Tuesday, 31 March 2020

ಶತಮಾನದ ಕೊನೆಯ ಶುಕ್ರ ಸಂಕ್ರಮ


ಶತಮಾನದ ಕೊನೆಯ ಶುಕ್ರ ಸಂಕ್ರಮ.

ಲೇಖನ-ಡಾ.ಲಿಂಗರಾಜ ರಾಮಾಪೂರ

ಶತಮಾನದ ಅಪರೂಪದ ಶುಕ್ರಸಂಕ್ರಮ ಜೂನ್ 6 ರಂದು ಸಂಭವಿಸಲಿದೆ. ಹಿಂದೆ 2004 ರಲ್ಲಿ ಶುಕ್ರಸಂಕ್ರಮ ಸಂಭವಿಸಿತ್ತು. ಮನುಷ್ಯ ಮೊದಲು ಶುಕ್ರಸಂಕ್ರಮವನ್ನು ಗಮನಿಸಿದ್ದು 1939 ರಲ್ಲಿ. ನಂತರ 1761-1769 ರಲ್ಲಿ 1874-1882, 2004-2012 ಹೀಗೆ ಶುಕ್ರಸಂಕ್ರಮ 2117 ಡಿಸೆಂಬರ್ !!!. ಕಾರಣ ಶತಮಾನದ ಕೊನೆಯ ಶುಕ್ರಸಂಕ್ರಮ ಇದಾಗಿದ್ದು, ಮುಂದಿನ ಶುಕ್ರಸಂಕ್ರಮಕ್ಕಾಗಿ 115 ವರ್ಷ ಕಾಯಬೇಕು. ಶುಕ್ರಸಂಕ್ರಮ ಏನು ಎಂದು ವಿಶೇಷ ಲೇಖನ.

ಒಲವಿನ ದೇವತೆಯ ಸಂಕೇತವಾದ ಶುಕ್ರಗ್ರಹ ಹಾಗೂ ಪ್ರಖರವಾಗಿ ಹೊಳೆಯುವ ಸೂರ್ಯನಕ್ಷತ್ರದ ಮಹತ್ತರ ಕೂಟವೇ ಶುಕ್ರಸಂಕ್ರಮ. ಇದು ಖಗೋಳ ವಿಜ್ಞಾನದಲ್ಲಿ ಅಪೂರ್ವ ಘಟನೆ. ಈಗ ಬದುಕಿರುವವರಲ್ಲಿ ಯಾರೂ ನೋಡಿಲ್ಲದಂತಹ ಅಪರೂಪ ದೃಶ್ಯ. ರೀತಿಯ ಅನೇಕ ವಿಶೇಷಣಗಳಿಂದ ಕರೆಯಲ್ಪಡುವ ಘಟನೆಯೇ ಶುಕ್ರಸಂಕ್ರಮ. ಇದು ಜೂನ 8, 2004 ರಂದು ಸಂಭವಿಸಿತ್ತು. ಭಾರತದಾದ್ಯಂತ ಹಗಲಿನಲ್ಲಿ ಕಂಡು ಬಂದ ಘಟನೆಯನ್ನು ಖಗೋಳಾಸಕ್ತರು ವೀಕ್ಷಿಸಿದರು. ಮತ್ತೊಮ್ಮೆ ಇಂತಹದೇ ಘಟನೆಯನ್ನು ವೀಕ್ಷಿಸುವ ಅವಕಾಶ ಜೂನ್ 6, 2012 ಬುಧವಾರ ಬೆಳಿಗ್ಗೆ 7 ರಿಂದ 10:20 ವರೆಗೆ ದೊರೆಯಿತು.

                ಅಂದು ಭೂಮಿ, ಶುಕ್ರ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುತ್ತವೆ. ಆಗ ಭೂಮಿಯ ಮೇಲಿರುವ ನಮಗೆ ಶುಕ್ರಗ್ರಹವು ಸೂರ್ಯನ ಮೇಲೆ ಹಾದೂ ಹೋಗುವ ದೃಶ್ಯ ಗೋಚರಿಸುವುದು. ಆಗಾಧ ಗಾತ್ರದ ಸೂರ್ಯನ ಜೊತೆ ಬೆಳ್ಳಿ ಚುಕ್ಕಿ ಒಂದುಕಪ್ಪು ಚುಕ್ಕೆಯಂತೆ ಕಾಣುವುದು ಇಲ್ಲಿನ ವಿಶೇಷ.

