Tuesday, 20 October 2020
ಲಾಕ್ ಡೌನ್ ಸಮಯದೀ ಡಾ.ಲಿಂಗರಾಜ ರಾಮಾಪೂರ, ಯೂ-ಟೂಬ್ ಚಾನೆಲ್ ನಲ್ಲಿ ಪ್ರಸಾರಗೊಂಡ ಕವಿತೆಗಳು. ಕವಿತೆ ಕೇಳಲು ಲಿಂಕ್ ಒತ್ತಿ
ಲಾಕ್ ಡೌನ್ ಸಮಯದೀ ಡಾ.ಲಿಂಗರಾಜ ರಾಮಾಪೂರ, ಯೂ-ಟೂಬ್ ಚಾನೆಲ್ ನಲ್ಲಿ ಪ್ರಸಾರಗೊಂಡ ಕವಿತೆಗಳು. ಕವಿತೆ ಕೇಳಲು ಲಿಂಕ್ ಒತ್ತಿ
ಮೇ 2020 ಕವಿತೆ ಹೆಸರು ಯೂ ಟೂಬ್ ಲಿಂಕ್
1 ಗಾಂಧಿ ತಾತಾ https://www.youtube.com/watch?v=O4LARH9e9i8&t=7s
2 ಹುಡುಗಿಯ ಉಪಾಯ https://www.youtube.com/watch?v=qWTLXk4L4A4
3 ಚಿಣ್ಣರ ಸರ್ಕಸ್ https://www.youtube.com/watch?v=fGBqZdsiVbc
4 ಕಾಡಿನ ಪಯಣ https://www.youtube.com/watch?v=2F7N34iZzO4&t=76s
5 ಪೆದ್ದ ಕೋಣ https://www.youtube.com/watch?v=8ytIEGOSQfc&t=11s
6 ಇರುವೆಯೇ ಮಾದರಿ https://www.youtube.com/watch?v=FksF5v6J2v4
7 ಬಾರೋ ಮಳೆರಾಯ https://www.youtube.com/watch?v=7EUsDcOY62A
8 ಉಪಕಾರ ತ್ರಪ್ತಿ https://www.youtube.com/watch?v=nFhWtDZ8Cgw&t=17s
9 ಚಿಣ್ಣರ ಶಾಲೆ https://www.youtube.com/watch?v=P2X-PaHSr-k
10 ಗುರು ನಮನ https://www.youtube.com/watch?v=KnWwVhW5VNI
11 ನರಿಯ ಉಪಾಯ https://www.youtube.com/watch?v=iept4EC92KQ
12 ಗಡಿಯಾರ https://www.youtube.com/watch?v=6tsyPBkGLpc
13 ಬೆಕ್ಕಪ್ಪ https://www.youtube.com/watch?v=0tlPh64ppd0
14 ಅಟೋಮಾಮಾ https://www.youtube.com/watch?v=fbWpDC09SYs
15 ಮಂಗಣ್ಣ https://www.youtube.com/watch?v=iT7HxRc_Enc
16 ಕಟ್ಟೋಣ ಬನ್ನಿ https://www.youtube.com/watch?v=PtxwsZNYc0I&t=2s
17 ಗುಬ್ಬಿಗಳೆಲ್ಲಿ? https://www.youtube.com/watch?v=G_yljouEUBg
18 ಚಿಣ್ಣರ ಚಂದಿರ https://www.youtube.com/watch?v=gAxRoGMksn4
19 ಬಾ ನವಿಲೆ https://www.youtube.com/watch?v=P691hiSwig8
20 ಮನೆಯೊಳಗಿದ್ದರೆ ಅಜ್ಜಿ https://www.youtube.com/watch?v=HubHRwTILqs
21 ಓಡಿಬನ್ನಿ ಮಕ್ಕಳೆ https://www.youtube.com/watch?v=gvTnps_p9do
22 ಚಿಣ್ಣರ ಚೆಂಡು https://www.youtube.com/watch?v=WOZISkOAXso
23 ಯಾವುದು ಮೊದಲು https://www.youtube.com/watch?v=LCu-tztAWa4
24 ಹಾವಿನ ಹೆಜ್ಜೆ https://www.youtube.com/watch?v=5rc9bRa-Nts
25 ನಿನಗಿದೋ ಉತ್ತರ https://www.youtube.com/watch?v=k8r7uG63Cd4
26 ಪ್ರಕೃತಿ ಮಾತೆ https://youtu.be/9IYBhksl30k
27 ಚಿಣ್ಣರ ಚಿಟ್ಟೆ https://www.youtube.com/watch?v=1w3ptG0neTg
28 ಬೆಳಕು https://www.youtube.com/watch?v=FZTpGCxyIFM
29 ಜಾಣ ಕಾಗೆ https://www.youtube.com/watch?v=9QL-qP_nen0
30 ಗಾಳಿ ಪಟ https://www.youtube.com/watch?v=BmDE5XSd3w0
31 ಬಣ್ಣದ ಗಿಳಿ https://www.youtube.com/watch?v=S2SGh_CE6tA
My Books in Book Brahma
https://www.bookbrahma.com/author/lingaraj-ramapur
https://www.bookbrahma.com/book/neer-baar-vijnaana-naatakagalu
https://www.bookbrahma.com/book/shikshakana-notadalli-america
https://www.bookbrahma.com/book/vaijnaanika-kathegalu
https://www.bookbrahma.com/book/vijnaanada-belakinaleyalli-prachalita-vijnaana-barahagalu
https://www.bookbrahma.com/book/nisarga-nyaaya-parisara-naatakagalu
https://www.bookbrahma.com/book/vijnaanada-aledaata
https://www.bookbrahma.com/book/huggi-andra-hingaiti-makkala-naatakagalu
https://www.bookbrahma.com/book/agastyadinda-naasadavarege
https://www.bookbrahma.com/book/parisaradolagina-satyada-maatu
https://www.bookbrahma.com/book/doddavaru-chikkvariddaga-makkala-katha-sankalana
https://www.bookbrahma.com/book/gubbigondu-maneya-maadi
https://www.bookbrahma.com/book/vijnaanamayi
https://www.bookbrahma.com/book/bhoomi-maratakkilla-parisara-natakagalu
https://www.bookbrahma.com/book/magu-neenaagu-malaala
https://www.bookbrahma.com/book/kalaam-nimagondu-salaam
https://www.bookbrahma.com/book/bhaaratha-ratnagalu
https://www.bookbrahma.com/book/puttaraja-haagu-eradu-naatakagalu
https://www.bookbrahma.com/book/janaredege-vijnaana
https://www.bookbrahma.com/book/magic-pencil
ಪರಿಸರ ಹೋರಾಟಗಳು
ಪರಿಸರ ಹೋರಾಟಗಳು
• ಡಾ.ಲಿಂಗರಾಜ ರಾಮಾಪೂರ, ಪರಿಸರ ತಜ್ಞರು. ಹುಬ್ಬಳ್ಳಿ ಮೊ-9964571330
ಎಲ್ಲ ಪರಿಸರ ಹೋರಾಟಗಳೆಲ್ಲವೂ ಸಂಘಟಿತ ಪ್ರಯತ್ನಗಳು. ಇಲ್ಲಿ ವ್ಯಕ್ತಿ ಶಕ್ತಿಯಾಗಿ ತಮ್ಮ ಜೀವನವನ್ನೇ ಪರಿಸರ ಉಳಿಸುವ ಹೋರಾಟಕ್ಕೆ ಮೀಸಲಿಟ್ಟ ಉದಾಹರಣೆಗಳು ಅಷ್ಟೇ. ಇಂತಹ ಹಲವಾರು ವ್ಯಕ್ತಿಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಜಾಗತಿಕ ಮಟ್ಟದಿಂದ ಹಿಡಿದು ನಮ್ಮ ಶಾಲಾ ಹಂತಗಳವರೆಗೂ ಹಲವಾರು ಜಾಗೃತಿ ಮೂಡಿಸುವ ಹಾಗೂ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪ್ರಸ್ತುತ ಜಾಗೃತ ಸಮಾಜದಲ್ಲಿ ಪರಿಸರದ ವೈಪರೀತ್ಯಗಳಿಂದ ಎಚ್ಚೆತ್ತ ನಾಗರಿಕ ಸಮಾಜ, ಸಮಾಜಮುಖಿ ಚಳುವಳಿಗಳನ್ನು ಆರಂಭಿಸಿರುವುದು ಶ್ಲಾಘನೀಯ. ಅವುಗಳಲ್ಲಿ ಕೆಲವು ಆಂದೋಲನದ ರೂಪದಲ್ಲಿ ಹೊರಹೊಮ್ಮಿವೆ ಮತ್ತು ಯಶಸ್ವಿಯಾಗಿವೆ. ಚಿಪ್ಕೋ ಚಳುವಳಿ, ಅಪ್ಪಿಕೋ ಚಳುವಳಿ, ಕೈಗಾ ಅಣುಸ್ಥಾವರ ವಿರೋಧಿ ಚಳುವಳಿ, ಪಶ್ಚಿಮಘಟ್ಟ ಉಳಿಸಿ ಆಂದೋಲನ ಇತ್ಯಾದಿ. ಇಲ್ಲಿ ಯಾವುದೇ ವೈಯಕ್ತಿಕ ಸ್ವಾರ್ಥಗಳಿಲ್ಲ. ಸ್ವಾರ್ಥವಿರುವುದು ಭೂಮಿಯನ್ನು ಉಳಿಸುವುದಕ್ಕಾಗಿ, ಸ್ವಾರ್ಥವಿರುವುದು ಮುಂದಿನ ಪೀಳಿಗೆಗೆ ಭೂಮಿಯನ್ನು ಸುಗಮ ಸ್ಥಿತಿಯಲ್ಲಿ ನೀಡುವುದಕ್ಕಾಗಿ ಅಷ್ಟೇ.
1)ಅಪ್ಪಿಕೋ ಚಳವಳಿ
ಮಲೆನಾಡಿನ ಹಳ್ಳಿಗಳಲ್ಲಿ ಹಸಿ ಮರಗಳ ನಾಶದ ವಿರುದ್ಧದ ವಿಶಿಷ್ಟ ಪ್ರತಿಭಟನೆಯಾಗಿ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದ ಅಪ್ಪಿಕೋ ಚಳವಳಿಗೆ ಈಗ ಮೂರು ದಶಕಗಳು ಸಂದಿವೆ. ಹೊರ ರಾಜ್ಯಗಳಲ್ಲಿಯೂ ಇಂಥ ಆಂದೋಲನಕ್ಕೆ ಪ್ರೇರಣೆಯಾದ ಚಳವಳಿಯ ನೆನಪು ಪರಿಸರ ಆಂದೋಲನದ ಕ್ಷೇತ್ರದಲ್ಲಿ ಇಂದಿಗೂ ಹಸಿರಾಗಿದೆ. ಮಲೆನಾಡಿನ ಹಳ್ಳಿಗಳಲ್ಲಿ ಹಸಿ ಮರಗಳ ನಾಶದ ವಿರುದ್ಧದ ವಿಶಿಷ್ಟ ಪ್ರತಿಭಟನೆಯಾಗಿ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದ ಅಪ್ಪಿಕೋ ಚಳವಳಿಗೆ ಈಗ ಮೂರು ದಶಕಗಳು ಸಂದಿವೆ. ಹೊರ ರಾಜ್ಯಗಳಲ್ಲಿಯೂ ಇಂಥ ಆಂದೋಲನಕ್ಕೆ ಪ್ರೇರಣೆಯಾದ ಚಳವಳಿಯ ನೆನಪು ಪರಿಸರ ಆಂದೋಲನದ ಕ್ಷೇತ್ರದಲ್ಲಿ ಇಂದಿಗೂ ಹಸಿರಾಗಿದೆ.
1983ರ ಸೆಪ್ಟೆಂಬರ್ 8ರಂದು ಶಿರಸಿ ತಾಲೂಕಿನ ಕಳಾಸೆ ಕುದ್ರಗೋಡ ಅರಣ್ಯ್ಯದಲ್ಲಿ ಚಳುವಳಿ ಪ್ರಾರಂಭವಾದ ಅಪ್ಪಿಕೋ ಚಳವಳಿಯು ಇಡಿ ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿತು. ಅದಕ್ಕೂ ಮುನ್ನ ರಾಷ್ಟ್ರೀಯ ಖ್ಯಾತಿಯ ಪರಿಸರ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರು ಬಾಳೆಗದ್ದೆಯ ಬಿಳಗಲ್ ಅಡವಿಗೆ ಭೇಟಿಯಿತ್ತು ಹಳ್ಳಿಗರೊಡನೆ ಚರ್ಚೆ ನಡೆಸಿದ್ದು, ಮರ ಉಳಿಸಲು ಅಹಿಂಸಾತ್ಮಕ ಹೋರಾಟದ ಪ್ರತಿಜ್ಞೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ನಂತರದಲ್ಲಿ ಜನಮನ ಗೆದ್ದ ಈ ಚಳುವಳಿ ಇತಿಹಾಸದ ಪುಟ ಸೇರಿ ಶಾಲಾ ಮಕ್ಕಳ ಪಠ್ಯಕ್ರಮದ ಭಾಗವಾಗಿದೆ. ಈ ಚಳುವಳಿಯಿಂದ ಪ್ರೇರಣೆ ಪಡೆದು ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಅರಣ್ಯ ರಕ್ಷಣೆಯ ಬಗ್ಗೆ ಸ್ಥಳೀಯ ಗುಂಪುಗಳು ಆಂದೋಲನವನ್ನು ನಡೆಸಿವೆ. ಮೂರು ದಶಕಗಳ ಅಪ್ಪಿಕೋ ಚಳವಳಿ ಹಾಗೂ ನಂತರದ ವಿದ್ಯಮಾನಗಳು, ಬೆಳವಣಿಗೆಗಳ ಬಗ್ಗೆ ಚಳವಳಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಂಡುರಂಗ ಹೆಗಡೆ ಅನೇಕ ವಿವರ ನೀಡುತ್ತಾರೆ.
