Sunday, 29 March 2020

ಮಹಿಳೆಗೆ ಬೇಕು ಆರ್ಥಿಕ ಸ್ವಾವಲಂಬನೆ


ಮಹಿಳೆಗೆ ಬೇಕು ಆರ್ಥಿಕ ಸ್ವಾವಲಂಬನೆ

ಲೇಖನ-ಡಾ.ಲಿAಗರಾಜ ರಾಮಾಪೂರ

ವಿಶೇಷ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಸಹಿಪ್ರಾ ಶಾಲೆ ಆನಂದನಗರ, ಹುಬ್ಬಳ್ಳಿ

ಮೊ-9964571330

 

 

                ಮಾತಾ ನಿಂದತಿ, ನಾಭಿನಂದತಿ ಪಿತಾ, ಭ್ರಾತ್ರಾನ ಸಂಭಾಷತೆ, ಭೃತ್ಯಃ ಕುಪ್ಯತಿ, ವಾನುಗಚ್ಛತಿ ಸುತಾ, ಕಾಂತಾಪಿ ನಸ್ನೇಹ್ಯತಿ, ಅರ್ಥ ಪ್ರಾರ್ಥನಾ ಶಂಖಯಾನ ಕುರುತೆ ಸಂಭಾಷಣA ವೈಸುಹೃದ್ ತಸ್ಮಾತ್ ದೃವ್ಯವಲಿಪಾರ್ಜಯಸ್ಯ ಸುಮತೆ ದೃವ್ಯೇಣ ಸರ್ವೇವಶಾಃ.”

                ಸಂಸ್ಕೃತದ ಸುಭಾಷಿತದ ಅರ್ಥವನ್ನು ಅವಲೋಕಿಸಿದರೆನಿರ್ಧನಿಯನ್ನು ತಾಯಿಯು ನಿಂದಿಸುತ್ತಾಳೆ. ತಂದೆಯು ಅಭಿನಂದಿಸುವುದಿಲ್ಲ, ಸಹೋದರಿಯರು ಮಾತನಾಡಿಸುವುದಿಲ್ಲ, ಆಳುಗಳೂ ಕೂಡಾ ಸಿಟ್ಟಾಗುತ್ತಾರೆ. ಮಕ್ಕಳು ಅನುಸರಿಸುವುದಿಲ್ಲ, ಮಡದಿಯೂ ಸ್ನೇಹದಿಂದಿರುವುದಿಲ್ಲ. ಬಂಧುಗಳೂ ಹಣ ಕೇಳಿ ಬಿಡಬಹುದೆಂಬ ಭಯದಿಂದ ದೂರವಿರುತ್ತಾರೆ. ಆದ್ದರಿಂದ ಬುದ್ಧಿವಂತನು ಹಣ ಗಳಿಸುತ್ತಾನೆ. ಹಣದಿಂದ ಎಲ್ಲವೂ ದೊರೆಯುತ್ತದೆ. ಆರ್ಥಿಕ ಸ್ವಾವಲಂಬನೆಯಿA ಜೀವನದ ಎಲ್ಲ ಸಮಸ್ಯೆಗಳೂ ಪರಿಹಾರವಾಗಿಬಿಡುತ್ತವೆ. ಆದರೆ ಬಾಳೆಂಬುದು ಒಂದು ಚಿಂತೆಗಳ ಸಂತೆ. ಹಣವೊಂದೇ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಲು ಸಾಧ್ಯವಾಗಲಾರದು.