ಘಟನೆ ನಡೆಯುವಾಗ ಶುಕ್ರಗ್ರಹದ ಗಾತ್ರ ಕೇವಲ ಒಂದು ಆರ್ಕ್ಮಿನಿಟ್. ಹೀಗಾಗಿ ಅಂದು ಸೂರ್ಯಗ್ರಹಣವಾಗುವುದಿಲ್ಲ. ಬದಲಿಗೆ ಕಪ್ಪು ಚುಕ್ಕೆಯೊಂದು, ಸೌರಕಲೆಯಂತೆ ಸೂರ್ಯಬಿಂಬದ ಒಂದು ಅಂಚಿನಿಂದ ಮತ್ತೊಂದರತ್ತ ಸಾಗುತ್ತದೆ. ಎಂಟು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಸಂಪೂರ್ಣ ಸಂಕ್ರಮವನ್ನು ಆರುಗಂಟೆಗಳ ಕಾಲ ನೋಡುವ ಅವಕಾಶವಿತ್ತು.

                ವಿಶ್ವವಿಖ್ಯಾತ ಜರ್ಮನ್ ಭೌತ ವಿಜ್ಞಾನಿ ಕೆಪ್ಲರ್. ಇಂತಹ ಘಟನೆ ಡಿಸೆಂಬರ್ 6, 1631 ರಲ್ಲಿ ಸಂಭವಿಸಲಿದೆ ಎಂದು ಲೆಕ್ಕಹಾಕಿದ್ದ. ಘಟನೆ ಸಂಭವಿಸಿದಾಗ ಕೆಪ್ಲರ ಬದುಕಿರಲಿಲ್ಲ. ಸಂಕ್ರಮದ ಕೊನೆಯ ಹಂತ ಮುಂಜಾನೆ ಸೂರ್ಯೋದಯವಾದಾಗ ಸಂಭವಿಸಿತ್ತು. ಯುದ್ಧದಿಂದಾಗಿ ಯಾರೂ ಇದನ್ನು ನೋಡಲಿಲ್ಲ. ಪಿಯರೆ ಗಸೆಂಡಿ ಎಂಬ ಫ್ರೆಂಚ್ ವಿಜ್ಞಾನಿ ಪ್ಯಾರಿಸ್ನಲ್ಲಿ ಇದನ್ನು ನೋಡುವ ಪ್ರಯತ್ನ ಮಾಡಿದ್ದ.

                1639 ರಲ್ಲಿ ಸಂಭವಿಸಿದ ಶುಕ್ರ ಸಂಕ್ರಮ ಯಾರ ಗಮನಕ್ಕೂ ಬರಲೇ ಇಲ್ಲ. ಕೇಪ್ಲರ ಇದನ್ನು ಪೂರ್ವಭಾವಿಯಾಗಿ ತಿಳಿಸಿರಲಿಲ್ಲ. ಇಂಗ್ಲೆಂಡಿನಲ್ಲಿ ಮಾತ್ರ ಜೆರೇಮಿಯಾ ಹೋರಾಕ್ಸ್ ಎಂಬ ಖಗೋಳ ವಿಜ್ಞಾನಿ ಸ್ವತಂತ್ರವಾಗಿ ಸಂಕ್ರಮದ ದಿನವನ್ನು ಲೆಕ್ಕ ಹಾಕಿದ್ದ. 17ನೇ ಶತಮಾನದಲ್ಲಿ ಉಪೇಕ್ಷೆಗೊಳಗಾಗಿದ್ದ ಶುಕ್ರ ಸಂಕ್ರಮದ ವೀಕ್ಷಣೆ ಮತ್ತೆ ಪ್ರಾಮುಖ್ಯತೆ ಪಡೆದಿದ್ದು 18ನೇಯ ಶತಮಾನದಲ್ಲಿ. ಇಂಗ್ಲೀಷ್ ಖಗೋಳವಿಜ್ಞಾನಿ ಹ್ಯಾಲಿ. ಶುಕ್ರ ಸಂಕ್ರಮದ ಅಭ್ಯಾಸದಿಂದ ಖಗೋಳಮಾನ ಮತ್ತು ಸೂರ್ಯರ ನಡುವಿನ ದೂರವನ್ನು ಕಂಡುಹಿಡಿಯಬಹುದೆಂದು ಪ್ರತಿಪಾದಿಸಿದ.