ಅಪ್ಪಿಕೋ ಚಳವಳಿ ಮರಗಳ ರಕ್ಷಣೆಗೆ ಸೀಮಿತವಾಗಿರದೇ ನಂತರದಲ್ಲಿ ಜೇನು ಸಂತತಿಯನ್ನು ಉಳಿಸಲು 1992ರಲ್ಲಿ ಜೇನು ಉಳಿಸಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ ಜೇನು ಸಾಕಾಣಿಕೆ, ಜೇನು ಸಂರಕ್ಷಣೆಯನ್ನು ಮಾಡಲು ಜೇನು ಹಬ್ಬವನ್ನು ಆಚರಿಸಲಾಗುತ್ತಿದೆ. ಕಾಳಿ ನದಿಯಲ್ಲಿ ಕಾಗದ ಕಾರಖಾನೆಯ ತ್ಯಾಜ್ಯವನ್ನು ಬಿಡುವುದರ ವಿರುದ್ಧ, ಕಾಳಿ ಬಚಾವೋ ಆಂದೋಲನ ಆರಂಭವಾದದ್ದು ಸಹ ಅಪ್ಪಿಕೋದ ಪ್ರೇರಣೆಯಿಂದಲೇ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಅವಲೋಕನ ಎಂಬ ವಿನೂತನ ಕಾರ್ಯಕ್ರಮ ಶರಾವತಿ ನದಿಯ ದಡದಲ್ಲಿ ಪಾದಯಾತ್ರೆಯನ್ನು ಮಾಡಿ ನದಿಯನ್ನು ಉಳಿಸಲು ಹೊಸ ಪ್ರಯತ್ನ ಆರಂಭವಾಯಿತು. ಇದಕ್ಕೂ ಸಹ ಬಹುಗುಣರು ಆಗಮಿಸಿ ಪೆÇ್ರೀತ್ಸಾಹಿಸಿದರು.
ಈ ಚಳುವಳಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ದಕ್ಷಿಣದ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತದಲ್ಲಿ ಹಬ್ಬಲು ಪಶ್ಚಿಮ ಘಟ್ಟ ಉಳಿಸಿ ಆಂದೋಲನವನ್ನು 2009ರಲ್ಲಿ ಆರಂಭವಾಯಿತು. ಇದರ ಪರಿಣಾಮವಾಗಿ ಕೇಂದ್ರ ಸರಕಾರವು ಗಾಡಗೀಳ ನೇತ್ರತ್ವದಲ್ಲಿ ಸಮಿತಿ ನೇಮಿಸಿ ವರದಿ ಪಡೆದದ್ದು ಗಮನಾರ್ಹವಾಗಿದೆ.
ಆದರೆ ಈ ಎಲ್ಲ ಪ್ರಯತ್ನಗಳಿಂದ ಅಪ್ಪಿಕೋದ ಮೂಲ ಮಂತ್ರವಾದ “ಉಳಿಸು ಬೆಳಸು ಮತ್ತು ಮಿತವಾಗಿ ಬಳಸು” ಎಂಬ ವಿಚಾರ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ? 1989ರಿಂದ ಜಾರಿಯಲ್ಲಿರುವ ಹಸಿರು ಮರದ ಕಡಿತದ ಆದೇಶ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವದು ಕೂಡಾ ಇಂದು ಮಹತ್ವದ್ದಾಗಿದೆ.
ಜಾಗತೀಕರಣದ ನಂತರ ಸರ್ಕಾರ ಅನುಸರಿಸಿದ ನೀತಿಗಳಿಂದಾಗಿ ಉಳಿದಿರುವ ಕಾಡನ್ನು ಬಹತ್ ಯೋಜನೆಗಳಿಗೆ ಬಲಿಕೊಡಲಾಗುತ್ತಿದೆ. ಒಂದೆಡೆ ಕಾಡಿನಲ್ಲಿ ಹಸಿರು ಮರದ ಕಡಿತ ನಿμÉೀಧಿಸುವ ಸರಕಾರಿ ಆದೇಶವಿದ್ದರೂ ಸಹ ಅದೇ ಸರ್ಕಾರ ಬಹತ್ ನೀರಾವರಿ, ಜಲವಿದ್ಯುತ್ ಯೋಜನೆಗಳಿಗಾಗಿ ಪ್ರತಿ ವರ್ಷ ಸಾವಿರಾರು ಎಕರೆ ಅರಣ್ಯನಾಶಕ್ಕೆ ಎಡೆಮಾಡಿ ಕೊಟ್ಟಿದೆ. ನೈಸರ್ಗಿಕ ಕಾಡಿನ ರಕ್ಷಣೆ ಬಹಳ ಕಷ್ಟಕರ . ಕಾಡು ಬರಿದಾಗಿ ಬೀಡಾಗಲು, ಸರಕಾರ, ಕಳ್ಳ ಸಾಗಾಣಿಕೆದಾರರು, ಹಾಗೂ ಅರಣ್ಯ ಇಲಾಖೆಯ ವೈಫಲ್ಯವೇ ಮುಖ್ಯ ಕಾರಣವಾಗಿದೆ ಎನ್ನುವ ಆಕ್ಷೇಪವೂ ಕೇಳಿ ಬರುತ್ತಿದೆ.
ಇನ್ನೂ ಅರಣ್ಯ ಬೆಳಸುವ ಬದಲು ನೆಡುತೋಪನ್ನು ಅಕೇಶಿಯಾ ಎಂಬ ಹಸಿರು ಮರೀಚಿಕೆಯನ್ನು ಸ್ಥಾಪಿಸಿ ಕಾಡನ್ನು ಇನ್ನಷ್ಟು ಬರಡಾಗಿಸಲಾಗುತ್ತಿದೆ. ಜೀವ ವಿವಿಧತೆಯನ್ನು ರಕ್ಷಿಸುವ ಬದಲಾಗಿ ವಿವಿಧತೆಯನ್ನು ನಾಶಪಡಿಸುವ ಯೋಜನೆ, ಅರಣ್ಯೀಕರಣದಲ್ಲಿ ಏಕಜಾತಿಯ ಗಿಡಗಳ ಸಾರ್ವಭೌಮತ್ವ ಅಪಾಯಕಾರಿ ಮಟ್ಟ ತಲುಪಿದ್ದು ಹಸಿರು ಮರುಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಎಂದು ಪರಿಸರ ಸಂರಕ್ಷಣ ಕೇಂದ್ರದ ಮುಖ್ಯಸ್ಥ ಪಾಂಡುರಂಗ ಹೆಗಡೆ ವಿμÁದ, ಆಕ್ಷೇಪ ವ್ಯಕ್ತಪಡಿಸುತ್ತಾರೆ.
2)ಸುಂದರಲಾಲ ಬಹುಗುಣ
ಸುಂದರ್ ಲಾಲ್ ಬಹುಗುಣ (ಜನನ 9 ಜನವರಿ 1927) ಒಬ್ಬ ಗರ್ವಾಲಿ ಪರಿಸರವಾದಿ ಮತ್ತು ಚಿಪೆÇ್ಕ ಚಳುವಳಿಯ ನಾಯಕ. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದಾರೆ. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು.
ಆರಂಭಿಕ ಜೀವನ
ಸುಂದರ್ ಲಾಲ್ ಬಹುಗುಣ ರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927ರಂದು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಬಹುಗುಣರವರು 1947ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು 4700 ಕಿಲೋಮೀಟರ್ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.
Chipko ಚಳುವಳಿ
Chipko ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ 26 ಮಾರ್ಚ್ 1974ರಂದು ಪ್ರಾರಂಭಿಸಿದರು. ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಚಿಪೆÇ್ಕ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಬಹುಗುಣರವರು 'ಪರಿಸರವು ಶಾಶ್ವತ ಆರ್ಥಿಕತೆ' ಎಂಬ Chipko ಘೋಷಣೆಯನ್ನು ರಚಿಸಿದ್ದಾರೆ. ಅವರು ಚಳುವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು 1981ರಿಂದ 1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳುವಳಿಗೆ ಬೆಂಬಲವನ್ನು ಪಡೆದರು.
Chipko ಚಳುವಳಿ ಅಥವಾ Chipko ಆಂದೋಲನ ಎಂಬುದು ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಪ್ರಮುಖ ಚಳುವಳಿಯಾಗಿದೆ. ಚಿಪೆÇ್ಕೀ ಚಳುವಳಿಯು ಮೊದಲಿಗೆ 1970ರಲ್ಲಿ ಉತ್ತರಖಂಡದ ಗರ್ವಾಲ ಹಿಮಾಲಯ ಹಾಗೂ ಉತ್ತರಪ್ರದೇಶದಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯನಾಶದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆರಂಭವಾಯಿತು. ಮಾರ್ಚ್ 26, 1974ರಲ್ಲಿ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೇನಿಹಳ್ಳಿ ಮತ್ತು ಹೇಮ ವಾಲ್ಘಂಟೆಯಲ್ಲಿ ಕೆಲವು ಮಹಿಳೆಯರು ಭಯಬೀತರಾಗಿ ತಮ್ಮ ಕಾಡಿನ ಸಾಂಪ್ರದಾಯಿಕ ಹಕ್ಕನ್ನು ವಾಪಸ್ಸು ಪಡೆಯುವ ಸಲುವಾಗಿ ಇವರು ಮರಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಸಿದರು. ಈ ಘಟನೆಯನ್ನು ಈ ಚಳುವಳಿಯ ಪ್ರಮುಖ ಘಟನೆ ಎನ್ನಬಹುದು. ಏಕೆಂದರೆ ಈ ಹೋರಾಟ ಇಂತಹ ನೂರಾರು ಘಟನೆಗಳಿಗೆ ಸ್ಪೂರ್ತಿಯಾಯಿತು ಮತ್ತು ಇದು ಪ್ರಖ್ಯಾತ ಉತ್ತರಖಂಡದಾದ್ಯಂತ ಹಬ್ಬಿತು. ನಂತರ 1980ರ ವೇಳೆಗೆ ಈ ಚಳುವಳಿ ಇಡೀ ಭಾರತದಾದ್ಯಂತ ವ್ಯಾಪಿಸಿತು ಮತ್ತು ಬಿಂದ್ಯಾ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅತೀ ಹೇರಳವಾಗಿ ನಡೆಯುತ್ತಿದ್ದ ಅರಣ್ಯ ನಾಶಕ್ಕೆ ಪೂರ್ಣವಿರಾಮ ನೀಡಲು ಈ ಘಟನೆ ಸಹಾಯಕವಾಯಿತು. ಈಗ ಈ ಘಟನೆ ಗರ್ವಾಲದ ಚಿಪೆÇ್ಕೀ ಚಳುವಳಿಗೆ ಮುನ್ಸೂಚನೆ ಹಾಗೂ ಸ್ಪೂರ್ತಿಯ ಸೆಲೆಯಾಗಿ ಕಾಣುತ್ತಿದೆ. ಇದರ ಪ್ರಮುಖ ನಾಯಕರು ಸುಂದರ್ ಲಾಲ್ ಬಹುಗುಣ ಆಗಿದ್ದರು.
ಬಹುಗುಣರಿಗೆ ಸಂದ ಪ್ರಶಸ್ತಿಗಳು
• 1981ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಆದರೆ ಅದನ್ನು ನಿರಾಕರಿಸಿದರು.
• 1987ರಲ್ಲಿ ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪೆÇ್ಕ ಚಳುವಳಿ).
• 1986ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ.
• 1989ರಲ್ಲಿ ಐಐಟಿ ರೂರ್ಕಿ ಅವರು ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ ನೀಡಿದರು.
• 2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ.
3)ಸಾಲುಮರದ ತಿಮ್ಮಕ್ಕ
ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೆÇೀರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಜೀವನ
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಚಿಕ್ಕರಂಗಯ್ಯ; ತಾಯಿ ವಿಜಯಮ್ಮ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು, ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು ಎಂದು ಹೇಳಲಾಗಿದೆ.
ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು. ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು.
ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೆÇದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು.
ತಿಮ್ಮಕ್ಕನವರ ಸಾಧನೆಯ ಪಲಕ
ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು. ಒಟ್ಟಾರೆ 284 ಸಸಿಗಳನ್ನು ನೆಡಲಾಗಿ, ಇಂದಿಗೆ ಅವುಗಳ ಮೌಲ್ಯವು ಸುಮಾರು 15 ಲಕ್ಷ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.
ಪ್ರಶಸ್ತಿ, ಗೌರವ
ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ರಾಷ್ಟ್ರೀಯ ಪೌರ ಪ್ರಶಸ್ತಿ - 1995[4]
ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ - 1997[4]
ರಾಜ್ಯೋತ್ಸವ ಪ್ರಶಸ್ತಿ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ.
2010ರ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಲಭಿಸಿದೆ.
2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಪ್ರಸ್ತುತದ ಚಟುವಟಿಕೆಗಳು
ತಿಮ್ಮಕ್ಕ ಅವರ ಪತಿ 1991ರಲ್ಲಿ ಮೃತಪಟ್ಟರು. ಇಂದು, ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತದೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣವೂ ಸೇರಿದಂತೆ ಇವರು ಇತರೆ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಇವರು ತಮ್ಮ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟುವ ಆಸೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಾಗಿ ಒಂದು ನ್ಯಾಸ ನಿಧಿಯನ್ನು ನಿಯೋಜಿಸಲಾಗಿದೆ.
4)ತುಳಸಿ ಗೌಡ
ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆಯುತ್ತಿರುವ ಮತ್ತೋರ್ವ ಮಹಿಳಾ ಸಾಧಕಿ ತುಳಸಿ ಗೌಡ. ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ!
ಹುಟ್ಟು,ಬಾಲ್ಯ
ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944ರಲ್ಲಿ ಜನಿಸಿದವರು ತುಳಸಿ ಗೌಡರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡರು, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು.
ಪರಿಸರ ಪ್ರೇಮಿ
ಪರಿಸರ ಪ್ರೇಮ ಅನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಮಾಡುತಿದ್ದರು. ಪರಿಸರದ ಮೇಲೆ ಕಾಳಜಿ ಇದ್ದುದರಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ತುಳಸಿ ಗೌಡ. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನು ಮಾಡುತ್ತಿದ್ದ ತುಳಸಿ ಗೌಡರಿಗೆ, ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ.
ಉದ್ಯೋಗ
ಪರಿಸರದ ಮೇಲಿನ ಈಕೆಯ ಪ್ರೀತಿಯನ್ನ ಕಂಡು ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೆÇೀಷಿಸುವ ಕೆಲಸವನ್ನು ಸಹ ಕೊಡಿಸಿದ್ದರು. 72 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ
ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ
ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೆÇೀಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೆÇೀಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ. 72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ಇವರು ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ. ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ. ಮರಗಳ ವಿಜ್ಞಾನಿ ಎಂದೇ ಉತ್ತರ ಕನ್ನಡದಲ್ಲಿ ಇವರನ್ನು ಕರೆಯಲಾಗುತ್ತದೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ವಯಸ್ಸಾದರೂ ಈಗಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ. ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೆÇೀಷಿಸ ತೊಡಗಿದರು. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು.
ಪ್ರಸಿದ್ಧಿ
• 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
• ಇವರು ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ
• ರಾಜ್ಯೋತ್ಸವ ಪ್ರಶಸ್ತಿ
• ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ.
• ಪದ್ಮಶ್ರೀ ಪ್ರಶಸ್ತಿ.
