ಕನ್ನಡದ ದೀಪ ಹಚ್ಚಿದ ಕಾವ್ಯರ್ಷಿ ಕರ್ಕಿ
ಲೇಖನ-ಡಾ.ಲಿಂಗರಾಜ ರಾಮಾಪೂರ
ವಿಶೇಷ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಕಿರೇಸೂರ
ತಾ. ಹುಬ್ಬಳ್ಳಿ
ಮೊ-9964571330
ಹಚ್ಚೇವು
ಕನ್ನಡದ ದೀಪ
ಕರುನಾಡ
ದೀಪ ಸಿರಿನುಡಿಯ ದೀಪ
ಒಲವೆತ್ತಿ
ತೋರುವಾ ದೀಪ//
ಬಹುದಿನಗಳಿಂದ
ಮೈಮರವೆಯಿಂದ
ಕೂಡಿರುವ
ಕೊಳೆಯ ಕೊಚ್ಚೇವು
ಎಲ್ಲೆಲ್ಲಿ
ಕನ್ನಡದ ಕಂಪು ಸೂಸಲು
ಅಲ್ಲಲ್ಲಿ
ಕರಣ ಚಾಚೇವು//
ಮರೆತೇವು
ಮರೆವ ತೆರೆದೇವು ಮನವ
ಎರದೇವು
ಒಲವ ಹಿಡಿನೆನಪ
ನರನರವನೆಲ್ಲ
ಹುರಿಗೊಳಿಸಿ ಹೊಸೆದು
ಹಚ್ಚೇವು
ಕನ್ನಡದ ದೀಪ//
‘ಕನ್ನಡದ
ದೀಪ’ವನ್ನು ಹಚ್ಚಿ ಬೆಳಗಿಸಿದವರಲ್ಲಿ
ಒಬ್ಬರಾದ ಕವಿ ಡಾ.ಡಿ.ಎಸ್.ಕರ್ಕಿಯವರ ಈ
ಕವನ 1949ರಲ್ಲಿ ಪ್ರಕಟವಾದ ಅವರ
‘ನಕ್ಷತ್ರಗಾನ’ ಕವನ ಸಂಗ್ರಹದಲ್ಲಿದೆ. ಹುಬ್ಬಳ್ಳಿಯ
ಕಲಾ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ.ಡಿ.ಎಸ್ ಕರ್ಕಿಯವರು
ಹುಬ್ಬಳ್ಳಿಯಲ್ಲಿ ಕವಿಗಳಾಗಿ ಮಾತ್ರವಲ್ಲ, ಕನ್ನಡದ ಚಟುವಟಿಕೆಗಳು ಬೆಳೆಯುವುದಕ್ಕೆ
ಕಾರಣರಾದವರು. ಅವರ ಒಂದೊಂದು ಕವನಗಳೂ
ಬೆಳಕಿನ ಹಣತೆಗಳೇ!
ನವೋದಯ ಕಾಲದ ಪ್ರಮುಖ
ಕವಿಗಳಲ್ಲೊಬ್ಬರು ಕರ್ಕಿ. ಸೌಮ್ಯತೆ, ಸೌಜನ್ಯತೆಗಳ
ಸಾಕಾರವಾದ ಅವರ ಮಾತು ಮೃದು.
ರೀತಿ. ನಯ, ನೀತಿ, ಬದುಕು,
ಬರಹ ಒಂದಾದ ಅಪರೂಪದ ಕವಿ.
ಅವರ ಗೇಯತೆಯಿಂದಾಗಿ ಗೀತೆಗಳೆನಿಸಿವೆ. ಅವುಗಳ ನಾದ ಮಾಧುರ್ಯದಿಂದಾಗಿ
ಅವರು ಮಧುರ ಕವಿ.
ಡಾ.ದುಂಡಪ್ಪ ಸಿದ್ದಪ್ಪ
ಕರ್ಕಿ ಬೆಳಗಾವಿ ಜಿಲ್ಲೆಯ ಭಾಗೋಜಿಕೊಪ್ಪದಿಂದ
ಬಂದವರು. 1907 ನವಂಬರ್ 15ರಂದು ಜನಿಸಿದ ಅವರು
ಬಾಲ್ಯದಲ್ಲಿ ತಂದೆಯವರನ್ನು ಕಳೆದುಕೊಂಡು ಸೋದರಮಾವ ಈಶ್ವರಪ್ಪ ಕಣಗಲಿ
ಅವರ ಊರು ಬೆಲ್ಲದ ಬಾಗೇವಾಡಿಯಲ್ಲಿ
ಬೆಳೆದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ
ಪೂರೈಸಿದ ಅವರು ಧಾರವಾಡ, ಮುಂಬಯಿಗಳಲ್ಲಿ
ಉಚ್ಛ ಶಿಕ್ಷಣ ಪಡೆದು ಶಿಕ್ಷಕರಾದರು.