                ಬುಧಗ್ರಹ ಸಂಕ್ರಮ ಆಗಾಗ್ಗೆ ಅಂದರೆ ಶತಮಾನದಲ್ಲಿ 13 ಸಾರಿ ಸಂಭವಿಸಿದರೂ ಅದರ ಲಂಬನ ತೀರಾ ಕಡಿಮೆ. ಸರಿಯಾಗಿ ಗೋಚರಿಸುವುದೂ ಇಲ್ಲ. ಹೀಗಾಗಿ ಹೆಚ್ಚು ಉಪಯೋಗವಿಲ್ಲ. ಶುಕ್ರ ಸಂಕ್ರಮ ತೀರಾ ವಿರಳ. ಮುಂದಿನ ಶುಕ್ರ ಸಂಕ್ರಮ 1761 ಮತ್ತು 1769ರಲ್ಲಿ ಸಂಭವಿಸಲಿದೆ ಎಂದು ಹ್ಯಾಲಿ ಲೆಕ್ಕಹಾಕಿದ್ದ. ಆದರೆ ಇವು ಸಂಭವಿಸಿದಾಗ ಹ್ಯಾಲಿ ಬದುಕಿರಲಿಲ್ಲ 1742 ರಲ್ಲಿ ಅಸುನಿಗಿದ್ದ.

ಸಂಕ್ರಮಗಳು ಬಂದು ಹೋದವು. 1761 ಮತ್ತು 1769ರಲ್ಲಿ ಸಂಗ್ರಹಿಸಿದ್ದ ಅಪಾರ ಮಾಹಿತಿಗಳನ್ನು ವಿಶ್ಲೇಷಿಸಿ ಲೆಕ್ಕಾಚಾರ ಮಾಡಲು 19 ನೇ ಶತಮಾನದವರೆಗೆ ಕಾಯಬೇಕಾಯಿತು. 1824ರಲ್ಲಿ ಯೋಹಾನ್ ಫ್ರಾನ್ಜ್ ಎನ್ಕೆ ಕಷ್ಟದ ಕೆಲಸಕ್ಕೆ ಕೈಹಾಕಿದ. ಬರ್ಲಿನ್ ವೇದಶಾಲೆಯ ನಿರ್ದೇಶಕನಾಗಿದ್ದ ಎನ್ಕೆ ಗ್ರಹದ ಲಂಬನವನ್ನು 8.5776 ಆರ್ಕ ಸೆಕೆಂಡ್ ಎಂದು ಲೆಕ್ಕಸಿದ. ಇದರಿಂದ ಒಂದು ಖಗೋಲಮಾನಕ್ಕೆ 153,340,000ಕಿ.ಮೀ ಎಂದು ತೀರ್ಮಾನಿಸಿದ. ಕಾಲಕ್ಕೆ ಇದು ಅತ್ಯತ್ತಮ ಲೆಕ್ಕಚಾರ. ಒಂದು ಖಗೋಳ ಮಾನಕ್ಕೆ 149,597,870 ಕಿ ಮೀ.

1874  ಮತ್ತು 1882ರಲ್ಲಿ ಸಂಭವಿಸಿದ ಶುಕ್ರ ಸಂಕ್ರಮವನ್ನು ವೀಕ್ಷಿಸುವುದು ಕಷ್ಟದ ಕೆಲಸವಾಗಲಿಲ್ಲ. ವೇಳೆಗಾಗಲೇ ಸಾಕಷ್ಟು ಅನುಭವ ಗಳಿಸಲಾಗಿತ್ತು. ಆಧುನಿಕ ಉಪಕರಣಗಳೂ ಲಭ್ಯವಾಗಿದ್ದವು. ನಕ್ಷತ್ರಗಳ ಛಾಯಾಚಿತ್ರ ತೆಗೆಯುವ ಅವಕಾಶ ಲಭ್ಯವಾಗಿತ್ತು. ದೂರದ ನಕ್ಷತ್ರ ಅಭಿಜಿತ್ ಲಂಬನವನ್ನು ಸ್ಟ್ರೊವಹ್ ಎಂಬ ಖಗೋಳವಿಜ್ಞಾನಿ ಕಂಡುಹಿಡಿದ. 1837ರಲ್ಲಿಯೇ ನಕ್ಷತ್ರದ ದೂರ 12.5 ಜ್ಯೋತಿವರ್ಷಗಳೆಂದು ಕಂಡುಹಿಡಿದ. ಇಪ್ಪತ್ತನೆಯ ಶತಮಾನದಲ್ಲಿ ಶುಕ್ರ ಸಂಕ್ರಮ ನಡೆಯಲ್ಲಿಲ್ಲ.