ಈ ಎಲ್ಲ ಪರಿಸರ ಹೋರಾಟಗಳೆಲ್ಲವೂ ಸಂಘಟಿತ ಪ್ರಯತ್ನಗಳು. ಇಲ್ಲಿ ವ್ಯಕ್ತಿ ಶಕ್ತಿಯಾಗಿ ತಮ್ಮ ಜೀವನವನ್ನೇ ಪರಿಸರ ಉಳಿಸುವ ಹೋರಾಟಕ್ಕೆ ಮೀಸಲಿಟ್ಟ ಉದಾಹರಣೆಗಳು ಅಷ್ಟೇ. ಇಂತಹ ಹಲವಾರು ವ್ಯಕ್ತಿಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಜಾಗತಿಕ ಮಟ್ಟದಿಂದ ಹಿಡಿದು ನಮ್ಮ ಶಾಲಾ ಹಂತಗಳವರೆಗೂ ಹಲವಾರು ಜಾಗೃತಿ ಮೂಡಿಸುವ ಹಾಗೂ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ನಾವು ಪ್ರಕೃತಿಯ ಮೇಲೆ, ಪ್ರಕೃತಿಯು ನಮ್ಮ ಮೇಲೆ ಪರಸ್ಪರ ಉಳಿವಿಗಾಗಿ ಅವಲಂಬಿತವಾಗಿದ್ದೇವೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ಇದು ಶುದ್ಧ ಸುಳ್ಳು. ಪ್ರಕೃತಿ ನಮ್ಮ ಮೇಲೆ ಅವಲಂಬಿತವಾಗಿಲ್ಲ. ನಾವು ಇಲ್ಲದಿದ್ದರೂ ಪ್ರಕೃತಿ ಇರಬಲ್ಲದು. ಮಾನವನ ಅವಶ್ಯಕತೆ ಪ್ರಕೃತಿಗೆ ಇಲ್ಲ. ಮನುಷ್ಯನ ಉಗಮದ ಮೊದಲು ಪ್ರಕೃತಿ ಇತ್ತಲ್ಲವೇ? ಮಾನವನು ಕೂಡ ಜೀವ ಸಂಕುಲದ ಒಂದು ಭಾಗ ಎನ್ನುವುದನ್ನು ಮರೆಯುವ ಹಾಗಿಲ್ಲ. ಪ್ರಕೃತಿಯನ್ನು ಬಳಸುವಾಗ ನಮ್ಮ ಉಳಿವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಲು ಬೇರೆ ಜೀವಿಗಳಷ್ಟೇ ನಮಗೆ ಹಕ್ಕಿದೆ. ನಾವು ಕೂಡ ಈ ಪ್ರಕೃತಿಯ ಜೈವಿಕ ಅಂಶಗಳಲ್ಲಿನ ಒಂದು ಅಂಶವೇ ಹೊರತು ಪ್ರಕೃತಿಯ ಒಡೆಯರಲ್ಲ ಎನ್ನುವುದನ್ನು ಮರೆಯಬಾರದು. ಆದ ಕಾರಣ ಇಂತಹ ಪರಿಸರ ಹೋರಾಟಗಳಿಗೆ ಎಲ್ಲರೂ ಬೆಂಬಲಿಸಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ.
ಪರಿಸರ ಕಾನೂನುಗಳು
ಪರಿಸರ ಕಾನೂನುಗಳು
• ಡಾ.ಲಿಂಗರಾಜ ರಾಮಾಪೂರ, ಆಂಗ್ಲಭಾಷಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕಿರೇಸೂರ. ತಾ-ಹುಬ್ಬಳ್ಳಿ ಮೊ-9964571330
ಜೂನ್ 5, ವಿಶ್ವ ಪರಿಸರ ದಿನ. ಪರಿಸರ ಮಹತ್ವವನ್ನು ಸಾರುವ ದಿನ. ಪರಿಸರದ ಅವಿಭಾಜ್ಯ ಅಂಗವಾಗಿರುವ ಮನುಷ್ಯ ಪ್ರಕೃತಿಯನ್ನು ಸ್ಮರಿಸುವ ದಿನ. ನಿರಂತರವಾಗಿ ಪರಿಸರವನ್ನು ಶೋಷಣೆ ಮಾಡುತ್ತಾ ಬಂದಿರುವ ಮನುಷ್ಯ ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಸ್ವಾತಂತ್ರ್ಯಾನಂತರ ಪರಿಸರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಮಾರು 200ಕ್ಕೂ ಹೆಚ್ಚು ಕಾನೂನುಗಳನ್ನು, ಪರಿಸರ ಕಾಯಿದೆಗಳನ್ನು ಜಾರಿಗೆ ತಂದಿವೆ. ಇಷ್ಟೆಲ್ಲಾ ಕಾನೂನುಗಳು ಜಾರಿಯಾಗಿದ್ದರೂ ಪರಿಸರ ಶೋಷಣೆ ಮಾತ್ರ ನಿಂತಿಲ್ಲ. ಪರಿಸರ ರಕ್ಷಣೆ ಕಾನೂನಿನಿಂದ ಅಲ್ಲ ಜನರ ಮನೋಭಾವ ಬದಲಾವಣೆಯಿಂದ ಮಾತ್ರ ಸಾಧ್ಯ. ತನ್ನಿಮಿತ್ಯ ಈ ಲೇಖನ.
ಪರಿಸರ ಸಂಪನ್ಮೂಲಗಳ ಬಳಕೆಗೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು, ಪರಿಸರ ಸಂಪನ್ಮೂಲಗಳ ಅತಿಬಳಕೆಯನ್ನು ನಿಯಂತ್ರಿಸಿ ಪರಿಸರವನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಶಕ್ತಿಶಾಲಿಯಾದ ಕಾನೂನುಗಳು ಇಂದು ಅವಶ್ಯಕ. ಹೊಸ ವಿಷಯವೊಂದು ಬೆಳಕಿಗೆ ಬಂದಾಗ ಮತ್ತು ತಾಂತ್ರಿಕತೆಗಳ ಆವಿಷ್ಕಾರವಾದಾಗ ಹೊಸ ಕಾನೂನುಗಳನ್ನು ತರುವುದು, ಜೊತೆಗೆ ಈಗಿರುವ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿ ಮಾಡುವುದು ಅವಶ್ಯಕ. ಕಾನೂನು, ಕಾಯಿದೆ, ನೀತಿ, ಘೋಷಣೆ, ತಿದ್ದುಪಡಿ ಪರಿಸರ ಸಂರಕ್ಷಣೆಗೆ ಅತ್ಯಗತ್ಯ.
1972ರವರೆಗೂ ಭಾರತದಲ್ಲಿ ಪರಿಸರ ಕಾಯಿದೆಗಳ ಬಗ್ಗೆ ಸೂಕ್ತ ಚೌಕಟ್ಟು ಇದ್ದಂತೆ ತೋರುವುದಿಲ್ಲ. 1972ರಲ್ಲಿ ಸ್ವೀಡನ್ನಿನ ಸ್ಟಾಕ್ ಹೋಂನಲ್ಲಿ ಮಾನವ ಪರಿಸರ ಎಂಬ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಸಮ್ಮೇಳನದ ಆನಂತರ ಪರಿಸರ ಕಾಯಿದೆಗಳಿಗೆ ಸೂಕ್ತ ಚೌಕಟ್ಟನ್ನು ಒದಗಿಸುವ ಪ್ರಯತ್ನಗಳು ನಡೆದವು. ಭಾರತದಲ್ಲಿ 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಪರಿಸರ ಸಂರಕ್ಷಣೆ ಪದವನ್ನು ಮೊಟ್ಟಮೊದಲು ಬಳಸಲಾಯಿತು.
1972ರ ಪೂರ್ವದಲ್ಲಿ ಕೆಲವು ಪಾರಿಸಾರಿಕ ಸಮಸ್ಯೆಗಳ ನಿವಾರಣೆಗೆ ಹಲವು ಕಾಯಿದೆಗಳನ್ನು ಹೊರತರಲಾಗಿತ್ತು. 1853ರಲ್ಲಿ ಜಾರಿಯಾದ ಹೊಗೆ ನಿಯಂತ್ರಣ(ಮುಂಬೈ ಮತ್ತು ಕೋಲ್ಬ) ಕಾಯಿದೆ, 1863 ಕಲ್ಕತ್ತ ನಗರವು ಯುರೋಪಿಯನ್ ದೇಶಗಳಿಗಿಂತ ಮುಂಚೆಯೇ ಧೂಮಪಾನವನ್ನು ನಿಷೇಧಿಸುವ ಕಾನೂನನ್ನು ಹೊರ ತಂದಿತ್ತು. 1882ರಲ್ಲಿ ಜಾರಿಗೆ ಬಂದ ಭಾರತೀಯ ಅನುಭೋಗಿ ಹಕ್ಕಿನ ಕಾನೂನು ಜಲಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳನ್ನು ಒತ್ತಿ ಹೇಳಿತು. 1972ರಲ್ಲಿ ಸ್ಟಾಕ್ ಹೋಂ ಸಮ್ಮೇಳನದ ಅನಂತರ, ಭಾರತದಲ್ಲಿ ಕೇಂದ್ರ ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ರಾಷ್ಟ್ರೀಯ ಪರಿಸರ ನೀತಿ ಮತ್ತು ಯೋಜನಾ ಪರಿಷತ್ತು ರಚಿತವಾಯಿತು. ಇದು ಕ್ರಮೇಣ ಪರಿಸರ ಮತ್ತು ಅರಣ್ಯ ಸಚಿವಾಲಯವಾಗಿ ಅಭಿವೃದ್ಧಿಗೊಂಡಿತು. ಇಂದು ಪರಿಸರ ಸಂರಕ್ಷಣೆಯನ್ನು ನಿಯಂತ್ರಿಸುತ್ತಿರುವ ಪ್ರಧಾನ ಆಡಳಿತ ಸಂಸ್ಥೆಯೇ ಇದು. ಇದರೊಂದಿಗೆ ಅಸಂಪ್ರದಾಯಿಕ ಶಕ್ತಿ ಆಕರಗಳ ಸಚಿವಾಲಯ ಹಾಗೂ ಇನ್ನಿತರ ಸಂಸ್ಥೆಗಳೂ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪರಿಸರ ಸಂರಕ್ಷಣೆಯಲ್ಲಿ ಸಹಾಯಮಾಡುತ್ತಿದೆ.
ಪರಿಸರ ಮತ್ತು ಅರಣ್ಯ ಸಚಿವಾಲಯವು ರಚಿತವಾದ ಪರಿಸರ ಕಾಯಿದೆ, ಕಾನೂನುಗಳಿಗೆ ಸೂಕ್ತ ಚೌಕಟ್ಟು ಒದಗಿಸಿತು. ಇದು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾಲ ಕಾಲಕ್ಕೆ ಬದಲಾಗುತ್ತಿರುವ ಪರಿಸರ ಸಮಸ್ಯೆಗಳಿಗೆ ಸೂಕ್ತವಾಗಿ ಅನೇಕ ಕಾಯಿದೆ ಕಾನೂನುಗಳನ್ನು ಘೋಷಣೆಗಳನ್ನು ತಿದ್ದುಪಡಿಗಳನ್ನು ಹೊರತಂದಿದೆ. ಕಳೆದ ಶಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಹಲವು ಕಾಯಿದೆಗಳು ಜಾರಿಗೆ ಬಂದವು. ಅಪಾಯಕಾರಿ ತ್ಯಾಜ್ಯ ವಿನಿಯೋಗ ಕಾಯಿದೆ(1989)ಯಿಂದ ಹಿಡಿದು ರಾಷ್ಟ್ರೀಯ ಪರಿಸರ ಅಪೀಲು ವಿಚಾರಣಾ ಅಧಿಕಾರ ಶಾಸನ(1997)ದವರೆಗೂ ವಿವಿಧ ಕಾಯಿದೆಗಳು ಜಾರಿಗೆ ಬಂದಿವೆ. ಅಂದರೆ ಪಾರಿಸರಿಕ ಸಮಸ್ಯೆಗಳ ಸಮಗ್ರ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವಂತಹ ಕಾಯಿದೆಗಳು ರಚಿತವಾಗುತ್ತಿವೆ. 1992ರಲ್ಲಿ ಸಂವಿಧಾನ 73 ಮತ್ತು 74ನೆಯ ಕಾಯಿದೆಗಳನ್ನು ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯಿಂದ ಪಂಚಾಯತಿಗಳಿಗೆ ಮತ್ತು ನಗರ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ ಪ್ರಾಪ್ತವಾಯಿತು. ಈ ತಿದ್ದುಪಡಿಯು ಪರಿಸರ ನಿರ್ವಹಣೆಯನ್ನು ವಿಕೇಂದ್ರಿಕರಿಸಿ, ಸ್ಥಳೀಯ ಮಟ್ಟದಲ್ಲಿ ಪರಿಸರ ಮತ್ತು ಅಭಿವೃದ್ಧಿಗಳ ನಡುವೆ ಇರುವ ಸಂಬಂಧವನ್ನು ಮತ್ತಷ್ಟು ಹತ್ತಿರ ತಂದಿತು. ಪರಿಸರ ಮತ್ತು ಅಭಿವೃದ್ಧಿಯ ಕುರಿತ ರಾಷ್ಟ್ರೀಯ ಸಂರಕ್ಷಣಾ ಕಾರ್ಯತಂತ್ರ ಮತ್ತು ನೀತಿಯು(1992) ಈ ಸಂಬಂಧವನ್ನು ಭದ್ರಗೊಳಿಸಿತು. ಪರಿಸರದ ಬಗ್ಗೆ ಎಲ್ಲಾ ಮಟ್ಟಗಳಲ್ಲೂ ಅರಿವು ಹೆಚ್ಚುತ್ತಿರುವಂತೆ ಕಾನೂನು, ಕಾಯಿದೆಗಳೂ ಬಿಗಿಗೊಳ್ಳುತ್ತಿವೆ. ನ್ಯಾಯಾಂಗ ಸಂಸ್ಥೆಗಳು ಎಚ್ಚೆತ್ತುಕೊಳ್ಳುತ್ತಿವೆ ಹಾಗೂ ಹೆಚ್ಚು ಕ್ರಿಯಾಶೀಲವಾಗುತ್ತಿವೆ. ಸರ್ವೋಚ್ಛ ನ್ಯಾಯಾಲಯವು ಪರಿಸರ ಕಾಯಿದೆಗಳನ್ನು ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಉಚ್ಛ ನ್ಯಾಯಾಲಯಗಳನ್ನು ಪ್ರೋತ್ಸಾಹಿಸುತ್ತದೆ.