ಹೈಸ್ಕೂಲ್ ಶಿಕ್ಷಕರಾಗಿ, ಟ್ರೇನಿಂಗ್ ಕಾಲೇಜ ಪ್ರಿನ್ಸಿಪಾಲರಾಗಿ, ಮೂರುಸಾವಿರಮಠದ
ಮಹಿಳಾ ಕಾಲೇಜಿನ ಪ್ರಿನ್ಸಿಪಾಲರಾಗಿ ಅನೇಕ
ಹುದ್ದೆಗಳನ್ನು ಅಲಂಕರಿಸಿ, ತಮ್ಮ ವ್ಯಕ್ತಿತ್ವದಿಂದ ಶಿಕ್ಷಣ
ಕ್ಷೇತ್ರದಲ್ಲಿ ಸಮರ್ಪಣ ಭಾವದ ಸೇವೆಗೈದು
ಸಹಸ್ರಾರು ಶಿಷ್ಯರಿಗೆ ಆದರ್ಶ ಗುರುವಾದರು. ನೀಟಾದ
ಅಚ್ಚುಕಟ್ಟಿನ ಶುಭ್ರವಸ್ತ್ರ, ಸರಳ ಹೃದಯ, ಪಾಠ
ಹೇಳುವಾಗಿನ ತನ್ಮಯತೆ, ಕಾವ್ಯಮಯ ಶೈಲಿ ಇವುಗಳನ್ನು
ಅವರ ಅಸಂಖ್ಯಾತ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸುತ್ತಾರೆ.
ಗುರುವರ್ಯ ಡಾ.ಡಿ.ಎಸ್.ಕರ್ಕಿ ಒಂದು ಕವಿತೆಯಲ್ಲಿ
ಹೀಗೆ ಬರೆಯುತ್ತಾರೆ.
ಚಿಕ್ಕೆಯ
ತೆರೆದಲಿ ನಕ್ಕು ನಲಿವೆ ನೀ
ನಿರ್ಮಲ
ಹರ್ಷದಲಿ
ನಿನ್ನೀ
ತಿಳಿನಗೆ ಸೆರೆಹಿಡಿವುದು ಬಗೆ
ಯನು ಅರೆನಿಮಿಷದಲಿ//
ಗಾತ್ರವೋ
ಕಿರಿದು, ಗುಣವೋ ಹಿರಿದು
ಇದೆ ನಿನ್ನ ರಹಸ್ಯ
ಕಿರಿ ರೂಹಿನಲಿ ಅರಳಿದ ತರಳೆ
ಜೀವನ ಸ್ವಾರಸ್ಯ//
ನಿನ್ನೊಳು
ಸರಳತೆ ಸೌಂದರ್ಯದ ಜೊತೆ
ಯಲಿ ಬಾಳುತಲಿಹುದು
ನರುಗುಂಪಿನ
ಸಿರಿ ಒಲವಿನ ನಲವಿನ
ಕತೆ ಹೇಳುತಲಿಹುದು//
ಈ
ಕವನದಲ್ಲಿ ಮಲ್ಲಿಗೆಯನ್ನು ಕುರಿತು ಬಣ್ಣನೆಯೆಲ್ಲಾ ಡಾ.ಕರ್ಕಿಯವರ ವ್ಯಕ್ತಿತ್ವಕ್ಕೆ ಸಮಂಜಸವಾಗಿ ಒಪ್ಪುತ್ತದೆ. ಅವರನ್ನು ಬಲ್ಲವರು, ಕಣ್ಣಾರೆ
ಕಂಡವರು ಇದರ ಅನುಭವವನ್ನು ಚೆನ್ನಾಗಿ
ಹೊಂದಿದವರೇ ಆಗಿದ್ದಾರೆ. ಮಲ್ಲಿಗೆಯಂಥ ಬಾಳನ್ನೇ ಬಾಳಿದ ಕವಿಗಳವರು.