                ಆಹಾರಕ್ಕಾಗಿ ಕಾಡುಮೇಡುಗಳಲ್ಲಿ ಅಲೆಯುತ್ತಿದ್ದ ಆದಿಮಾನವ ನದೀಮುಖಜ ಭೂಮಿಗಳಲ್ಲಿ ಕೃಷಿಯನ್ನು ಆರಂಭಿಸಿ ನಿಧಾನವಾಗಿ ಸ್ಥಿರವಾದ ಬದುಕನ್ನು ಕಂಡುಕೊA. ಆಗ ಗಂಡು ಹೆಣ್ಣುಗಳೆಂಬ ಸಾಮಾಜಿಕ ಬೇಧ ಕಂಡುಬರುತ್ತಿರಲಿಲ್ಲ. ಶ್ರಮವಿಭಜನೆಯ ಅನುಕೂಲದ ದೃಷ್ಟಿಯಿಂದ ಗೃಹಕೃತ್ಯ, ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಸ್ತಿçÃಗೆ ವಹಿಸಿ ಬೇಟೆ, ಕೃಷಿ, ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿ ಹೊರಾವರಣದ ಕೆಲಸಗಳನ್ನು ಪುರುಷ ನಿರ್ವಹಿಸತೊಡಗಿದ. ತನ್ನ ಬಿಡುವಿನ ವೇಳೆಯಲ್ಲಿ ಸ್ತಿçà ಪುರುಷನಿಗೆ ನೆರವಾಗುತ್ತಿದ್ದರೂ ಉತ್ಪನ್ನಗಳ ಮಾರಾಟ, ಅರ್ಥಾರ್ಜನೆ ಪುರುಷನ ಉಸ್ತುವಾರಿಯಲ್ಲೇ ಇತ್ತು. ಕುಟುಂಬದ ಗಳಿಕೆಗೆ ಅವನೇ ವಾರಸುದಾರ.

                ಹೀಗೆ ವಿದ್ಯೆ, ಉದ್ಯೋಗ, ಆರ್ಥಿಕ ಸಾಮಾಜಿಕ ರಂಗಗಳಿA ದೂರವಿರಿಸಿ ಮಹಿಳೆಯ ಬದುಕನ್ನು ಕೇವಲ ಅಡುಗೆ, ಒಲೆ, ಹೆರಿಗೆ ಕೋಣೆಗಳಿಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಮಹಿಳೆ ಪೂರ್ತಿಯಾಗಿ ಆರ್ಥಿಕ ಪರಾವಲಂಬಿಯಾಗಿದ್ದಳು. ಕೇವಲ ಖರ್ಚಿಗೆ ಮೂಲ ಎಂಬ ಒಂದೇ ಕಾರಣಕ್ಕಾಗಿ ಶಿಕ್ಷಣ, ಕಲೆ, ಕೌಶಲಗಳಿಂದೆಲ್ಲ ಅವಳನ್ನು ವಂಚಿಸಲಾಗಿತ್ತು. ಕುಟುಂಬದ ಎಲ್ಲ ಸದಸ್ಯರ ಯೋಗಕ್ಷೇಮವನ್ನು ನೋಡಿಕೊಂಡು ಹೊತ್ತು ಹೊತ್ತಿಗೆ ಎಲ್ಲರ ಅಗತ್ಯಗಳನ್ನು ಪೂರೈಸುವ ಹೆಣ್ಣಿನ ಬಾಳು ಊಳಿಗದವಳಿಗಿಂತ ಕೀಳಾಗಿತ್ತು. ಅಳುವೊಂದೇ ಪ್ರತಿಭಟನೆಯ ಅಸ್ತçವಾಗಿ ಅವಳು ಅಸಹಾಯಕಳಾಗಿದ್ದಳು.

                ತನ್ನ ಜೀವನ ನಿರ್ವಹಣೆಗಾಗಿ ಪತಿಯನ್ನು ಅವಲಂಬಿಸಿದ ಮಹಿಳೆ ವಿಧವೆಯಾಗಿಬಿಟ್ಟರಂತೂ ಅವಳ ಜೀವನ ನರಕಸದೃಶ್ಯವೇ ಸರಿ. ಭೂಮಿಗೆ ಭಾರ, ಕೂಳಿಗೆ ದಂಡ ಎಂಬ ಧೋರಣೆಯಲ್ಲಿ ಅವಳನ್ನು ಚೆನ್ನಾಗಿ ದುಡಿಸಿಕೊಂಡು, ಚುಚ್ಚುಮಾತು, ಅವಹೇಳನಗಳಿಂದ ಅವಳು ಕಣ್ಣೀರಿನಲ್ಲಿ ಬದುಕುವ ಪರಿಸ್ಥಿತಿ. ಹಿಡಿ ಅನ್ನಕ್ಕಾಗಿ ಪಡಲಾರದ ಬವಣೆ. ತನ್ನ ಮಕ್ಕಳನ್ನು ಸಾಕಲು ಅವರಿಗೆ ಉತ್ತಮ ಶಿಕ್ಷಣ ಕೊಡುವ ಹರಸಾಹಸ.