ಇಂದು ಪರಿಸರ ಸಂರಕ್ಷಣೆಯನ್ನು ಕುರಿತು ವಿಶಿಷ್ಟ ನಿಯಮಗಳಿರುವ ಪ್ರಪಂಚದ ಕೆಲವೇ ಸಂವಿಧಾನಗಳಲ್ಲಿ ಭಾರತದ ಸಂವಿಧಾನವೂ ಒಂದು. ಇದು ಪರಿಸರ ರಕ್ಷಣೆ ಹಾಗೂ ಪರಿಸರಾಭಿವೃದ್ಧಿಯತ್ತ ರಾಷ್ಟ್ರದ ಧ್ಯೇಯವನ್ನು ಸ್ಪಷ್ಟಪಡಿಸುತ್ತದೆ. ನ್ಯಾಯಾಂಗದ ಅರ್ಥವಿವರಣೆಯು ಸಂವಿದಾನದ ನಿಯೋಗವನ್ನು ಬಲಪಡಿಸಿದೆ. ಸರ್ವೋಚ್ಛ ನ್ಯಾಯಾಲಯವು ದೂರದೃಷ್ಟಿಯುಳ್ಳ ವಿವೇಕಯುತವಾದ ಪರಿಸರ ಕಾಯಿದೆಗಳ ಅಭಿವೃದ್ಧಿಯ ಕೆಲವು ತತ್ವಗಳನ್ನು ಸೂಚಿಸಿದೆ. ಅವುಗಳಲ್ಲಿ ಮುಖ್ಯವಾದುದೆಂದರೆ, ಸರ್ವೋಚ್ಛ ನ್ಯಾಯಾಲಯವು ರಾಜ್ಯಾಂಗದಲ್ಲಿರುವ ಮಾನವ ಮೂಲಭೂತ ಹಕ್ಕುಗಳನ್ನು ವಿಸ್ತರಿಸಿ ಆರ್ಟಿಕಲ್ 21ನ್ನು ಪರಿಸರ ರಕ್ಷಣೆ ಎಂದು ಇದರಲ್ಲಿ ಸೇರಿಸಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿಗೆ ಶುಭ್ರ ಪರಿಸರವನ್ನು ಅನುಭವಿಸುವ ಹಕ್ಕಿದೆ. ಹೀಗಾಗಿ ಪರಿಸರವನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಯು ಕಾನೂನು ಬಾಹಿರ.
ಆರ್ಟಿಕಲ್ 21, ದಿ ರೈಟ್ ಟು ವೋಲ್ಸಮ್ ಎನ್ವಿರಾನ್ಮೆಂಟ್ ಒಪ್ಪಂದದ ಕಲಮಿನ ಮುಖ್ಯಾಂಶಗಳು ಈ ರೀತಿ ಇವೆ.
• ನದಿ ಕಣಿವೆ ಯೋಜನೆ, ಬೈಜಿಕ ಶಕ್ತಿ ಯೋಜನೆ ಮುಂತಾದ ಪರಿಸರ ನಾಶಗೊಳಿಸುವ ಯೋಜನೆಗಳಿಂದ ಜನರನ್ನು ಎತ್ತಂಗಡಿ ಮಾಡಿ ಅವರ ಜೀವನವನ್ನು ಗೊಂದಲಕ್ಕೀಡುಮಾಡಕೂಡದು. (ಜೀವನೋಪಾಯದ ಹಕ್ಕು-ದಿ ರೈಟ್ ಟು ಲೈವ್ಲಿಹುಡ್)
• ಯಾವುದೇ ಸಂಸ್ಥೆಯು ಕಟ್ಟುನಿಟ್ಟಾಗಿ ಪರಿಸರ ಕಾಯಿದೆಗಳನ್ನು ಪಾಲಿಸಬೇಕು.
• ಸರಕಾರಿ ಸಂಸ್ಥೆಗಳು ಪರಿಸರ ಕಾಯಿದೆಗಳನ್ನು ಪಾಲಿಸಲಾಗದಿದ್ದಲ್ಲಿ ಹಣಕಾಸು, ಮಾನವ ಸಂಪನ್ಮೂಲ ಇತ್ಯಾದಿಗಳ ಕೊರತೆಯ ಕಾರಣವನ್ನು ಕೊಡಬಾರದು.
• ಪರಿಸರ ಮಾಲಿನ್ಯಕ್ಕೆ ಕಾರಣರಾದವರು ಮಲಿನತೆಯನ್ನು ಕಡಿಮೆ ಮಾಡುವ/ ನಿರ್ಮೂಲನ ಮಾಡುವ ವೆಚ್ಚವನ್ನು ಭರಿಸಬೇಕು. ಅಂತೆಯೇ ಮಲಿನತೆಯಿಂದ ಪೀಡಿತರಾದವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು.
• ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಅಧಿಕಾರಿಗಳು ಪರಿಸರ ಮಾಲಿನ್ಯವನ್ನು ಉಹಿಸುವ ತಡೆಗಟ್ಟುವ ಸಾಮಥ್ರ್ಯ ಪಡೆದಿರಬೇಕು. ಕಾರ್ಖಾನೆಗಳು ತಮ್ಮ ಕ್ರಿಯಾ ವಿಧಾನಗಳು, ಪರಿಸರ ಮಾಲಿನ್ಯ ಉಂಟುಮಾಡುವುದಿಲ್ಲವೆಂದು ರುಜುವಾತು ಪಡಿಸಬೇಕು.
• ನಿರ್ಣಾಯಕರು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಪಾರಿಸಾರಿಕ ಅಂಶಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕು.
• ಪರಿಸರ ಕಾಯಿದೆಗಳನ್ನು ಪಾಲಿಸದೇ ಪರಿಸರವನ್ನು ನಾಶಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
• ಪರಿಸರ ಕಾಯ್ದೆಯ ಚೌಕಟ್ಟಿನಲ್ಲಿ ನೀಡಲಾಗಿರುವ ಅಧಿಕಾರವನ್ನು ಪರಿಸರ ರಕ್ಷಣೆಗೆ ಮಾತ್ರವೇ ಬಳಸಬೇಕು.
• ನಿಸರ್ಗದಿಂದ ದೊರೆಯುವ ಎಲ್ಲ ನೈಸರ್ಗಿಕ ಸಂಪನ್ಮೂಲಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ಇವೆ. ರಾಜ್ಯ ರಾಷ್ಟ್ರವು ಅದರ ಪಾರುಪತ್ಯಗಾರಿಕೆ ಮಾತ್ರ ಮಾಡಬೇಕು. ಕರಾವಳಿ, ನೀರು, ಗಾಳಿ, ಅರಣ್ಯ, ಭೂಮಿ ಇವೆಲ್ಲದರಿಂದ ಉಪಯೋಗ ಪಡೆಯುವವರು ಸಾರ್ವಜನಿಕರಷ್ಟೆ. ಈ ಸಂಪನ್ಮೂಲಗಳನ್ನು ಖಾಸಗಿ ಸಂಪತ್ತನ್ನಾಗಿ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ನಮ್ಮ ದೇಶದಲ್ಲಿ ಹಲವಾರು ಪರಿಸರ ಸ್ನೇಹಿ ಕಾಯ್ದೆಗಳಿವೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಕಾಯ್ದೆ 1972, ವಾಯು ಮಾಲಿನ್ಯ ತಡೆ ಕಾಯ್ದೆ 1981, ಭಾರತೀಯ ಅರಣ್ಯ ಕಾಯ್ದೆ 1927, ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ 2002, ತ್ಯಾಜ್ಯ ನಿರ್ವಹಣಾ ಕಾಯ್ದೆ 1989, ಇಕೋ ಮಾರ್ಕ ಯೋಜನೆ 1991 ಹೀಗೆ ಒಂದೇ ಎರಡೇ..
ಸ್ವಾತಂತ್ರ್ಯಾನಂತರ ಪರಿಸರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಮಾರು 200ಕ್ಕೂ ಹೆಚ್ಚು ಕಾನೂನುಗಳನ್ನು, ಪರಿಸರ ಕಾಯಿದೆಗಳನ್ನು ಜಾರಿಗೆ ತಂದಿವೆ. ಇಷ್ಟೆಲ್ಲಾ ಕಾನೂನುಗಳು ಜಾರಿಯಾಗಿದ್ದರೂ ಪರಿಸರ ಶೋಷಣೆ ಮಾತ್ರ ನಿಂತಿಲ್ಲ. ಪರಿಸರ ರಕ್ಷಣೆ ಕಾನೂನಿನಿಂದ ಅಲ್ಲ ಜನರ ಮನೋಭಾವ ಬದಲಾವಣೆಯಿಂದ ಮಾತ್ರ ಸಾಧ್ಯ. ಹಾಗಾಗಿ ಎಲ್ಲರಲ್ಲೂ ಮೂಡಲಿ ಪರಿಸರ ಪ್ರಜ್ಞೆ.
ಡಾ.ಎಚ್.ಎನ್.ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ
ದೇಶದ ಓರ್ವ ಪ್ರಮುಖ ವಿಚಾರವಂತರು. ಶಿಕ್ಷಣತಜ್ಞರು, ಮೌಲ್ಯಗಳ ಪ್ರತಿಪಾದಕರು, ಸತ್ಯ ನೀತಿ ಬೋಧಕರು, ಶೋಧಕರು, ಶಿಸ್ತಿನ ಸಿಪಾಯಿ, ಗಾಂಧಿವಾದಿ ಎನಿಸಿದ ಡಾ.ಎಚ್.ನರಸಿಂಹಯ್ಯನವರು ಒಬ್ಬ ವ್ಯಕ್ತಿಯಾಗಿರಲಿಲ್ಲ, ಬಹು ದೊಡ್ಡ ಶಕ್ತಿಯಾಗಿದ್ದರು. ಅವರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನುವಷ್ಟು ಕ್ರಿಯಾಶೀಲರಾಗಿದ್ದರು. ಬಹುಮುಖ ಪ್ರತಿಭೆಯ ಈ ಸರಳ ಮೂರ್ತಿ ಕೋಲಾರ ಎಂಬಲ್ಲಿ ಬಡಕುಟುಂಬವೊಂದರಲ್ಲಿ ಜೂನ್ 6, 1920ರಂದು ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ. ಪ್ರಾಥಮಿಕ ಶಿಕ್ಷಣವನ್ನು ಹೊಸೂರಿನಲ್ಲಿ ಮುಗಿಸಿ, ತಮ್ಮ ಪ್ರತಿಭೆಯಿಂದ ಗುರುಗಳ ಪ್ರೀತಿ ಗೆದ್ದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾದರು. ಇದೇ ಸಂಸ್ಥೆಯ ಕಾಲೇಜಿನಲ್ಲಿ ಭೌತವಿಜ್ಞಾನ ಬಿ.ಎಸ್ಸಿ ಪದವಿ ಗಳಿಸಿ, 1957ರಲ್ಲಿ ಅಮೆರಿಕೆಯ ಓಹಯೋ ರಾಜ್ಯ ವಿಶ್ವವಿದ್ಯಾಲಯದ ಫುಲ್ಬ್ರೈಟ್ ಗ್ರಾಂಟ್ ನೆರವಿನಿಂದ ಬೈಜಿಕ ಭೌತ ವಿಜ್ಞಾನದಲ್ಲಿ ಪಿಎಚ್ಡಿ ಪದವಿ ಪಡೆದು, ಸ್ವದೇಶಕ್ಕೆ ವಾಪಸಾದರು.
ಬಾಲ್ಯದಲ್ಲಿಯೇ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿದ್ದ ಎಚ್ಎನ್ ಜೂನ್ 11, 1936ರಂದು ಗಾಂಧೀಜಿಯವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಅವರ ಶಿಷ್ಯತ್ವವನ್ನು ಸ್ವೀಕರಿಸಿ ಗಾಂಧಿವಾದಿಯಾದರು. ತಮ್ಮ 22ನೇ ವಯಸ್ಸಿನಲ್ಲಿ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾದರು. ಬೆಂಗಳೂರಿನ ಅಲಸೂರು ಗೇಟ್ ಪೋಲೀಸ್ ಠಾಣೆ ಇವರ ಮೊದಲ ಸೆರೆಮನೆ. ಮತ್ತೆ ಹೋರಾಟದಲ್ಲಿ ಆನೆಕಲ್ ಅತ್ತಿಬೆಲೆ ಸಮೀಪದಲ್ಲಿ ಬಂಧನ. ಬಳಿಕ ಸೆಂಟ್ರಲ್ ಜೈಲು, ಮೈಸೂರು ಜೈಲು ಸೇರಿದಂತೆ ದೇಶದ ದೊಡ್ಡ ಜೈಲೆನಿಸಿದ ಪೂನಾದಲ್ಲಿರುವ ಯರವಾಡಾ ಜೈಲಿನಲ್ಲೂ ಸೆರೆಮನೆ ಶಿಕ್ಷೆ ಅನುಭವಿಸಿದರು.
ದೇಶದಲ್ಲಿ ನುಡಿದಂತೆ ನಡೆದವರು ತೀರಾ ಬೆರಳಣಿಕೆಯಷ್ಟು. ಜೀವನ ಪರ್ಯಂತ ತಾವು ನಂಬಿದ ಹಾಗೂ ಇತರರಿಗೆ ಉಪದೇಶಿಸಿದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಬಾಳುವವರೇ ವಿಶಿಷ್ಟರು. ಅಂತವರ ಸಾಲಿನಲ್ಲಿ ಎಚ್ಎನ್ ಕೂಡ ಒಬ್ಬರು.
ಎಚ್ಎನ್ ವೈಜ್ಞಾನಿಕ ಮನೋಭಾವ ಪ್ರವರ್ತಕರು. ಮೂಢನಂಬಿಕೆಗಳ ವಿರುದ್ಧ ಹೋರಾಡಿದವರು. ಪ್ರಶ್ನಿಸದೇ ಯಾವುದನ್ನೂ ಒಪ್ಪುತ್ತಿರಲಿಲ್ಲ. ಸೂರ್ಯಗ್ರಹಣವಾದಾಗ ಸೂರ್ಯನನ್ನು ರಾಹುವೋ, ಕೇತುವೋ ನುಂಗುವುದು ಎಂಬ ನಂಬಿಕೆ. ಈ ಸಮಯದಲ್ಲಿ ಆಹಾರ ಸೇವನೆ ನಿಷಿದ್ಧ. ಹೀಗೆ ಪುರೋಹಿತಶಾಹಿ ನಿರ್ಮಿಸಿದ ಮೌಢ್ಯದ ಕೋಟೆ. ಇವೆಲ್ಲ ಸ್ವಲಾಭಕ್ಕಾಗಿಯೇ. ವಿಜ್ಞಾನ ಹೇಳುವಂತೆ ಗ್ರಹಣ ಎನ್ನುವುದು ನೈಸರ್ಗಿಕ ಕ್ರಿಯೆ. ಇದರಲ್ಲಿ ಯಾವ ರಾಕ್ಷಸರ ಕೈವಾಡವೂ ಇಲ್ಲ ಎನ್ನುವುದು ಸತ್ಯ. ಈ ಮೂಢನಂಬಿಕೆಯ ವಿರುದ್ಧ ಎಚ್ಎನ್ರವರು ಕೇವಲ ಉಪನ್ಯಾಸ ನೀಡಲಿಲ್ಲ. ಸೂರ್ಯ ಗ್ರಹಣವಾಗುವಾಗ ಹೊರಗೆ ಕುಳಿತು ಗ್ರಹಣಗ್ರಸ್ತ ಸೂರ್ಯನ ಎದುರಿಗೆ ಆಹಾರ ಸೇವಿಸಿದರು. ತಮ್ಮ ಸ್ವಗ್ರಾಮ ಹೊಸೂರಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಭಾಷಣಕ್ಕಿಂತ ಈ ಚರ್ಚೆ ಮಹತ್ತರ ಪರಿಣಾಮ ಬೀರಿತು. ಎಚ್ಎನ್ರ ಜೀವನದ ಉದ್ದಕ್ಕೂ ಇಂತಹ ಪ್ರಸಂಗಗಳಿವೆ.