ಆದ್ದರಿಂದಲೇ ಕನ್ನಡಿಗರಿಗೆಲ್ಲ ಅವರು ಕಾವ್ಯರ್ಷಿಗಳು.
ಡಾ.ಕರ್ಕಿಯವರು ಗ್ರಂಥರಾಶಿಯನ್ನೇ
ಸೃಷ್ಟಿಸಿ ಕೃತಿಗಳ ಬಣವೆ ಒಟ್ಟಿದವರಲ್ಲ.
ಕೆಲವೇ ಮೌಲ್ಯಯುತ ಕೃತಿಗಳನ್ನು ರಚಿಸಿದವರು. ಅವರ ರಚನೆಗಳಲ್ಲಿ ಸಾಕಷ್ಟು
ಪರಿಶ್ರಮ, ಬುದ್ಧಿ ಭಾವಗಳ ಸಂಗಮ
ಕಾಣುತ್ತದೆ. ಕಾವ್ಯದ ಅಂತಿಮ ಪ್ರಯೋಜನ
ಆನಂದವೆಂದೇ ಅವರು ನಂಬಿದ್ದರಿಂದ ಆನಂದದ
ಅವಿರ್ನವವಾಗಿದೆ ಅವರ ಕಾವ್ಯಸೃಷ್ಟಿ. ವರಕವಿ
ಬೇಂದ್ರೆಯವರು ಹೇಳಿದ ಹಾಗೆ “ದುಃಖ
ಮಾಸುವ ಸುಖದ ಸಂವೇದನೆ ಅವರ
ಕಾವ್ಯದಲ್ಲಿದೆ” ಎಂದುವುದು ನಾವೆಲ್ಲರೂ ಒಪ್ಪಬೇಕಾದ ನುಡಿ.
ಗದ್ಯ ಹಾಗೂ ಪದ್ಯ
ಎರಡನ್ನೂ ಹೃದ್ಯವಾಗಿಯೇ ಸೃಷ್ಟಿಸಿರುವ ಕರ್ಕಿಯವರು ಮೂಲತಃ ಭಾವಜೀವಿಗಳಾಗಿದ್ದರೂ ವಾಸ್ತವಿಕತೆಯ
ಪರಿಧಿಯ ಆಚೆ ಉಳಿದಿರಲಿಲ್ಲ. ಅವರ
ಪದ್ಯ ಸಾಹಿತ್ಯ ಹೇಗೆ ಭಾವ
ಪ್ರಧಾನವಾಗಿದೆಯೋ ಹಾಗೆಯೇ ಅವರ ಗದ್ಯ
ಸಾಹಿತ್ಯವೂ ವಿಚಾರ ಪ್ರಧಾನವಾಗಿದೆ.
ಡಾ.ಕರ್ಕಿಯವರ ವ್ಯಕ್ತಿತ್ವ
ದೊಡ್ಡದು. ಅವರ ವ್ಯಕ್ತಿತ್ವವೂ ದೊಡ್ಡದು.
ಅವರ ಜೀವನವೂ ಶುದ್ಧ. ಕಾವ್ಯವೂ
ಶುದ್ಧ. ಮನಸ್ಸನ್ನು ಮಂದಾರ ಲೋಕದಲ್ಲಿ ವಿಹರಿಸುವಂತೆ
ಮಾಡುವ ಅವರ ಕಾವ್ಯ ಮಾಧುರ್ಯ,
ಆ ಪ್ರಾಸಾದಿಕ ಗುಣ
ಅಸದೃಶ್ಯವಾದುದು.
ಕವಿ ಕರ್ಕಿ ಅವರ
ಕಾವ್ಯಕ್ಷಿತಿಜದ ತುಂಬ ಬೆಳಕಿನ ನಕ್ಷತ್ರಗಳು!
‘ನಕ್ಷತ್ರಗಾನ’ ಬೆಳಕಿಗೆ ಗಾನಮಾಧುರ್ಯದ ಸೊಬಗು
ನೀಡಿದ ಕವಿಪ್ರತಿಭೆ. ‘ಭಾವತೀರ್ಥ’ದಲ್ಲಿ ಕಾಣಬರುವ ಪುನೀತ
ಚಿತ್ತದ ಪ್ರಸನ್ನತೆ, ‘ತನನಂ ತೋಂ’ ದಲ್ಲಿ
ಕಂಡು ಬರುವ ನಾದಮಾಧುರ್ಯ ಎಲ್ಲವೂ
ಕರ್ಕಿಯವರ ಜೀವನ-ಕಾವ್ಯ ತತ್ವವನ್ನು
ಎತ್ತಿ ತೋರಿಸುತ್ತದೆ.
