Sunday, 29 March 2020

ಬೆಳಕು


                                                                               ಬೆಳಕು

ಮೇ 2012ರಲ್ಲಿ ಧಾರವಾಡ ಡೈಟ್ ವತಿಯಿಂದಜೀವನ ಶಿಕ್ಷಣಪತ್ರಿಕೆಯಲ್ಲಿ ಪ್ರಕಟಿತ ಮಕ್ಕಳ ವಿಜ್ಞಾನ ಕವನ

 

ಜೀವಜಾಲಕೆ ಆಧಾರ

ಸೂರ್ಯ ಶಕ್ತಿಯ ಆಗರ

ಬೆಳಕಿನ ಮೂಲಗಳೆರಡು

ಸ್ವಾಭಾವಿಕ ಕೃತಕಗಳು ||1||

 

ದಿನ ಬೆಳಗುವ ಸೂರ್ಯ

ಹೊಳೆ ಹೊಳೆಯುವ ನಕ್ಷತ್ರಗಳು ಸ್ವಾಭಾವಿಕ

ಮಾನವ ನಿರ್ಮಿತ ಬುಡ್ಡಿದೀಪ

ವಿದ್ಯುತ್ ಬಲ್ಬ ಮೇಣದ ಬತ್ತಿಗಳೆಲ್ಲವೂ ಕೃತಕ ||2||

 

ಜೀವನವಿರಲಿ ಪಾರದರ್ಶಕದಂತೆ

ಗಾಜಿನಾಚೆಯ ನೋಟದಂತೆ

ಸರಿಸು ಅಪಾರದರ್ಶಕ ತೆರೆಯ

ಕಪ್ಪು ಹಲಗೆಯ ಮಾಯೆಯ ||3||

 

ವಸ್ತು ಗೋಚರಿಸಲು ಬೆಳಕು ಅವಶ್ಯಕ

ಹೊಳೆಯುವ ಮೇಲ್ಮೈಗಿದೆ ಪ್ರತಿಫಲನದ ತವಕ

ಸಮತಲ ದರ್ಪಣದಿ ಮಿಥ್ಯ ಪ್ರತಿಬಿಂಬ

ಇದುವೇ ಪಾಶ್ರ್ವ ವಿಪರ್ಯಯ ಬಿಂಬ ||4||

 

ರವಿ ಭುವಿಯರ ಮಧ್ಯದಲಿ

ಶಶಿ ಬರಲು ಸರಳ ರೇಖೆಯಲಿ

ನೋಡು ನೀನಾಗ ಭಾನಿನಲಿ

ಉಂಟಾಗಿಹುದು ಚಂದ್ರಗ್ರಹಣ ಅಲ್ಲಿ ||5||

 

ರವಿ ಶಶಿಯರಿರ್ವರ ಮಧ್ಯದಲಿ

ಭೂಮಿತಾ ಬಂದಿರಲು ಸರಳ ರೇಖೆಯಲಿ

ನೋಡು ನೀನಾಗ ಭಾನಿನಲಿ

ಉಂಟಾಗಿಹುದು ಸೂರ್ಯಗ್ರಹಣ ಅಲ್ಲಿ ||6||

 

ಸೂರ್ಯ ಚಂದ್ರಗ್ರಹಗಳ ಆಟ

ನೆರಳಿನದ್ದೇ ಇಲ್ಲಿ ಅದ್ಭುತ ಮಾಟ

ಬೆಳಕು ನೆರಳಿನ ಕಥನ

ತಿಳಿಯೆ ಮೈ ಮನವೆಲ್ಲಾ ರೋಮಾಂಚನ ||7||

No comments:

Post a Comment