ಅಪ್ಪಟ ಗಾಂಧಿವಾದಿಯಾಗಿದ್ದ ಎಚ್ಎನ್ ತಾರ್ಕಿಕ ಮನೋಭಾವದವರು. 1943ರಲ್ಲಿ ಮತ್ತೆ ಚಳುವಳಿಗಿಳಿದರು. 1947ರಲ್ಲಿ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಸಹಪಾಠಿ ಕೆ.ಶ್ರೀನಿವಾಸನ್ ಜೊತೆ ಸೇರಿ ‘ಇಂಕ್ವಿಲಾಬ್’ ಎಂಬ ಪತ್ರಿಕೆ ಹೊರಡಿಸಿದರು.
1946ರಿಂದ 1960ರ ಅವಧಿಯಲ್ಲಿ ನ್ಯಾಶನಲ್ ಕಾಲೇಜಿನ ಭೌತ ವಿಜ್ಞಾನ ಉಪನ್ಯಾಸಕರಾಗಿ, 1961ರಿಂದ 1972ರವರೆಗೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ, ವಿಜ್ಞಾನ, ಗಾಂಧಿತತ್ವ, ಕ್ರೀಡೆ, ನಾಟಕ ಈ ರೀತಿ ಎಲ್ಲ ವಿಷಯಗಳಿಗೂ ಪೂರಕವಾದ ವಿಭಾಗಗಳನ್ನು ಸ್ಥಾಪಿಸಿ, ನ್ಯಾಶನಲ್ ಕಾಲೇಜನ್ನು ಸಮರ್ಥವಾಗಿ ಅಭಿವೃದ್ಧಿಪಡಿಸಿದರು. ಅವರ ಅಧಿಕಾರವಧಿಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಹಶಿಕ್ಷಣ, ಅಧ್ಯಾಪಕರ ಹಾಜರಾತಿ ಸಹಿ ಪದ್ಧತಿ. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ವಿಶೇಷ ತರಬೇತಿ ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಇದರಿಂದ ಕಾಲೇಜಿನ ಫಲಿತಾಂಶದಲ್ಲೂ ಸುಧಾರಣೆ ಕಂಡು ಕಾಲೇಜಿಗೆ ವಿಶೇಷ ಮಾನ್ಯತೆ ಸಿಕ್ಕಿತು. ನಂತರ ಗೌರಿಬಿದನೂರು, ಬಾಗೇಪಲ್ಲಿ, ಯಲ್ದೂರು, ಮಡಿಯನೂರು, ಸುಬ್ರಮಣ್ಯಪುರ, ಜಯನಗರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಗಳನ್ನು ತೆರೆದರು.
ಜನರಲ್ಲಿ ವೈಜ್ಞಾನಿಕ ಅರಿವು ನೀಡುವ ಸಲುವಾಗಿ ಬೆಂಗಳೂರು ಸೈನ್ಸ್ ಫೋರಂ(ಬೆಂಗಳೂರು ವಿಜ್ಞಾನ ವೇದಿಕೆ) ಪ್ರಾರಂಭಿಸಿದರು. ಇಲ್ಲಿ ಪ್ರತಿ ಬುಧವಾರ ಸಂಜೆ ವಿಜ್ಞಾನ ಕಾರ್ಯಕ್ರಮಗಳು ನಡೆಯುತ್ತ ಬಂದವು. ಅಲ್ಲದೇ ಪ್ರತೀವರ್ಷ ಒಂದು ತಿಂಗಳ ಕಾಲ ಬೇರೆ ಬೇರೆ ಕ್ಷೇತ್ರದ ವಿಜ್ಞಾನಿಗಳ ಉಪನ್ಯಾಸ ಕಾರ್ಯಕ್ರಮದ ವ್ಯವಸ್ಥೆಯನ್ನು ಅವರು ಜಾರಿಗೆ ತಂದರು.
ಇವರ ಸಾಧನೆಗಳನ್ನು ಗುರುತಿಸಿದ ಸರ್ಕಾರವು 1972ರಿಂದ 1977ರವರೆಗೆ ಇವರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಿಸಿತು. ಇಲ್ಲಿ ಕೂಡ ಎಚ್ಎನ್ರವರು ವಿದ್ಯಾರ್ಥಿಗಳು ಉಪನ್ಯಾಸಕರ ಮೆಚ್ಚುಗೆಗೆ ಪಾತ್ರರಾದರು. ಇವರು ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ, ವಿಸ್ತಾರ, ಘನತೆ ಹೆಚ್ಚಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ವಿಧಾನಸೌಧದಲ್ಲಿಯೂ ಕಾರ್ಯನಿರ್ವಹಿಸಿದರು. ಅಲ್ಲಿ ಎಲ್ಲ ರಾಜಕಾರಣಿಗಳ, ಗಣ್ಯರ ಮೆಚ್ಚುಗೆಗೂ ಪಾತ್ರರಾದರು.
1980ರಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಾಥಮಿಕ ಸ್ಥಾಪಕ ಅಧ್ಯಕ್ಷರಾಗಿ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟರು. ತಮ್ಮ ಕಾರ್ಯದೊತ್ತಡದಲ್ಲಿ ಬೇರೆ ಬೇರೆ ಸಂಸ್ಥೆಗಳ ಕಾರ್ಯನಿರ್ವಹಣೆಯಿಂದ ದೂರವಾಗಿದ್ದರೂ 2004-15ರಲ್ಲಿ ಪುನಃ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಹಾಪೋಷಕರಾಗಿ ಸಂಸ್ಥೆಗೊಂದು ನೆಲೆ ಒದಗಿಸಿದರು. ಬೆಂಗಳೂರು ನಗರದ ಹೃದಯಭಾಗ ಬನಶಂಕರಿ ಎರಡನೇ ಹಂತದಲ್ಲಿ ಬಿಡಿಎ ನಿವೇಶನ ಒದಗಿಸಿ ಕರಾವಿಪದ ಇಂದಿನ ಬೃಹತ್ ಕಟ್ಟಡ ‘ವಿಜ್ಞಾನ ಭವನ’ ಕ್ಕೆ ಸಾಕ್ಷಿಯಾದರು. ಜನರಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಕಂದಾಚಾರ, ಭಾನಾಮತಿ ಇವುಗಳ ಬಗೆಗೆ ಪ್ರಶ್ನೆ ಹುಟ್ಟು ಹಾಕುವ ಪ್ರವೃತ್ತಿಯನ್ನು ಜನಸಾಮಾನ್ಯರಲ್ಲಿ ಬೆಳೆಸಲು ಎಚ್ಎನ್ ನಿರಂತರ ಶ್ರಮಿಸಿದರು. ಪವಾಡ ಮಾಡಿ ಜನರನ್ನು ಮೋಸ ಮಾಡುವವರಿಗೆ ಬಹಿರಂಗವಾಗಿಯೇ ಸವಾಲು ಹಾಕಿದರು. ಪವಾಡಗಳನ್ನು ಬಯಲು ಮಾಡಿದರು.
“ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡಿ” ಎಂಬುವುದು ಇವರ ತತ್ವವಾಗಿತ್ತು. ಜನರಲ್ಲಿ ಪ್ರಶ್ನಿಸುವ ಮನೋಭಾವವನ್ನು ಹುಟ್ಟು ಹಾಕಿದರು. ಪ್ರಶ್ನೆ ಮಾಡುವವ ತಾತ್ಕಾಲಿಕ ಮೂರ್ಖ. ಪ್ರಶ್ನೆ ಕೇಳದವ ಶಾಶ್ವತ ಮೂರ್ಖನಾಗುವ. ಆದ್ದರಿಂದ ಮೂರ್ಖರಾಗುವ ಆಯ್ಕೆಗಳನ್ನು ಜನರ ಎದುರು ತೆರೆದಿಟ್ಟರು. ಇದಕ್ಕೆ ಪ್ರಶ್ನೆ ಮಾಡುವುದೊಂದೇ ಪರಿಹಾರ ಎನ್ನುವುದು ಅವರ ವಾದವಾಗಿತ್ತು.
ಎಚ್ಎನ್ ಶಿಷ್ಯಗಣ ಬಹುದೊಡ್ಡದು. ಸದಾ ಜನಜಂಗುಳಿಯ ಮಧ್ಯದಲ್ಲಿ ನಗುತ್ತಾ ‘ಕುಶಲ ಕುಶಲೋಪರಿ’ ವಿಚಾರಿಸುತ್ತ, ಜನರ ಊಟೋಪಚಾರಗಳನ್ನು ಬಯಸುತ್ತಾ ತಮ್ಮ ಜೀವಮಾನವೆಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿಯೇ ಕಳೆದ ಈ ಮಹಾನುಭಾವರು ವಿದ್ಯಾರ್ಥಿಗಳನ್ನು ಸ್ವತಃ ತಮ್ಮ ಮಕ್ಕಳಂತೇ ಕಂಡವರು. ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ನ್ಯಾಶನಲ್ ಕಾಲೇಜಿನ ಚಿಕ್ಕ ಕೊಠಡಿಯಲ್ಲೇ ಕೊನೆಯವರೆಗೂ ಬದುಕು ನಡೆಸಿದರು. ಒಂದು ಟೆಲಿಫೋನು, ಒಂದು ಚಾಪೆ, ಒಂದು ಚಿಕ್ಕ ಟೇಬಲ್ಲು ಇವೇ ಇವರ ಆಸ್ತಿಗಳು. ಯಾರಾದರೂ ಅತಿಥಿಗಳು ತಂದ ಹಣ್ಣು ಹಂಪಲಗಳು ಅಲ್ಲಿ ಇರುತ್ತಿದ್ದವು. ಬಿಳಿ ಅಂಗಿ, ಪಂಚೆ, ಬಿಳಿ ಟೋಪಿ ಇವರ ಸರಳತೆ ಸಾರುತ್ತವೆ. ಜನಪ್ರೀಯತೆಯ ತುತ್ತತುದಿಗೆ ಏರಿದ್ದ ಎಚ್ಎನ್ ಸರಳತೆಯನ್ನೇ ಬಯಸಿದರು. 1968ರಲ್ಲಿ ಶೈಕ್ಷಣಿಕ ರಂಗದ ಸಾಧನೆಗಾಗಿ ರಾಜ್ಯಪ್ರಶಸ್ತಿ, 1984ರಲ್ಲಿ ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಭೂಷಣ. ಇನ್ನೂ ಹಲವು ಪ್ರಶಸ್ತಿ, ಪುರಸ್ಕಾರ, ಮಾನ, ಸಮ್ಮಾನಗಳು ಇವರನ್ನು ಹುಡುಕಿಕೊಂಡು ಬಂದವು. ಯಾವುದಕ್ಕೂ ಹಿಗ್ಗದೇ ಕುಗ್ಗದೇ ಸಾರ್ವಜನಿಕ ಕ್ಷೇತ್ರದಲ್ಲಿ ಮೌಲ್ಯಾಧಾರಿತ ಬದುಕು ಸಾಗಿಸಿದ ಧೀಮಂತ ಎಚ್ಎನ್ ನಮಗೆಲ್ಲ ಆದರ್ಶಪ್ರಾಯರು.
ವಿಜ್ಞಾನ ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವದ ಪಾತ್ರ
ಲೇಖನ: ಡಾ.ಲಿಂಗರಾಜ ರಾಮಾಪೂರ
ಶಿಕ್ಷಕ ಸಾಹಿತಿಗಳು
ಸರಕಾರಿ ಪ್ರೌಢಶಾಲೆ, ಕಿರೇಸೂರ. ತಾ.ಹುಬ್ಬಳ್ಳಿ
ಮೊ:9964571330
ಪ್ರಕೃತಿಯ ಘಟನೆಗಳನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವುದೇ ವಿಜ್ಞಾನದ ಉದ್ದೇಶ. ವಿಜ್ಞಾನ ಅಂದರೆ ಸತ್ಯಾನ್ವೇಷಣೆ. ಇಂತಹ ತಿಳುವಳಿಕೆ ಶತಮಾನಗಳ ಹಿಂದೆಯೇ ಮೊದಲಾಗಿ ಈಗ ಹೆಚ್ಚು ವ್ಯವಸ್ಥಿತವಾಗಿ ಬೆಳೆದುಕೊಂಡು ಬಂದಿದೆ. ಈ ಶತಮಾನದಲ್ಲಿ ವಿಜ್ಞಾನ ನಾಗಾಲೋಟದಿಂದ ಸಾಗುತ್ತಿದೆ. ತಂತ್ರಜ್ಞಾನವೂ ಅಷ್ಟೇ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನಜೀವನದ ಹಾಸು ಹೊಕ್ಕಾಗಿವೆ. ಇವುಗಳಿಲ್ಲದೇ ಜೀವನ ನಡೆಸುವುದು ಸಾಧ್ಯವಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನದ ಬೋಧನೆ ಪ್ರಧಾನ ಸ್ಥಾನವನ್ನು ಪಡೆದಿದೆ. ಪ್ರಾಥಮಿಕ ಹಂತದ ಮೂರನೆಯ ತರಗತಿಯಿಂದಲೇ ವಿಜ್ಞಾನ ವಿಷಯಗಳ ಪ್ರಸ್ತಾಪ, ಬೋಧನೆ ಮಾಡಲಾಗುತ್ತಿದೆ. ಏಳನೆಯ ತರಗತಿ ಮುಗಿಯುವ ತನಕ ವಾರಕ್ಕೆ ಆರೇಳು ಪೀರಿಯಡ್ ಗಳಂತೆ ವಿಜ್ಞಾನದ ಪಾಠ ಪ್ರವಚನ ಸಾಗುತ್ತಿದೆ. ಅಂತೆಯೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಶಿಕ್ಷಣ ಪದ್ಧತಿಯ ಅಂಗವಾಗಿ ವ್ಯವಸ್ಥಿತವಾಗಿ ಕಲಿಯುತ್ತಾರೆ. ಎಲ್ಲ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ವಿಜ್ಞಾನ ಮತ್ತು ಗಣಿತ ಕಲಿಕೆ ಕಡ್ಡಾಯ. ಈ ವಿದ್ಯಾರ್ಥಿಗಳು ವಾರಕ್ಕೆ ಒಟ್ಟು ಹನ್ನೆರಡು ಪೀರಿಯಡ್ಗಳಂತೆ ಈ ವಿಷಯವನ್ನು ಮೂರು ವರ್ಷ ಕಲಿಯುತ್ತಾರೆ. ಅಂದರೆ ಹತ್ತನೇ ತರಗತಿ ಮುಗಿಸುವ ಎಲ್ಲಾ ವಿದ್ಯಾರ್ಥಿಗಳೂ ಎಂಟು ವರ್ಷ ಕಾಲ ವಿಜ್ಞಾನ ಕಲಿಕೆಯಲ್ಲಿ ತೊಡಗುತ್ತಾರೆ. ಪ್ರಿಯೂನಿವರ್ಸಿಟಿ ಹಂತದಲ್ಲಿ ವಿಜ್ಞಾನದ ವಿಷಯಗಳು ಐಚ್ಛಿಕ. ಮುಂದೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತಶಾಸ್ತ್ರಗಳಾಗಿ ವಿಜ್ಞಾನವನ್ನು ವಿದ್ಯಾರ್ಥಿಗಳು ಅಭ್ಯಸಿಸುತ್ತಾರೆ. ಎಲ್ಲ ವಿದ್ಯಾವಂತರಿಗೂ ವಿಜ್ಞಾನ ವಿಷಯಗಳ ಪರಿಚಯವಾಗಿರುತ್ತದೆ. ಆದರೆ ಎಷ್ಟರ ಮಟ್ಟಿಗೆ ವೈಜ್ಞಾನಿಕ ಮನೋಭಾವ ಹೊಂದಿದ್ದಾರೆ ಎಂಬುವುದನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ.