ಅವರ ಪ್ರಥಮ ಕವನ
ಸಂಕಲನ ‘ನಕ್ಷತ್ರಗಾನ’ ಇಲ್ಲಿ ನಿಸರ್ಗದ ಬಗೆಬಗೆಯ
ಬಣ್ಣನೆ ನಾದಮಾಧುರ್ಯದಿಂದ ತುಂಬಿ ತುಳುಕಿದೆ. ದ್ವಿತೀಯ
ಕವನ ಕೃತಿ ‘ಭಾವತೀರ್ಥ’ ಹಂಪೆ,
ಬನವಾಸಿ, ಗೋಕರ್ಣ, ಹಳೆಬೀಡು, ಬೇಲೂರು,
ಐಹೊಳೆ, ಕೂಡಲಸಂಗಮ ಮುಂತಾದ ಸುಂದರ ತೀರ್ಥ
ಕ್ಷೇತ್ರಗಳ ವರ್ಣನೆಯಿಂದಾಗಿ ನಾಡಿನ ಪುಣ್ಯಕ್ಷೇತ್ರಗಳ ಕೈಪಿಡಿಯೆನಿಸಿದೆ.
‘ಗೀತಗೌರವ’-ಹದಿನೆಂಟು ಕಥನ ಕವನಗಳ ಸುಮಧುರ
ಸಂಕಲನ. ಈ ಸಂಗ್ರಹದ ಗೌರವ
ಹೆಚ್ಚಿಸಿದವರೆಲ್ಲರೂ ಬೆಳಕಿನ ಅಧಿದೇವತೆಗಳು. ಬುದ್ಧ,
ಬಸವ, ಗಾಂಧಿ, ನೆಹರು ಈ
ನಾಡಿನ ಚಿಂತಾಮಣಿಗಳಾದ ಅತ್ತಿಮಬ್ಬೆ, ಲಕ್ಕಮ್ಮ ಹೀಗೆ ಜೀವನವನ್ನು
ಬೆಳಕಿನೆಡೆಗೆ ಒಯ್ಯುವ ಈ ಮಹಾಜೀವಿಗಳ
ಜೀವನದಲ್ಲಿ ಘಟಿಸಿದ ಒಂದೊಂದು ಘಟನೆಗಳು
ಇಲ್ಲಿ ಮೂಡಿರುವ ಕಾವ್ಯದ ವಸ್ತು.
ತಮ್ಮ ಪ್ರತಿಭೆಯ ಕುಂಚದಿಂದ ಚಿತ್ತಭಿತ್ತಿಯ ಮೇಲೆ ಆ ಘಟನೆಯನ್ನು
ಚಿತ್ರವತ್ತಾಗಿ ಚಿತ್ರಿಸಿದ ಈ ನೈಪುಣ್ಯ ಕರ್ಕಿಯವರ
ಕಾವ್ಯಶಕ್ತಿಗೆ ಸಾಧ್ಯ.
‘ಕರಕಿ ಕಣಗಿಲು’ ನಾಲ್ಕನೆಯ
ಕವನ ಸಂಕಲನ. ನವ್ಯ ಕಾವ್ಯದ
ಹೊಸಸುಗ್ಗಿಯ ಮಧ್ಯೆ ಮರೆತು ಹೋಗಲಿರುವ
ರಮ್ಯ ಪರಂಪರೆಯ ಭಾವಗೀತೆಗಳನ್ನು ಸೃಜಿಸಿ
ಪುನರುಜ್ಜೀವನಗೊಳಿಸಿದ ಶ್ರೇಯಸ್ಸು ಕರ್ಕಿಯವರಿಗೆ ಸಲ್ಲುತ್ತದೆ. ‘ನಮನ’ ಕೃತಿಯು ಭಕ್ತಿ
ಪ್ರಧಾನವಾದ ಪ್ರಾರ್ಥನಾ ಗೀತೆಗಳ ಸಂಕಲನ.