ಶುಕ್ರ ಸಂಕ್ರಮಅಪರೂಪ ಏಕೆ?

ಒಂದು ವೇಳೆ ಶುಕ್ರ ಮತ್ತು ಭೂಮಿ ಸೂರ್ಯನಿರುವ ಸಮತಲ ಕಕ್ಷೆಯಲ್ಲಿ ಪರಿಭ್ರಮಿಸಿದ್ದರೆ ಸಂಕ್ರಮಗಳನ್ನು ಅನೇಕ ಬಾರಿ ನೋಡಬಹುದಾಗಿತ್ತು. ಆದರೆ ಶುಕ್ರ ಕಕ್ಷೆಯ ಭೂಕಕ್ಷೆಗೆ ಓರೆಯಾಗಿದೆ. ಹೀಗಾಗಿ ಪ್ರತಿ 16 ವರುಷಗಳಿಗೆ ಒಮ್ಮೆ ಶುಕ್ರಗ್ರಹವು ಭೂಮಿ ಮತ್ತು ಸೂರ್ಯರ ನಡುವೆ ಹಾದು ಹೋದರೂ ಸಂಕ್ರಮವಾಗುವದಿಲ್ಲ. ಹೀಗಾಗಿ ಅದು ಸೂರ್ಯ ಬಿಂಬದ ಮೇಲೆ ಅಥವಾ ಕೆಳಗಡೆ ಚಲಿಸುತ್ತಿರುತ್ತದೆ. ಸೂರ್ಯನ ಪ್ರಖರ ಬೆಳಕಿನಲ್ಲಿ ಗ್ರಹ ಗೋಚರಿಸುವುದಿಲ್ಲ.

                ಬುಧ ಕಕ್ಷೆಗೆ ಹೋಲಿಸಿದರೆ ಶುಕ್ರ ಕಕ್ಷೆ ಹೆಚ್ಚು ವೃತ್ತೀಯವಾಗಿದೆ. ಹೀಗಾಗಿ ಅದು ಭೂ ಕಕ್ಷೆಗೆ ಹೆಚ್ಚು ಓರೆಯಾಗಿಲ್ಲ. ಇದರ ಪರಿಣಾಮವಾಗಿ ಬುಧ ಸಂಕ್ರಮ  ಅಷ್ಟೇನೂ ವಿರಳವಲ್ಲ. 1907ರಿಂದ ಇಲ್ಲಿಯವರೆಗೂ 16 ಬುಧ ಸಂಕ್ರಮಗಳಾಗಿವೆ. ಮುಂದಿನದು ಮೇ 9, 2016ರಲ್ಲಿ ಬುಧನಿಗೆ ಹೋಲಿಸಿದರೆ ಶುಕ್ರ ಸಂಕ್ರಮ ನಿಜಕ್ಕೂ ವಿರಳ. ಕ್ರಿ.ಪೂ 2000 ರಿಂದ ಕ್ರಿ.ಪೂ 4000 ಅವಧಿಯಲ್ಲಿ ಕೇವಲ 81 ಶುಕ್ರ ಸಂಕ್ರಮಗಳಾಗಿವೆಯೆಂದು ಖಗೋಲ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಇದಕ್ಕೆ ಕಾರಣ ಗ್ರಹದ ವೃತ್ತಿಯ ಕಕ್ಷೆ ಮತ್ತು ಅದರ ಕಕ್ಷೆಯ ಓರೆ ಕಡಿಮೆ ಇರುವುದೇ ಆಗಿದೆ. ಹೀಗಾಗಿ ಶುಕ್ರ ಸಂಕ್ರಮ ಎಂಟು ವರ್ಷಗಳ ಅಂತರದಲ್ಲಿ ಅಂದರೆ ಜೋಡಿಯಾಗಿ ಸಂಭವಿಸುವುದೇ ಅಲ್ಲದೇ (2004-2012) ಮುಂದಿನದು 105 ವರ್ಷಗಳ ನಂತರ ಸಂಭವಿಸಲಿದೆ (ಡಿಸೆಂಬರ್ 2117 ಮತ್ತು ಡಿಸೆಂಬರ್ 2125).