ವಿಜ್ಞಾನವೇ ಬೇರೆ. ವೈಜ್ಞಾನಿಕ ಮನೋಭಾವವೇ ಬೇರೆ. ಎರಡನ್ನೂ ಒಂದೇ ಅರ್ಥದಲ್ಲಿ ನೋಡಲು ಸಾಧ್ಯವಿಲ್ಲ. ವಿಜ್ಞಾನಕ್ಕೂ ವೈಜ್ಞಾನಿಕ ಮನೋಭಾವಕ್ಕೂ ಹಲವು ವಿಶೇಷವಾದ ಲಕ್ಷಣಗಳಿವೆ. ವೈಜ್ಞಾನಿಕ ಮನೋಭಾವದಿಂದ ಕೂಡಿರುವವನು ಯಾವುದನ್ನೂ ಯಾಂತ್ರಿಕವಾಗಿ ಒಪ್ಪುವುದಿಲ್ಲ. ಪ್ರತಿಯೊಂದನ್ನೂ ಪ್ರಶ್ನಿಸಿ, ಪರೀಕ್ಷಿಸಿ, ತಾಳೆನೋಡಿ ವಿಷಯದ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯತ್ನಿಸುತ್ತಾನೆ. ಇಂತಹವನು ವಿಷಯದ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯತ್ನಿಸುತ್ತಾನೆ. ಇಂತಹ ಮನೋಭಾವದ ಮೇಲೆ ರೂಪುಗೊಂಡ ಅಭಿಪ್ರಾಯಗಳು, ನಿಯಮಗಳು ತಾತ್ಕಾಲಿಕ. ಆಗಿನ ಕಾಲಕ್ಕೆ ಅವು ಸತ್ಯ. ಹೊಸ ಅಂಕಿ ಅಂಶಗಳು, ಸಂಶೋಧನೆ, ಮಾಹಿತಿ ಅನುಭವದ ಆಧಾರದ ಮೇಲೆ ಈ ನಿಯಮಗಳು ಬದಲಾಗಬಹುದು. ಇಂತಹ ಬದಲಾವಣೆಗಳನ್ನು ವೈಜ್ಞಾನಿಕ ಮನೋಭಾವ ಹೊಂದಿದವನು ಸಲೀಸಾಗಿ, ಸಂತೋಷದಿಂದ ಒಪ್ಪುತ್ತಾನೆ.
ಭಾರತ ಸಂವಿಧಾನದಲ್ಲಿ ಪ್ರಜೆಗಳ ಮೂಲ ಕರ್ತವ್ಯಗಳು ಎಂಬ ಒಂದು ಮುಖ್ಯವಾದ ಅಧ್ಯಾಯವಿದೆ. ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಆ ಮೂಲ ಕರ್ತವ್ಯಗಳನ್ನು ಕಾರ್ಯಗತ ಮಾಡಬೇಕೆಂಬ ಆದೇಶವಿದೆ. ಈ ಹತ್ತು ಮೂಲ ಕರ್ತವ್ಯಗಳಲ್ಲಿ ಒಂದು ಈ ರೀತಿಯಾಗಿದೆ. “ವೈಜ್ಞಾನಿಕ ಮನೋಭಾವ ಮಾನವೀಯತೆ, ವೈಚಾರಿಕತೆ ಮತ್ತು ಸುಧಾರಣ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕಾದದ್ದೂ ಪ್ರತಿಯೊಬ್ಬ ಪ್ರಜೆಯ ಮೂಲ ಕರ್ತವ್ಯ” ಅಂದಮೇಲೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕೆ ಸಂವಿಧಾನದ ಸಂಪೂರ್ಣ ಬೆಂಬಲವಿದೆ.
ಶಿಕ್ಷಣದ ಉದ್ದೇಶ ಬರೀ ಸಾಕ್ಷರತೆ ಅಲ್ಲ. ಜನರ ಜೀವನವನ್ನು ಉತ್ತಮಪಡಿಸುವುದು ಆಗಿದೆ. ಇಡೀ ದೇಶದ ಆಡಳಿತ, ನ್ಯಾಯದಾನ, ಉತ್ಪಾದನೆ ಎಲ್ಲದಕ್ಕೂ ಸಾಕ್ಷರತೆ, ಶಿಕ್ಷಣ ಅನಿವಾರ್ಯ. ಶಿಕ್ಷಣದಿಂದ ದೇಶದ ಜನರ ಕೌಶಲ್ಯಗಳು ಹರಿತವಾಗುತ್ತವೆ. ದೇಶದ ಉತ್ಪಾದನಾ ಸಾಮಥ್ರ್ಯ ಹೆಚ್ಚಾಗುತ್ತದೆ. ಸಾಕ್ಷರತೆಗೂ ಮುಖ್ಯವಾಗಿ ಮಹಿಳೆಯರ ಒಟ್ಟಾರೆ ಸಾಕ್ಷರತೆಗೂ ಜನಸಂಖ್ಯಾ ನಿಯಂತ್ರಣವಷ್ಟೇ ಅಲ್ಲ, ಶಿಶುಮರಣ ಸಂಖ್ಯೆ, ತಾಯಿಮರಣ ಸಂಖ್ಯೆ ಇತ್ಯಾದಿ ಆರೋಗ್ಯ ಸೂಚಿಗಳಲ್ಲಿ ಅಭೂತಪೂರ್ವ ನಿಯಂತ್ರಣ ಸಾಧಿಸಿರುವುದು ಕಂಡುಬರುತ್ತದೆ. ಇದನ್ನರಿತೇ ಸರಕಾರ ಸಾಕ್ಷರತೆ, ಶಿಕ್ಷಣದ ಮಟ್ಟವನ್ನು, ಗುಣವತ್ತತೆಯನ್ನು ಹೆಚ್ಚಿಸಲು ಏನೆಲ್ಲಾ ಪರಿಶ್ರಮವನ್ನು ಮಾಡಿದೆ, ಬಿಲಿಯನ್ನಗಟ್ಟಲೇ ರೂಪಾಯಿ ವ್ಯಯ ಮಾಡುತ್ತಿದೆ.
ಅಕ್ಷರದ ಸಾಕ್ಷರತೆಯಂತೆಯೇ ಇಂದು ವಿಜ್ಞಾನ ಸಾಕ್ಷರತೆಯೂ ತುರ್ತಾಗಿ ಬೇಕಾಗಿದೆ. ವಿಜ್ಞಾನ ತಂತ್ರಜ್ಞಾನ ಇಂದು ಬೆಳೆದಿರುವ ಸ್ವರೂಪ ನೋಡಿದರೆ ಅದರ ವಲಯದಿಂದ ದೇಶದ ಯಾವ ನಾಗರಿಕನೂ ಉಳಿಯಲು ಸಾಧ್ಯವಿಲ್ಲ. ಮಾನವನ ಬದುಕಿನ ಎಲ್ಲ ವೈಯಕ್ತಿಕ ಮತ್ತು ಸಾಮುದಾಯಿಕ ಆಯಾಮಗಳಲ್ಲಿ ವಿಜ್ಞಾನ ತಂತ್ರಜ್ಞಾನವು ಆವರಿಸಿಕೊಂಡಿದೆ. ಮಾಹಿತಿ, ಶಿಕ್ಷಣ, ಮನರಂಜನೆ, ಜಾಗೃತಿ, ಸಾರಿಗೆ, ಕೃಷಿ ಮತ್ತು ಇತರ ಕಸಬುಗಳು, ಉತ್ಪಾದನೋದ್ಯಮಗಳು, ಚುನಾವಣೆ, ಸರಕಾರ ರಚನೆ ಮತ್ತು ನಿರ್ವಹಣೆ ಎಲ್ಲ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ದೇಶದ ಎಷ್ಟು ಜನ ವಿಜ್ಞಾನ ಸಾಕ್ಷರತೆಯನ್ನು ಹೊಂದಿರುತ್ತಾರೋ ಅಷ್ಟು ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಸಾಧ್ಯ. ಇತರ ಕ್ಷೇತ್ರಗಳಲ್ಲಿ ಅವುಗಳ ಬಳಕೆ ಮತ್ತು ಅದರಿಂದ ಅಭಿವೃದ್ಧಿ ಸುಲಭವಾಗುತ್ತದೆ, ಪರಿಣಾಮಕಾರಿಯಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಳ್ಳುವಂಥ ಯಾವುದೇ ವಸ್ತು, ವಿದ್ಯಮಾನಗಳು ನಿಗೂಢವಾಗಿ ತೋರದೇ, ಅವು ಕೆಲವರಿಗಷ್ಟೇ ಒಲಿಯುವ ಪವಾಡಗಳೆಂಬ ಭಾವನೆಯನ್ನು ತಾಳದೇ, ಅವುಗಳ ಕುರಿತು ಕನಿಷ್ಠವಾದರೂ ಅರಿವು, ಅವುಗಳ ಮೇಲೆ ನಿಯಂತ್ರಣ ಇರುವುದೇ ಮೂಲಭೂತವಾಗಿ ವಿಜ್ಞಾನ ಸಾಕ್ಷರತೆ ಎಂದು ಭಾವಿಸಬಹುದು. ಪ್ರಾಕೃತಿಕ ಜಗತ್ತು ಮತ್ತು ಅದರಲ್ಲಾಗುತ್ತಿರುವ ಬೆಳವಣಿಗೆ ಮತ್ತು ಮಾನವ ಚಟುವಟಿಕೆಯ ಮೂಲಕ ಅದರಲ್ಲಿ ತರಲಾಗಿರುವ ಬದಲಾವಣೆಗಳ ಕುರಿತು ಪ್ರಶ್ನೆಗಳನ್ನು ಎತ್ತಲು, ಪುರಾವೆಗಳನ್ನು ಆಧರಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ತನ್ನ ವೈಜ್ಞಾನಿಕ ಅರಿವನ್ನು ಬಳಸುವ ಸಾಮಥ್ರ್ಯವನ್ನು ವಿಜ್ಞಾನ ಸಾಕ್ಷರತೆ ಎನ್ನಬಹುದು.
ಶಾಲೆಗಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆ
ಮಗು ಯಾವಾಗ ಮಾತನ್ನು ಕಲಿಯುತ್ತದೆ ಆಗ ಅದು ನೇರ, ವಾಸ್ತವ ಅನುಭವವಲ್ಲದೇ ಭಾಷೆಯಲ್ಲಿಯೂ ಪ್ರಪಂಚದ ಅರಿವನ್ನು ಪಡೆಯತೊಡಗುತ್ತದೆ. ಈ ಹಂತದಲ್ಲಿ ಅದು ದೊಡ್ಡವರ ಮಾತನ್ನು ನಂಬತೊಡಗುತ್ತದೆ. ಏಕೆಂದರೆ ಇಂದ್ರಿಯಗಳಿಂದ ಅನುಭವಿಸಿಯೇ ನೋಡಲು ಆಗ ಅನೇಕ ಸಂಗತಿಗಳು ಲಭ್ಯವಿರುವುದಿಲ್ಲ. ಆದ್ದರಿಂದ ದೊಡ್ಡವರ ಅಧಿಕಾರವಾಣಿಯನ್ನು ನಂಬುವುದು ಅನಿವಾರ್ಯವಾಗುತ್ತದೆ. ಮನುಷ್ಯ ಭಾಷೆಯಲ್ಲಿ ಸುಳ್ಳು ಹೇಳಲು ಸಾಧ್ಯ. ದೊಡ್ಡವರ ಅವೈಚಾರಿಕ ನಂಬಿಕೆಗಳೂ ಇಲ್ಲಿ ಸೇರಿಕೊಳ್ಳುತ್ತವೆ. ಅಂತೂ ಬಹಳ ಬೇಗನೇ ಮೊದಲು ಅಪ್ಪಟ ವಿಜ್ಞಾನಿಯಂತಿದ್ದ ಮಗು ದೊಡ್ಡವರಂತೆ ಮೂಢಾಚರಣೆಯ ವ್ಯಕ್ತಿಯಾಗಿಬಿಡುತ್ತದೆ.
ಆದರೂ ಮಕ್ಕಳ ಮನೋಭಾವ, ವ್ಯಕ್ತಿತ್ವ, ವರ್ತನೆಗಳು ಇನ್ನೂ ರೂಪುಗೊಳ್ಳುವ ಗತಿಶೀಲತೆಯ ಹಂತದಲ್ಲಿ ಇರುವುದರಿಂದ ಅವರನ್ನು ಮತ್ತೊಮ್ಮೆ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸಿ, ನೆಲೆಗೊಳಿಸುವುದು ಹೆಚ್ಚು ಸುಲಭವೆಂದು ಹೇಳಬಹುದು. ಮನೆಯಲ್ಲಿಯೇ ಪೋಷಕರು ಸ್ವತಃ ವೈಜ್ಞಾನಿಕ ಮನೋವೃತ್ತಿವುಳ್ಳವರಾಗಿದ್ದರೆ ಮಕ್ಕಳೂ ಸಹಜವಾಗಿಯೇ ಅವರ ಸ್ವಭಾವವನ್ನೇ ಬೆಳೆಸಿಕೊಂಡಿರುತ್ತಾರೆ. ಆಗಲೂ ಶಾಲಾ ಪರಿಸರದಲ್ಲಿ ಅವರು ಇತರರ ಮೂಢಾಚರಣೆಗಳನ್ನು ಎದುರಿಸಿ, ಅದರಿಂದ ಬಚಾವಾಗಬೇಕಾಗುತ್ತದೆ. ಮನೆಯಲ್ಲಿ ಪೋಷಕರು ಅತಾರ್ಕಿಕ ಆಚರಣೆಗಳಿಗೆ ಪಕ್ಕಾಗಿದ್ದರೆ ಬಹುಶಃ ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿ ಶಾಲೆಗಳ ಮೇಲೆ ಬೀಳುತ್ತದೆ.