ರಮ್ಯ ಪ್ರಕೃತಿ, ಘನ ಸಂಸ್ಕøತಿ
ಸುಳಿಯ ಭಾವದಲ್ಲಿ
ನಿನ್ನ ಅಡಿಗೆ ಮಣಿಯುದು ಮನ
ಓ ಭಾರತ ಜನನಿ
ಸತ್-ಚಿತ್-ಸಂಚಾರಿಣಿ
ಹಲವಾರು ಸಲ ಆಕಾಶವಾಣಿಯಿಂದ
ತೂರಿಬಂದ ಈ ಕವನ ಸಾವಿರಾರು
ಜನರ ಹೃದಯವನ್ನು ಅರಳಿಸಿ ಮೈ ಮನಗಳನ್ನು
ಪುಳಕಗೊಳಿಸಿದೆ. ಓ ರೋಮಾಂಚನೆಗೆ ಈ
ಕವನದಲ್ಲಿರುವ ಭಾವ-ಭಾಷೆಗಳ ಸರಳ
ಸಂಯೋಜನೆ, ಕವಿಹೃದಯಕ್ಕೆ ಚಿಂತನೆಯಿಂದ ಮೂಡಿಬಂದ ದೇಶಭಕ್ತಿಯ ಅಭಿವ್ಯಕ್ತಿಯೇ
ಕಾರಣ. ಭಾರತ ಜನನಿಯ ತನುಜಾತೆಯಾದ
ಕರ್ನಾಟಕ ಮಾತೆಯ ವರಪುತ್ರರಾದ ಡಾಡಿ.ಎಸ್.ಕರ್ಕಿಯವರು ಭಾರತಾಂಬೆಯ
ಭವ್ಯ ಸಂಸ್ಕøತಿಯನ್ನು ನಿಸರ್ಗ
ಸೌಂದರ್ಯವನ್ನು ನೈಜವಾಗಿ ಸ್ಮರಿಸಿ, ಅಭಿವ್ಯಕ್ತಪಡಿಸಿರುವುದು
ಸ್ಪಷ್ಟವಾಗಿ ಕಂಡುಬರುತ್ತದೆ.
ಮಕ್ಕಳ ಶಿಕ್ಷಣ-ಶಿಕ್ಷಕರಿಗೆ
ಕೈಪಿಡಿ ಕರ್ಕಿಯವರಿಮದ ಮೂಡಿಬಂದ ಅದ್ಭುತವಾದ ಗದ್ಯ
ಗ್ರಂಥ. ಕರ್ಕಿಯವರು ಶಿಶುಗೀತೆಗಳನ್ನೂ ಬರೆದಿದ್ದಾರೆ. ‘ಬಣ್ನದ ಚೆಂಡು’ ಎಂಬ
ಸಂಗ್ರಹ ದಿ.ಎಸ್.ಡಿ.ಇಂಚಲ ಕೆಲವು ಕವನಗಳನ್ನು
ಕೂಡಿಸಿಕೊಂಡುದು. ಇಂಚಲ-ಕರ್ಕಿ ಎರಡು
ದೇಹ. ಒಂದು ಜೀವವಾಗಿ ಬಾಳಿದವರು.
ಇದರ ಸಂಕೇತವಾಗಿರಬೇಕು ಈ ಸಂಗ್ರಹ. ‘ತನನಂ
ತೋಂ’ ಎಂಬುದು ಇವರ ಇನ್ನೊಂದು
ಶಿಶುಗೀತೆಗಳ ಸಂಗ್ರಹ.