ಶುಕ್ರ ಸಂಕ್ರಮ ವೀಕ್ಷಣೆ ಹೇಗೆ?

ಸೂರ್ಯನ ಮೈಮೇಲೆ ಕಪ್ಪು ಚುಕ್ಕೆಯಾಗಿ ಚಲಿಸಲಿರುವ ಶುಕ್ರನನ್ನು ನೋಡಬೇಕೆಂದರೆ ಸೂರ್ಯನನ್ನೇ ನಾವು ನೋಡಬೇಕು. ಆದರೆ ಸೂರ್ಯನನ್ನು ಬರಿಗಣ್ಣಿನಲ್ಲಿ ನೋಡುವುದು ಅಪಾಯ! ಇದಕ್ಕೆ ಹಲವು ವಿಧಾನಗಳಿವೆ. ಕನ್ನಡಿ ಬಳಸಿ ಸೂರ್ಯ ಬಿಂಬವನ್ನು ಕತ್ತಲೆ ಕೋಣೆಯಲ್ಲಿ ಮೂಡಿಸಿ ನಿರ್ಭಯವಾಗಿ ವೀಕ್ಷಿಸಬಹುದು. ವೈಜ್ಞಾನಿಕವಾಗಿ ತಯಾರಿಸಲ್ಪಟ್ಟಸೋಲಾರ ಫಿಲ್ಟರ್ಕನ್ನಡಕದ ಮೂಲಕ ನೋಡಬಹುದು, ಅಥವಾ ಸೌರ ಫಿಲ್ಟರ್ ಆಳವಡಿಸಿರುವ ದೂರದರ್ಶಕದಿಂದ ನೋಡಬಹುದು.

ಕೊನೆ ಮಾತು:

                ಜಗತ್ತಿನೆಲ್ಲೆಡೆ ವಿಜ್ಞಾನಿಗಳು ಕಾತರದಿಂದ ಕಾಯುತ್ತಿರುವ ಶುಕ್ರ ಸಂಕ್ರಮದ ಆಧ್ಯಯನದಿಂದ ಭೂಮಿ ಸೂರ್ಯನ ನಡುವಿನ ದೂರವನ್ನು ಅಳೆಯಬಹುದು. ಶುಕ್ರ ಮತ್ತು ಸೂರ್ಯನಿಗಿರುವ ದೂರವನ್ನು ಲೆಕ್ಕ ಹಾಕಬಹುದು. ಸೌರಕಲೆಗಳ ಅಧ್ಯಯನ ಮುಂತಾದ ಖಗೋಳ ಸಂಬಂಧಿ ವೈಜ್ಞಾನಿಕ ಮಾಹಿತಿಗಳನ್ನು ಪಡೆಯಬಹುದಾಗಿದೆ.

                                ಮೇಲಿನದು ವಿಜ್ಞಾನಿಗಳ ಮಾತಾಯಿತು. ಇನ್ನೂ ನಾವು ನೀವೆಲ್ಲಾ ನೈಸರ್ಗಿಕವಾಗಿ ಫಟಿಸುವ ಖಗೋಳ ವಿಸ್ಮಯಗಳಿಗೆಲ್ಲಾ ಅಂಟಿಕೊಂಡಿರುವ ಮೂಢನಂಬಿಕೆಗಳನ್ನು ಭೇದಿಸಿಶುಕ್ರ ಸಂಕ್ರಮವನ್ನು ನೋಡುವ ಮೂಲಕ ಇದೊಂದು ಕೂತೂಹಲಕಾರಿ ವಿಸ್ಮಯಕಾರಿ ಮತ್ತು ಮನುಷ್ಯನ ಅರಿವನ್ನು ವಿಸ್ತರಿಸುವ ಘಟನೆ ಎಂಬುದನ್ನು ಸಾರೋಣ.

No comments:

Post a Comment