ಶಾಲೆಗಳಲ್ಲಿಯೂ ವಾತಾವರಣ ಸಾಂಪ್ರದಾಯಿಕವಾಗಿರುವ ಸಂದರ್ಭಗಳೇ ಹೆಚ್ಚು. ಮೊದಲು ಶಾಲೆಗಳನ್ನು ಮತಾಚರಣೆ ಮುಕ್ತವಾದ ಸಾರ್ವತ್ರಿಕ ತಾಣಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಸರಕಾರಿ ಶಾಲೆ ಕಾಲೇಜುಗಳಷ್ಟೇ ಅಲ್ಲ, ಖಾಸಗೀ ಶಾಲೆಗಳೂ ಜಾತ್ಯಾತೀತ ಅಸಂಪ್ರದಾಯಿಕ ಸಂಸ್ಥೆಗಳಾಗಿರಬೇಕು. ಏಕೆಂದರೆ ಯಾವುದೇ ಶಾಲೆಯಾಗಿರಲಿ ಅಲ್ಲಿ ಹುಟ್ಟಿನಿಂದ ವಿವಿಧ ಧರ್ಮ, ಮತ, ಜಾತಿ, ನಂಬಿಕೆಗಳ ಹಿನ್ನಲೆಯಿಂದ ಬಂದಿರುವ ಮಕ್ಕಳು ಇರುತ್ತಾರೆ. ಇಲ್ಲಿ ಯಾವುದೇ ಒಂದು ಮತಕ್ಕೆ ಸಂಬಂಧಿಸಿದ ಆಚರಣೆಗಳನ್ನು ಇರಿಸಿಕೊಂಡರೆ ಉಳಿದವರ ಭಾವನೆಗಳಿಗೆ ಅದು ಧಕ್ಕೆಯುಂಟು ಮಾಡುತ್ತದೆ. ಮುಕ್ತವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕಾಗಿರುವುದರಿಂದ ಉದ್ದೇಶಕ್ಕೆ ಮತಾಚರಣೆಗಳು ಅಡ್ಡಿಯುಂಟು ಮಾಡುತ್ತವೆ.
ಶಾಲೆಯ ಇಡೀ ವಾತಾವರಣವನ್ನೇ ಜಾತ್ಯಾತೀತವಾದ ವೈಜ್ಞಾನಿಕ ವಿಧಾನ, ಮನೋಭಾವದಿಂದ ಉತ್ತೇಜಿತವಾದ ರೀತಿಯಲ್ಲಿ ನಿರ್ಮಾಣ ಮಾಡುವುದರ ಜೊತೆಯಲ್ಲಿ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷವಾದ ಪ್ರಯತ್ನಗಳೂ ನಡೆಯಬೇಕಾಗುತ್ತವೆ. ಶಾಲೆಗಳಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಹಲವು ಮಟ್ಟಗಳಲ್ಲಿ ವಿಜ್ಞಾನ ಭಾಷಣ, ಸ್ಪರ್ಧೆಗಳು, ಮಕ್ಕಳೇ ಮಾಡಿದ ವಿಜ್ಞಾನ ಆಟಿಕೆಗಳು, ಪ್ರಯೋಗಗಳು, ಕಾರ್ಯಯೋಜನೆಯ ಪ್ರದರ್ಶನ, ವಿಜ್ಞಾನ ವಿಡಿಯೋ, ನಾಟಕಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇವೆಲ್ಲವೂ ವೈಜ್ಞಾನಿಕ ಮಾಹಿತಿ ಮತ್ತು ಕೌಶಲ್ಯವನ್ನು ಬೆಳೆಸುತ್ತವೆಯೇ ವಿನಃ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರಲ್ಲಿ ಹೆಚ್ಚಿನ ಮಟ್ಟಿಗೆ ಸಹಾಯಕವಾಗುವುದಿಲ್ಲ. ಅದಕ್ಕಾಗಿಯೇ ವಿಶೇಷ ಪ್ರಯತ್ನಗಳು ನಡೆಯಬೇಕು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕು. ದೈನಂದಿನ ಬದುಕಿನಲ್ಲಿಯೂ ಅವರು ವಿಜ್ಞಾನ ವಿಧಾನವನ್ನು ಅನಾಯಾಸ ಅಳವಡಿಸಿಕೊಳ್ಳುವಂತೆ ಮಾಡಬೇಕು. ಅದರ ಪ್ರಯೋಜನವನ್ನು ಅವರು ತಮ್ಮ ಶೈಕ್ಷಣಿಕ ಸಾಧನೆಯಲ್ಲೂ ಬಳಸಿಕೊಳ್ಳಬೇಕು. ಇದೆಲ್ಲವುಗಳ ಮೂಲಕ ಅವರಲ್ಲಿ ವೈಜ್ಞಾನಿಕ ಮನೋವೃತ್ತಿ ಬೆಳೆಯುವುದಕ್ಕೆ ಪ್ರೇರಕವಾಗಬೇಕು. ಮೊದಲನೆಯದಾಗಿ ಈ ಪ್ರಯತ್ನ ಆದಷ್ಟು ಪಠ್ಯಕ್ರಮದಿಂದ ಹೊರಗೆ ಅನೌಪಚಾರಿಕ ಪರಿಸರದಲ್ಲಿ ನಡೆಯಬೇಕು. ಶಿಕ್ಷಕರು ಶಾಲೆಯ ವಾತಾವರಣದಲ್ಲಿ ನಡೆಸಿದರೂ ಮಕ್ಕಳೊಂದಿಗೆ ಸ್ನೇಹಿತರಾಗಿರಬೇಕು. ಇದು ಬೋಧನೆಯ ಇನ್ನೊಂದು ಹೊರೆಯಾಗಿರದೇ ಮಕ್ಕಳೆ ತಾವು ಮಾಡುವುದರಲ್ಲಿ ತೊಡಗಿ ತಪ್ಪು ಸರಿಗಳನ್ನು ಮಾಡುತ್ತಾ, ಅನುಭವಿಸುತ್ತಾ ಕಲಿಕೆಯನ್ನು ವೃದ್ಧಿಗೊಳಿಸುವ ಅವಕಾಶವನ್ನು ಕಲ್ಪಿಸಬೇಕು. ಶಿಕ್ಷಕರು ಕೇವಲ ಸಂಚಾಲಕರಾಗಿರಬೇಕು.
ಎರಡನೇಯದಾಗಿ ಮಕ್ಕಳನ್ನು ಯಾವುದಾದರೂ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಕ್ರಿಯೆಯಲ್ಲಿ ತೊಡಗಿಸಬೇಕು. ಸಮಸ್ಯೆ ತುಂಬ ಸರಳವಾಗಿರಬೇಕು. ಅವರ ಪರಿಸರದಲ್ಲಿಯೇ ಇರಬೇಕು. ಅವರಿಗೆ ನೇರವಾಗಿ ಸಂಬಂಧಿಸಿದ್ದಾಗಿರಬೇಕು. ಮತ್ತು ಅದರ ಪರಿಹಾರವೂ ಸರಳವಾಗಿರಬೇಕು.
Tuesday, 31 March 2020
ಶತಮಾನದ ಕೊನೆಯ ಶುಕ್ರ ಸಂಕ್ರಮ
ಶತಮಾನದ ಕೊನೆಯ ಶುಕ್ರ ಸಂಕ್ರಮ.
ಲೇಖನ-ಡಾ.ಲಿಂಗರಾಜ ರಾಮಾಪೂರ
ಶತಮಾನದ
ಅಪರೂಪದ ಶುಕ್ರಸಂಕ್ರಮ ಜೂನ್ 6 ರಂದು ಸಂಭವಿಸಲಿದೆ.
ಈ ಹಿಂದೆ 2004 ರಲ್ಲಿ
ಶುಕ್ರಸಂಕ್ರಮ ಸಂಭವಿಸಿತ್ತು. ಮನುಷ್ಯ ಮೊದಲು ಶುಕ್ರಸಂಕ್ರಮವನ್ನು
ಗಮನಿಸಿದ್ದು 1939 ರಲ್ಲಿ. ನಂತರ 1761-1769 ರಲ್ಲಿ
1874-1882, 2004-2012 ಹೀಗೆ
ಶುಕ್ರಸಂಕ್ರಮ 2117 ರ ಡಿಸೆಂಬರ್ !!!. ಕಾರಣ
ಶತಮಾನದ ಕೊನೆಯ ಶುಕ್ರಸಂಕ್ರಮ ಇದಾಗಿದ್ದು,
ಮುಂದಿನ ಶುಕ್ರಸಂಕ್ರಮಕ್ಕಾಗಿ 115 ವರ್ಷ ಕಾಯಬೇಕು. ಶುಕ್ರಸಂಕ್ರಮ
ಏನು ಎಂದು ಈ ವಿಶೇಷ
ಲೇಖನ.
ಒಲವಿನ
ದೇವತೆಯ ಸಂಕೇತವಾದ ಶುಕ್ರಗ್ರಹ ಹಾಗೂ ಪ್ರಖರವಾಗಿ ಹೊಳೆಯುವ
ಸೂರ್ಯನಕ್ಷತ್ರದ ಮಹತ್ತರ ಕೂಟವೇ ಶುಕ್ರಸಂಕ್ರಮ.
ಇದು ಖಗೋಳ ವಿಜ್ಞಾನದಲ್ಲಿ ಅಪೂರ್ವ
ಘಟನೆ. ಈಗ ಬದುಕಿರುವವರಲ್ಲಿ ಯಾರೂ
ನೋಡಿಲ್ಲದಂತಹ ಅಪರೂಪ ದೃಶ್ಯ. ಈ
ರೀತಿಯ ಅನೇಕ ವಿಶೇಷಣಗಳಿಂದ ಕರೆಯಲ್ಪಡುವ
ಘಟನೆಯೇ ಶುಕ್ರಸಂಕ್ರಮ. ಇದು ಜೂನ 8, 2004 ರಂದು
ಸಂಭವಿಸಿತ್ತು. ಭಾರತದಾದ್ಯಂತ ಹಗಲಿನಲ್ಲಿ ಕಂಡು ಬಂದ ಈ
ಘಟನೆಯನ್ನು ಖಗೋಳಾಸಕ್ತರು ವೀಕ್ಷಿಸಿದರು. ಮತ್ತೊಮ್ಮೆ ಇಂತಹದೇ ಘಟನೆಯನ್ನು ವೀಕ್ಷಿಸುವ
ಅವಕಾಶ ಜೂನ್ 6, 2012 ಬುಧವಾರ ಬೆಳಿಗ್ಗೆ 7 ರಿಂದ
10:20 ರ ವರೆಗೆ ದೊರೆಯಿತು.
ಅಂದು ಭೂಮಿ, ಶುಕ್ರ
ಮತ್ತು ಸೂರ್ಯ ಒಂದೇ ಸರಳ
ರೇಖೆಯಲ್ಲಿರುತ್ತವೆ. ಆಗ ಭೂಮಿಯ ಮೇಲಿರುವ
ನಮಗೆ ಶುಕ್ರಗ್ರಹವು ಸೂರ್ಯನ ಮೇಲೆ ಹಾದೂ
ಹೋಗುವ ದೃಶ್ಯ ಗೋಚರಿಸುವುದು. ಆಗಾಧ
ಗಾತ್ರದ ಸೂರ್ಯನ ಜೊತೆ ಬೆಳ್ಳಿ
ಚುಕ್ಕಿ ಒಂದು “ಕಪ್ಪು ಚುಕ್ಕೆ”
ಯಂತೆ ಕಾಣುವುದು ಇಲ್ಲಿನ ವಿಶೇಷ.
ಈ ಘಟನೆ ನಡೆಯುವಾಗ ಶುಕ್ರಗ್ರಹದ
ಗಾತ್ರ ಕೇವಲ ಒಂದು ಆರ್ಕ್ಮಿನಿಟ್. ಹೀಗಾಗಿ ಅಂದು
ಸೂರ್ಯಗ್ರಹಣವಾಗುವುದಿಲ್ಲ. ಬದಲಿಗೆ ಕಪ್ಪು ಚುಕ್ಕೆಯೊಂದು,
ಸೌರಕಲೆಯಂತೆ ಸೂರ್ಯಬಿಂಬದ ಒಂದು ಅಂಚಿನಿಂದ ಮತ್ತೊಂದರತ್ತ
ಸಾಗುತ್ತದೆ. ಎಂಟು ವರ್ಷಗಳ ಹಿಂದೆ
ನಮ್ಮ ದೇಶದಲ್ಲಿ ಸಂಪೂರ್ಣ ಸಂಕ್ರಮವನ್ನು ಆರುಗಂಟೆಗಳ
ಕಾಲ ನೋಡುವ ಅವಕಾಶವಿತ್ತು.
ವಿಶ್ವವಿಖ್ಯಾತ ಜರ್ಮನ್ ಭೌತ ವಿಜ್ಞಾನಿ
ಕೆಪ್ಲರ್. ಇಂತಹ ಘಟನೆ ಡಿಸೆಂಬರ್
6, 1631 ರಲ್ಲಿ ಸಂಭವಿಸಲಿದೆ ಎಂದು ಲೆಕ್ಕಹಾಕಿದ್ದ. ಘಟನೆ
ಸಂಭವಿಸಿದಾಗ ಕೆಪ್ಲರ ಬದುಕಿರಲಿಲ್ಲ. ಸಂಕ್ರಮದ
ಕೊನೆಯ ಹಂತ ಮುಂಜಾನೆ ಸೂರ್ಯೋದಯವಾದಾಗ
ಸಂಭವಿಸಿತ್ತು. ಯುದ್ಧದಿಂದಾಗಿ ಯಾರೂ ಇದನ್ನು ನೋಡಲಿಲ್ಲ.
ಪಿಯರೆ ಗಸೆಂಡಿ ಎಂಬ ಫ್ರೆಂಚ್
ವಿಜ್ಞಾನಿ ಪ್ಯಾರಿಸ್ನಲ್ಲಿ ಇದನ್ನು ನೋಡುವ
ಪ್ರಯತ್ನ ಮಾಡಿದ್ದ.