ಗದ್ಯಲೇಖನ ಕರ್ಕಿಯವರಿಗೆ ದೂರವಲ್ಲ. ಅವರ ‘ನಾಲ್ದೆಸೆಯ ನೋಟವು’
ಅವರ ಗದ್ಯಕ್ಕೆ ಉದಾಹರಣೆ. ಜೀವನ ಪ್ರಕೃತಿ, ಕಲೆ
ಸಾಹಿತ್ಯಗಳ ನಾಲ್ಕು ನಿಟ್ಟಿನ ನೋಟ
ಇಲ್ಲಿ ವ್ಯಕ್ತವಾಗಿದೆ. ಜೀವನವನ್ನು ರೂಪಿಸುವಲ್ಲಿ ಶಿಕ್ಷಣ, ಅದಕ್ಕೆ ಸಂಸ್ಕಾರ
ನೀಡುವಲ್ಲಿ ಪ್ರಕೃತಿ ಹಾಗೂ ಕಲೆಗಳ
ಸ್ಥಾನ. ಮಾಗೂರು ಮಲ್ಲಪ್ಪ ‘ಜೋಗದ
ಗುಂಡಿ’ ಹಾಗೂ ಕುವೆಂಪು ಅವರ
ಕೃತಿಗಳ ದರ್ಶನ-ವಿಮರ್ಶೆಗಳು ಇಲ್ಲಿ
ಅರ್ಥಪೂರ್ಣವಾಗಿ ಮೂಡಿವೆ. ಕರ್ಕಿಯವರು ಪಿ.ಹೆಚ್.ಡಿ ಪದವಿಗಾಗಿ
ರಚಿಸಿದ ‘ಛಂದೋವಿಕಾಸ’ ಆಳವಾದ ಸಂಶೋಧನೆ ಸೃಜನಶೀಲತೆ
ಹಾಗೂ ವಿಮರ್ಶೆಯ ತ್ರಿವೇಣಿ ಸಂಗಮವಾಗಿ ಸ್ನಾತಕೋತ್ತರ ಅಭ್ಯಾಸಿಗಳಿಗೆ ಆಧಾರ ಗ್ರಂಥವಾಗಿದೆ.
ಕರ್ಕಿಯವರು ತಮ್ಮ ಸಂಶೋಧನೆಯಲ್ಲಿ ತೋರಿಸುವ
ಅಪಾರ ಪಾಂಡಿತ್ಯ, ರಸಿಕತೆ ಆದರಣೀಯವಾಗಿದೆ. ಕನ್ನಡ
ಛಂದಸ್ಸಿನ ಪ್ರತಿಯೊಂದು ಪ್ರಕಾರದ ಉಗಮ, ಹೆಸರು,
ಲಕ್ಷಣ, ಉದಾಹರಣೆ, ಪ್ರಕಾರ, ವೈವಿಧ್ಯ, ಅದರ
ಚರಿತ್ರೆ-ಹೀಗೆ ಕ್ರಮವಾಗಿ ಹೇಳಿ
ವಿದ್ವಾಂಸರ ಚರ್ಚೆ, ತಮ್ಮ ತೀರ್ಮಾನ
ಇವುಗಳನ್ನು ಪ್ರಕಟಿಸಿರುವ ಬಗೆಯು ಅವರ ಶಾಸ್ತ್ರಪಾಂಡಿತ್ಯಕ್ಕೆ
ಸಾಕ್ಷಿಯಾಗಿದೆ.
ಕರ್ಕಿ ಭಾವಜೀವಿ. ನಿಷ್ಠುರ
ಆಡಳಿತದ ಹೊಣೆ ಹೊತ್ತಾಗಲೂ ಅವರದ್ದು
ಭಾವಜೀವವೇ ಆಗಿದ್ದಿತು. ಹೆಣ್ಗರಳು ಎನ್ನಬಹುದು. ಆಡಳಿತದಲ್ಲಿ ಬಿಗುವಿಗಿಂತ ನಗುವಿಗೆ ಸ್ಥಾನ. ಶಿಸ್ತಿಗಿಂತ
ಒಲವಿಗೆ, ಆತ್ಮೀಯತೆಗೆ ಆದ್ಯತೆ. ಕರ್ಕಿಯವರು ಯಾರೊಡನೆಯೂ
ನಿಷ್ಠುರತೆಯನ್ನು ತಂದು ಕೊಂಡವರಲ್ಲ. ಅನೇಕ
ಊರುಗಳಲ್ಲಿ ಭಾಷಣ ಮಾಡುವ ಅವಕಾಶ
ಕರ್ಕಿಯವರದ್ದು. ಅವರ ಭಾಷಣದಲ್ಲಿಯೂ ಅದೇ
ನಯ, ಅದೇ ವಿನಯ. ಅದೇ
ಭಾವೋತ್ಕಟತೆ. ಅದೇ ಆದರ್ಶಗಳ ದೃಷ್ಟಿ.
ಸಂಸ್ಕ್ರತಿ ಪರಂಪರೆಗಳ ಬಗೆಗಿನ ಗೌರವ, ದೈವತ್ವದೆಡೆಗೆ
ನೋಟ ಕಾಣುವಂತಹುದು.