                ಇಂತಹ ಅವಮಾನದ, ಅಜ್ಞಾನದ ಕತ್ತಲೆಯಿಂದ ಹೊರಬರಲು ಆರ್ಥಿಕ ಸ್ವಾವಲಂಬನೆಯೊAದೇ ಹೆಣ್ಣಿಗೆ ಸಹಾಯ ಮಾಡುವಂತಹುದು. ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುವ ಮಹಿಳೆ ಯಾರ ಕರುಣೆಗಾಗಿಯೂ ಕಾಯಬೇಕಿಲ್ಲ. ಕುಟುಂಬದ ಇತರ ಸದಸ್ಯರಿಂದಲೂ ಗೌರವಕ್ಕೆ ಪಾತ್ರರಾಗಬಲ್ಲಳು. ಆರ್ಥಿಕ ಅನುಕೂಲ ವೃದ್ಧಾಪ್ಯದಲ್ಲಿಯೂ ಅವಳಿಗೆ ಧೈರ್ಯಕೊಡುತ್ತದೆ. ಇತರರ ಕರುಣೆಗೆ ಕೈಯೊಡ್ಡದೇ ತನ್ನ ಮಕ್ಕಳನ್ನು ಬೆಳೆಸಬಲ್ಲಳು. ‘ಸ್ವತಂತ್ರಳಿದ್ದೇನೆಎಂಬ ಸ್ವಾಭಿಮಾನ ವಿಚಾರವೇ ಅವಳನ್ನು ಧೃತಿಗೆಡದೇ ಇರಿಸಬಲ್ಲದು. ಬದುಕಿನಲ್ಲಿ ದಿಕ್ಕೆಟ್ಟಾಗ ಅವಳ ಹಣದ ಆಕರ್ಷಣೆಯಿಂದಾದರೂ ಬಂಧು ಬಾಂಧವರು ವಿಶ್ವಾಸದಿಂದ, ಗೌರವದಿಂದ ಕಾಣುತ್ತಾರೆ. ಹೀಗೆ ಆರ್ಥಿಕ ಸ್ವಾವಲಂಬನೆ ಅವಳ ಸಮಸ್ಯೆಯನ್ನು ನಿವಾರಿಸಬಲ್ಲವು ಎಂಬುದು ಸತ್ಯ.

                ಕೆಲವೊಮ್ಮೆ ಆರ್ಥಿಕ ಸ್ವಾತಂತ್ರö್ಯ ಹೆಣ್ಣಿಗೆ ಇದ್ಯಾಗ್ಯೂ ಶೋಷಿತಳಾಗಿರುವುದನ್ನು ಕಾಣುತ್ತೇವೆ. ತನ್ನ ದುಡಿತದ ಸಂಬಳವನ್ನು ಪತಿಗೆ ಅಥವಾ ತಂದೆಗೆ ಒಪ್ಪಿಸಿ ಅವರ ಇಚ್ಛೆ, ಆಜ್ಞೆಗಳಿಗನುಸಾರವಾಗಿ ತನ್ನ ಉಡುಗೆ, ತೊಡುಗೆ, ಅಲಂಕಾರ, ವಿಚಾರ, ವ್ಯವಹಾರಗಳನ್ನು ಪರಿವರ್ತಿಸಿಕೊಳ್ಳುವ ಸ್ತಿçà ಒಟ್ಟಾರೆ ವ್ಯಕ್ತಿತ್ವವೇ ಪತಿಗಾಗಿ, ಪತಿಯಿಂದ, ಪತಿಯೇ ರೂಪಿಸಿದ್ದಾಗಿರುತ್ತದೆ.

