನ್ನ ಕಂಡು ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೆÇೀಷಿಸುವ ಕೆಲಸವನ್ನು ಸಹ ಕೊಡಿಸಿದ್ದರು. 72 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೆÇೀಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೆÇೀಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ. 72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ಇವರು ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ. ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ. ಮರಗಳ ವಿಜ್ಞಾನಿ ಎಂದೇ ಉತ್ತರ ಕನ್ನಡದಲ್ಲಿ ಇವರನ್ನು ಕರೆಯಲಾಗುತ್ತದೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ವಯಸ್ಸಾದರೂ ಈಗಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ. ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೆÇೀಷಿಸ ತೊಡಗಿದರು. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು. ಪ್ರಸಿದ್ಧಿ • 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. • ಇವರು ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ • ರಾಜ್ಯೋತ್ಸವ ಪ್ರಶಸ್ತಿ • ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ. • ಪದ್ಮಶ್ರೀ ಪ್ರಶಸ್ತಿ. ಈ ಎಲ್ಲ ಪರಿಸರ ಹೋರಾಟಗಳೆಲ್ಲವೂ ಸಂಘಟಿತ ಪ್ರಯತ್ನಗಳು. ಇಲ್ಲಿ ವ್ಯಕ್ತಿ ಶಕ್ತಿಯಾಗಿ ತಮ್ಮ ಜೀವನವನ್ನೇ ಪರಿಸರ ಉಳಿಸುವ ಹೋರಾಟಕ್ಕೆ ಮೀಸಲಿಟ್ಟ ಉದಾಹರಣೆಗಳು ಅಷ್ಟೇ. ಇಂತಹ ಹಲವಾರು ವ್ಯಕ್ತಿಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಜಾಗತಿಕ ಮಟ್ಟದಿಂದ ಹಿಡಿದು ನಮ್ಮ ಶಾಲಾ ಹಂತಗಳವರೆಗೂ ಹಲವಾರು ಜಾಗೃತಿ ಮೂಡಿಸುವ ಹಾಗೂ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾವು ಪ್ರಕೃತಿಯ ಮೇಲೆ, ಪ್ರಕೃತಿಯು ನಮ್ಮ ಮೇಲೆ ಪರಸ್ಪರ ಉಳಿವಿಗಾಗಿ ಅವಲಂಬಿತವಾಗಿದ್ದೇವೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ಇದು ಶುದ್ಧ ಸುಳ್ಳು. ಪ್ರಕೃತಿ ನಮ್ಮ ಮೇಲೆ ಅವಲಂಬಿತವಾಗಿಲ್ಲ. ನಾವು ಇಲ್ಲದಿದ್ದರೂ ಪ್ರಕೃತಿ ಇರಬಲ್ಲದು. ಮಾನವನ ಅವಶ್ಯಕತೆ ಪ್ರಕೃತಿಗೆ ಇಲ್ಲ. ಮನುಷ್ಯನ ಉಗಮದ ಮೊದಲು ಪ್ರಕೃತಿ ಇತ್ತಲ್ಲವೇ? ಮಾನವನು ಕೂಡ ಜೀವ ಸಂಕುಲದ ಒಂದು ಭಾಗ ಎನ್ನುವುದನ್ನು ಮರೆಯುವ ಹಾಗಿಲ್ಲ. ಪ್ರಕೃತಿಯನ್ನು ಬಳಸುವಾಗ ನಮ್ಮ ಉಳಿವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಲು ಬೇರೆ ಜೀವಿಗಳಷ್ಟೇ ನಮಗೆ ಹಕ್ಕಿದೆ. ನಾವು ಕೂಡ ಈ ಪ್ರಕೃತಿಯ ಜೈವಿಕ ಅಂಶಗಳಲ್ಲಿನ ಒಂದು ಅಂಶವೇ ಹೊರತು ಪ್ರಕೃತಿಯ ಒಡೆಯರಲ್ಲ ಎನ್ನುವುದನ್ನು ಮರೆಯಬಾರದು. ಆದ ಕಾರಣ ಇಂತಹ ಪರಿಸರ ಹೋರಾಟಗಳಿಗೆ ಎಲ್ಲರೂ ಬೆಂಬಲಿಸಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ.

No comments:

Post a Comment