ಇವರ ಸೇವೆಯನ್ನು ಮನಗಂಡು
1972ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ
ನಾಗರಿಕರು 1968ರಲ್ಲಿ ಷಷ್ಠಬ್ದಿ ಸಮಾರಂಭ
ಏರ್ಪಡಿಸಿ ‘ಗೀತಗೌರವ’ ಕವನ ಸಂಕಲನ ಬೆಳಕಿಗೆ
ತಂದಿದೆ. ಜಾಗೃತ ಪ್ರಕಾಶನದವರು ರಾಜ್ಯೋತ್ಸವದ
ಶುಭದಿನದಂದು ‘ಕಾವ್ಯರ್ಷಿ’ ಗೌರವ ಸಂಪುಟ ಅರ್ಪಿಸಿ
ಕೃತಜ್ಞತೆ ಸಲ್ಲಿಸಿತು.
ಸುಮಾರು ಇಪ್ಪತ್ತು ವರ್ಷಗಳಷ್ಟು
ಸುದೀರ್ಘ ಅವಧಿಯನ್ನು ಬೆಳಗಾವಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆಗೈಯುತ್ತಾ ಕಳೆದ ಡಾ.ಕರ್ಕಿಯವರಿಗೆ
ಗಡಿನಾಡಿನಲ್ಲಿ ನಶಿಸಿಹೋಗುತ್ತಿದ್ದ ಕನ್ನಡತನದ ಕೆಚ್ಚನ್ನು ಪ್ರಜ್ವಲಗೊಳಿಸುವ ಕಾರ್ಯಕ್ಕೆ ಅಂತರಂಗದ ಪ್ರೇರಣೆ ದೊರೆಯಿತು.
ಇದೇ ಸಮಯದಲ್ಲಿ ರಚನೆಯಾಗಿದ್ದು ‘ಹಚ್ಚೇವು ಕನ್ನಡದ ದೀಪ’
‘ಭಾವತೀರ್ಥ’ದಲ್ಲಿ ಮಿಂದು ‘ನಕ್ಷತ್ರಗಾನ’ದಿ ಹಾಡಿ ‘ಗೀತಗೌರವ’ವಿತ್ತ ‘ಕಾವ್ಯರ್ಷಿ’ 1984 ಜನೇವರಿ
16ರಂದು ‘ಕರಕಿ ಕಣಗಿಲ’ ಹೂವಾಗಿ
ಶಿವನಪಾದ ಸೇರಿತು. ಕವಿ ಇರದಿದ್ದರೂ
‘ಕಾವ್ಯ ಸೌರಭ’ ನಾಡನ್ನೆಲ್ಲಾ ವ್ಯಾಪಿಸಿದೆ.
ಡಾ.ಕರ್ಕಿಯವರು ಅಂತರಂಗ-ಬಹಿರಂಗ ಎರಡರಲ್ಲಿಯೂ
ಪರಿಶುದ್ಧಿ ಹೊಂದಿದ್ದ ಕವಿವರ್ಯರು. ಕನ್ನಡವನ್ನ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ
ಅವರು ಬದುಕಿನುದ್ದಕ್ಕೂ ಕಾವ್ಯವನ್ನೇ ಬಾಳಿದರು. ಪಾಂಡಿತ್ಯ, ಪ್ರತಿಭೆ, ಸಚ್ಚಾರಿತ್ರ್ಯದ ತ್ರಿವೇಣಿ ಸಂಗಮವಾಗಿದ್ದ ಕರ್ಕಿಯವರಿಗೆ ಅಗಣಿತ ಶಿಷ್ಯವೃಂದವೇ ಲಭಿಸಿತ್ತು.
ಗಾಂಧೀಜಿ ದೇಶವನ್ನಗಲಿದ ಸಂದರ್ಭದಲ್ಲಿ
ಬರೆದ ಈ ಕವಿತೆ ಕರ್ಕಿಯಯವರನ್ನು
ನಾಡನ್ನಗಲಿದಾಗಲೂ ಪದೇ ಪದೇ ನೆನಪಾಗಿತ್ತು.
ತಿಳಿನೀಲದಲ್ಲಿ
ತಾ ನೀಲವಾಗಿ ಅವ
ಹೋದ ದೂರ ದೂರ
ಬೆಳಗಿಹುದು
ಇಲ್ಲಿ ಅವ ಬಿಟ್ಟ ಬೆಳಕು
ಇನ್ನೊಮ್ಮೆ
ಏಕೆ ಬಾರ.
No comments:
Post a Comment