1639 ರಲ್ಲಿ ಸಂಭವಿಸಿದ ಶುಕ್ರ
ಸಂಕ್ರಮ ಯಾರ ಗಮನಕ್ಕೂ ಬರಲೇ
ಇಲ್ಲ. ಕೇಪ್ಲರ ಇದನ್ನು ಪೂರ್ವಭಾವಿಯಾಗಿ
ತಿಳಿಸಿರಲಿಲ್ಲ. ಇಂಗ್ಲೆಂಡಿನಲ್ಲಿ ಮಾತ್ರ ಜೆರೇಮಿಯಾ ಹೋರಾಕ್ಸ್
ಎಂಬ ಖಗೋಳ ವಿಜ್ಞಾನಿ ಸ್ವತಂತ್ರವಾಗಿ
ಸಂಕ್ರಮದ ದಿನವನ್ನು ಲೆಕ್ಕ ಹಾಕಿದ್ದ. 17ನೇ
ಶತಮಾನದಲ್ಲಿ ಉಪೇಕ್ಷೆಗೊಳಗಾಗಿದ್ದ ಶುಕ್ರ ಸಂಕ್ರಮದ ವೀಕ್ಷಣೆ
ಮತ್ತೆ ಪ್ರಾಮುಖ್ಯತೆ ಪಡೆದಿದ್ದು 18ನೇಯ ಶತಮಾನದಲ್ಲಿ. ಇಂಗ್ಲೀಷ್
ಖಗೋಳವಿಜ್ಞಾನಿ ಹ್ಯಾಲಿ. ಶುಕ್ರ ಸಂಕ್ರಮದ
ಅಭ್ಯಾಸದಿಂದ ಖಗೋಳಮಾನ ಮತ್ತು ಸೂರ್ಯರ
ನಡುವಿನ ದೂರವನ್ನು ಕಂಡುಹಿಡಿಯಬಹುದೆಂದು ಪ್ರತಿಪಾದಿಸಿದ.
ಬುಧಗ್ರಹ ಸಂಕ್ರಮ ಆಗಾಗ್ಗೆ
ಅಂದರೆ ಶತಮಾನದಲ್ಲಿ 13 ಸಾರಿ ಸಂಭವಿಸಿದರೂ ಅದರ
ಲಂಬನ ತೀರಾ ಕಡಿಮೆ. ಸರಿಯಾಗಿ
ಗೋಚರಿಸುವುದೂ ಇಲ್ಲ. ಹೀಗಾಗಿ ಹೆಚ್ಚು
ಉಪಯೋಗವಿಲ್ಲ. ಶುಕ್ರ ಸಂಕ್ರಮ ತೀರಾ
ವಿರಳ. ಮುಂದಿನ ಶುಕ್ರ ಸಂಕ್ರಮ
1761 ಮತ್ತು 1769ರಲ್ಲಿ ಸಂಭವಿಸಲಿದೆ ಎಂದು
ಹ್ಯಾಲಿ ಲೆಕ್ಕಹಾಕಿದ್ದ. ಆದರೆ ಇವು ಸಂಭವಿಸಿದಾಗ
ಹ್ಯಾಲಿ ಬದುಕಿರಲಿಲ್ಲ 1742 ರಲ್ಲಿ ಅಸುನಿಗಿದ್ದ.
ಸಂಕ್ರಮಗಳು
ಬಂದು ಹೋದವು. 1761 ಮತ್ತು 1769ರಲ್ಲಿ ಸಂಗ್ರಹಿಸಿದ್ದ ಅಪಾರ
ಮಾಹಿತಿಗಳನ್ನು ವಿಶ್ಲೇಷಿಸಿ ಲೆಕ್ಕಾಚಾರ ಮಾಡಲು 19 ನೇ ಶತಮಾನದವರೆಗೆ ಕಾಯಬೇಕಾಯಿತು.
1824ರಲ್ಲಿ ಯೋಹಾನ್ ಫ್ರಾನ್ಜ್ ಎನ್ಕೆ
ಈ ಕಷ್ಟದ ಕೆಲಸಕ್ಕೆ
ಕೈಹಾಕಿದ. ಬರ್ಲಿನ್ ವೇದಶಾಲೆಯ ನಿರ್ದೇಶಕನಾಗಿದ್ದ
ಎನ್ಕೆ ಗ್ರಹದ ಲಂಬನವನ್ನು 8.5776 ಆರ್ಕ
ಸೆಕೆಂಡ್ ಎಂದು ಲೆಕ್ಕಸಿದ. ಇದರಿಂದ
ಒಂದು ಖಗೋಲಮಾನಕ್ಕೆ 153,340,000ಕಿ.ಮೀ ಎಂದು
ತೀರ್ಮಾನಿಸಿದ. ಆ ಕಾಲಕ್ಕೆ ಇದು
ಅತ್ಯತ್ತಮ ಲೆಕ್ಕಚಾರ. ಈ ಒಂದು ಖಗೋಳ
ಮಾನಕ್ಕೆ 149,597,870 ಕಿ ಮೀ.
1874 ಮತ್ತು 1882ರಲ್ಲಿ ಸಂಭವಿಸಿದ ಶುಕ್ರ
ಸಂಕ್ರಮವನ್ನು ವೀಕ್ಷಿಸುವುದು ಕಷ್ಟದ ಕೆಲಸವಾಗಲಿಲ್ಲ. ಆ
ವೇಳೆಗಾಗಲೇ ಸಾಕಷ್ಟು ಅನುಭವ ಗಳಿಸಲಾಗಿತ್ತು.
ಆಧುನಿಕ ಉಪಕರಣಗಳೂ ಲಭ್ಯವಾಗಿದ್ದವು. ನಕ್ಷತ್ರಗಳ ಛಾಯಾಚಿತ್ರ ತೆಗೆಯುವ ಅವಕಾಶ ಲಭ್ಯವಾಗಿತ್ತು.
ದೂರದ ನಕ್ಷತ್ರ ಅಭಿಜಿತ್ನ
ಲಂಬನವನ್ನು ಸ್ಟ್ರೊವಹ್ ಎಂಬ ಖಗೋಳವಿಜ್ಞಾನಿ ಕಂಡುಹಿಡಿದ.
1837ರಲ್ಲಿಯೇ ನಕ್ಷತ್ರದ ದೂರ 12.5 ಜ್ಯೋತಿವರ್ಷಗಳೆಂದು ಕಂಡುಹಿಡಿದ. ಇಪ್ಪತ್ತನೆಯ ಶತಮಾನದಲ್ಲಿ ಶುಕ್ರ ಸಂಕ್ರಮ ನಡೆಯಲ್ಲಿಲ್ಲ.
ಶುಕ್ರ
ಸಂಕ್ರಮ
– ಅಪರೂಪ
ಏಕೆ?
ಒಂದು
ವೇಳೆ ಶುಕ್ರ ಮತ್ತು ಭೂಮಿ
ಸೂರ್ಯನಿರುವ ಸಮತಲ ಕಕ್ಷೆಯಲ್ಲಿ ಪರಿಭ್ರಮಿಸಿದ್ದರೆ
ಸಂಕ್ರಮಗಳನ್ನು ಅನೇಕ ಬಾರಿ ನೋಡಬಹುದಾಗಿತ್ತು.
ಆದರೆ ಶುಕ್ರ ಕಕ್ಷೆಯ ಭೂಕಕ್ಷೆಗೆ
ಓರೆಯಾಗಿದೆ. ಹೀಗಾಗಿ ಪ್ರತಿ 16 ವರುಷಗಳಿಗೆ
ಒಮ್ಮೆ ಶುಕ್ರಗ್ರಹವು ಭೂಮಿ ಮತ್ತು ಸೂರ್ಯರ
ನಡುವೆ ಹಾದು ಹೋದರೂ ಸಂಕ್ರಮವಾಗುವದಿಲ್ಲ.
ಹೀಗಾಗಿ ಅದು ಸೂರ್ಯ ಬಿಂಬದ
ಮೇಲೆ ಅಥವಾ ಕೆಳಗಡೆ ಚಲಿಸುತ್ತಿರುತ್ತದೆ.
ಸೂರ್ಯನ ಪ್ರಖರ ಬೆಳಕಿನಲ್ಲಿ ಗ್ರಹ
ಗೋಚರಿಸುವುದಿಲ್ಲ.
ಬುಧ ಕಕ್ಷೆಗೆ ಹೋಲಿಸಿದರೆ
ಶುಕ್ರ ಕಕ್ಷೆ ಹೆಚ್ಚು ವೃತ್ತೀಯವಾಗಿದೆ.
ಹೀಗಾಗಿ ಅದು ಭೂ ಕಕ್ಷೆಗೆ
ಹೆಚ್ಚು ಓರೆಯಾಗಿಲ್ಲ. ಇದರ ಪರಿಣಾಮವಾಗಿ ಬುಧ
ಸಂಕ್ರಮ ಅಷ್ಟೇನೂ
ವಿರಳವಲ್ಲ. 1907ರಿಂದ ಇಲ್ಲಿಯವರೆಗೂ 16 ಬುಧ
ಸಂಕ್ರಮಗಳಾಗಿವೆ. ಮುಂದಿನದು ಮೇ 9, 2016ರಲ್ಲಿ ಬುಧನಿಗೆ ಹೋಲಿಸಿದರೆ
ಶುಕ್ರ ಸಂಕ್ರಮ ನಿಜಕ್ಕೂ ವಿರಳ.
ಕ್ರಿ.ಪೂ 2000 ರಿಂದ ಕ್ರಿ.ಪೂ 4000ರ ಅವಧಿಯಲ್ಲಿ
ಕೇವಲ 81 ಶುಕ್ರ ಸಂಕ್ರಮಗಳಾಗಿವೆಯೆಂದು ಖಗೋಲ
ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಇದಕ್ಕೆ
ಕಾರಣ ಗ್ರಹದ ವೃತ್ತಿಯ ಕಕ್ಷೆ
ಮತ್ತು ಅದರ ಕಕ್ಷೆಯ ಓರೆ
ಕಡಿಮೆ ಇರುವುದೇ ಆಗಿದೆ. ಹೀಗಾಗಿ
ಶುಕ್ರ ಸಂಕ್ರಮ ಎಂಟು ವರ್ಷಗಳ
ಅಂತರದಲ್ಲಿ ಅಂದರೆ ಜೋಡಿಯಾಗಿ ಸಂಭವಿಸುವುದೇ
ಅಲ್ಲದೇ (2004-2012) ಮುಂದಿನದು 105 ವರ್ಷಗಳ ನಂತರ ಸಂಭವಿಸಲಿದೆ
(ಡಿಸೆಂಬರ್ 2117 ಮತ್ತು ಡಿಸೆಂಬರ್ 2125).
ಶುಕ್ರ
ಸಂಕ್ರಮ
ವೀಕ್ಷಣೆ
ಹೇಗೆ?
ಸೂರ್ಯನ
ಮೈಮೇಲೆ ಕಪ್ಪು ಚುಕ್ಕೆಯಾಗಿ ಚಲಿಸಲಿರುವ
ಶುಕ್ರನನ್ನು ನೋಡಬೇಕೆಂದರೆ ಸೂರ್ಯನನ್ನೇ ನಾವು ನೋಡಬೇಕು. ಆದರೆ
ಸೂರ್ಯನನ್ನು ಬರಿಗಣ್ಣಿನಲ್ಲಿ ನೋಡುವುದು ಅಪಾಯ! ಇದಕ್ಕೆ ಹಲವು
ವಿಧಾನಗಳಿವೆ. ಕನ್ನಡಿ ಬಳಸಿ ಸೂರ್ಯ
ಬಿಂಬವನ್ನು ಕತ್ತಲೆ ಕೋಣೆಯಲ್ಲಿ ಮೂಡಿಸಿ
ನಿರ್ಭಯವಾಗಿ ವೀಕ್ಷಿಸಬಹುದು. ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ “ಸೋಲಾರ ಫಿಲ್ಟರ್” ಕನ್ನಡಕದ
ಮೂಲಕ ನೋಡಬಹುದು, ಅಥವಾ ಸೌರ ಫಿಲ್ಟರ್
ಆಳವಡಿಸಿರುವ ದೂರದರ್ಶಕದಿಂದ ನೋಡಬಹುದು.
ಕೊನೆ ಮಾತು:
ಜಗತ್ತಿನೆಲ್ಲೆಡೆ ವಿಜ್ಞಾನಿಗಳು ಕಾತರದಿಂದ ಕಾಯುತ್ತಿರುವ ಶುಕ್ರ ಸಂಕ್ರಮದ ಆಧ್ಯಯನದಿಂದ
ಭೂಮಿ ಸೂರ್ಯನ ನಡುವಿನ ದೂರವನ್ನು
ಅಳೆಯಬಹುದು. ಶುಕ್ರ ಮತ್ತು ಸೂರ್ಯನಿಗಿರುವ
ದೂರವನ್ನು ಲೆಕ್ಕ ಹಾಕಬಹುದು. ಸೌರಕಲೆಗಳ
ಅಧ್ಯಯನ ಮುಂತಾದ ಖಗೋಳ ಸಂಬಂಧಿ
ವೈಜ್ಞಾನಿಕ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಮೇಲಿನದು ವಿಜ್ಞಾನಿಗಳ ಮಾತಾಯಿತು.
ಇನ್ನೂ ನಾವು ನೀವೆಲ್ಲಾ ನೈಸರ್ಗಿಕವಾಗಿ
ಫಟಿಸುವ ಖಗೋಳ ವಿಸ್ಮಯಗಳಿಗೆಲ್ಲಾ ಅಂಟಿಕೊಂಡಿರುವ
ಮೂಢನಂಬಿಕೆಗಳನ್ನು ಭೇದಿಸಿ “ಶುಕ್ರ ಸಂಕ್ರಮ”ವನ್ನು ನೋಡುವ ಮೂಲಕ
ಇದೊಂದು ಕೂತೂಹಲಕಾರಿ ವಿಸ್ಮಯಕಾರಿ ಮತ್ತು ಮನುಷ್ಯನ ಅರಿವನ್ನು
ವಿಸ್ತರಿಸುವ ಘಟನೆ ಎಂಬುದನ್ನು ಸಾರೋಣ.
Subscribe to:
Posts (Atom)
-
ಶತಮಾನದ ಕೊನೆಯ ಶುಕ್ರ ಸಂಕ್ರಮ. ಲೇಖನ - ಡಾ . ಲಿಂಗರಾಜ ರಾಮಾಪೂರ ಶತಮಾನದ ಅಪರೂಪದ ಶುಕ್ರಸಂಕ್ರಮ ಜೂನ್ 6 ರಂದು ಸಂಭವಿಸಲಿದೆ . ಈ ಹಿಂದೆ 2004 ...