                ಭಾರತೀಯ ಸಮಾಜದ ಚೌಕಟ್ಟಿನಲ್ಲಿ ಪತಿಯನ್ನು ಅನುಸರಿಸಿಕೊಂಡು, ಅವನ ಎಲ್ಲ ಲೋಪ ದೋಷಗಳೊಡನೆ ಹೊಂದಾಣಿಕೆ ಮಾಡಿಕೊಂಡು ಕಡೇ ಉಸಿರಿರುವತನಕ ಕುಟುಂಬದ ನೆಮ್ಮದಿಗಾಗಿ ಹೋರಾಡುವ, ಭೂಮಿ ತೂಕದ ಹೆಣ್ಣಿಗೆ ಸದಾ ಗೌರವದ ಸ್ಥಾನವಿದೆ. ಹಾಗಾಗಿ ಪತಿಯು ಎಂತಹ ಅನಾಚಾರಿಯಾದರೂ, ಕ್ರೂರಿಯಾದರೂ ಹೆಣ್ಣು ತನ್ನ ಆರ್ಥಿಕ ಅನುಕೂಲತೆಯನ್ನು ಕಡೆಗಣಿಸಿ ಅವನನ್ನು ಅನುಸರಿಸಿಕೊಂಡು, ಸಹಿಸಿಕೊಂಡು ಬಾಳುತ್ತಾಳೆಯೇ ಹೊರತು ಬಿಟ್ಟು ಬದುಕುವ ಧೈರ್ಯಕ್ಕಿಳಿಯುವುದಿಲ್ಲ. ಒಂದೊಮ್ಮೆ ಅವಳು ಅಂತಹ ದಿಟ್ಟ ಹೆಜ್ಜೆ ಇಟ್ಟರೂ ಸಮಾಜದಲ್ಲಿ ಅವಳ ಬದುಕು ಅಸಹನೀಯವಾಗುತ್ತದೆ.

  ಎಲ್ಲ ಕಾರಣಗಳಿಂದಾಗಿ ಒಟ್ಟಾರೆ ಸಮಾಜದ ಕಟ್ಟುಪಾಡುಗಳು ಬದಲಾಗುವ ತನಕ ಜನರ ಮನೋಭಾವದಲ್ಲಿ ಸುಧಾರಣೆ ಆಗುವ ತನಕ ಮಹಿಳೆಯರ ಸಮಸ್ಯೆಗಳಿಗೆ ಕೊನೆ ಎಂಬುದಿಲ್ಲ.

ಹಣವು ಹೆಣ್ಣಿಗೆ ಅನ್ನ-ಬಟ್ಟೆ-ಮನೆಗಳಂತಹ ಮೂಲಭೂತ ಭೌತಿಕ ಸೌಲಭ್ಯಗಳ ಪೂರೈಕೆಯಲ್ಲಿ ನೆರವಾಗಬಹುದೇ ಹೊರತು ಸಾಮರಸ್ಯದ, ನೆಮ್ಮದಿಯ ಜೀವನಕ್ಕೆ ಹಣಕ್ಕಿಂತಲೂ ಅರ್ಥ ಮಾಡಿಕೊಳ್ಳುವ ಹೃದಯದ ಸಾಂಗತ್ಯದ ಅಗತ್ಯವಿರುತ್ತದೆ. ಪ್ರತಿಯೊಬ್ಬ ಪತಿಯೂ ತನ್ನ ಪತ್ನಿಯನ್ನು ಮನಸ್ಸು ಹೃದಯಗಳಿರುವ ಬುದ್ಧಿಭಾವನೆಗಳಿರುವ ಜೀವಿಯೆಂದು ಭಾವಿಸಿ, ಗೌರವಿಸಿದರೆ ಸಮಸ್ಯೆಗಳ ಎಡೆಯೇ ಇರುವುದಿಲ್ಲ. ಆಗ ಹಣವೂ ಗೌಣವಾಗಿ ಬಿಡಬಹುದು. ವರಕವಿ ಬೇಂದ್ರೆಯವರ ಕವನದ ಸಾಲುಗಳು ಇದಕ್ಕೆ ಪುಷ್ಠಿ ಕೊಡುತ್ತದೆ.

ನಾನು ಬಡವಿ, ಆತ ಬಡವ

ಒಲವೇ ನಮ್ಮ ಬದುಕು

ಹಂಚಿಕೊAಡೆವದನೆ ನಾವು

ಅದಕು, ಇದಕು ಎದಕು

No comments:

Post a Comment