ಡಾ.ಲಿಂಗರಾಜ ರಾಮಾಪೂರ ಪರಿಚಯ
ಡಾ.ಲಿಂಗರಾಜ ರಾಮಾಪೂರ ವೃತ್ತಿಯಲ್ಲಿ
ಶಿಕ್ಷಕರು. ಮೂಲತಃ ನವಲಗುಂದ ತಾಲೂಕಿನ
ಮೊರಬ ಗ್ರಾಮದವರಾದ ಅವರು ಪ್ರಸ್ತುತ ರಾಜ್ಯ
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ, ಪರಿಸರ,
ಕೃಷಿ, ಶಿಕ್ಷಣ, ಪ್ರವಾಸ ಹೀಗೆ
ಇವರು ಬರೆದ 200ಕ್ಕೂ ಹೆಚ್ಚು
ಪ್ರೌಢ ಲೇಖನಗಳು ನಾಡಿನ ಪ್ರಮುಖ
ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಮಾಪೂರವರು 25ಕ್ಕೂ ಹೆಚ್ಚು ಸಾಹಿತ್ಯಿಕ
ಕೃತಿಗಳನ್ನು ರಚಿಸಿದ್ದಾರೆ. ಬೀದಿನಾಟಕ, ಜಾಥಾ, ಜಾಗೃತಿ ಗೀತೆಗಳೊಂದಿಗೆ
ಸಾಕ್ಷರತಾ ಆಂದೋಲನದಿAದ ಪ್ರಾರಂಭಿಸಿ ವಿವಿಧ
ಜನಾಂದೋಲನಗಳ ಮೂಲಕ ವಿಜ್ಞಾನವನ್ನು ಜನರ
ನಡುವೆ ಕೊಂಡೊಯ್ಯುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದಾರೆ.
ಈಗ ‘ಸೈನ್ಸ್ ಫಾರ್ ಸೊಸೈಟಿ
ಆರ್ಗನೈಜೇಶನ್’ ಅಧ್ಯಕ್ಷರಾಗಿ ವಿಜ್ಞಾನವನ್ನು ಮನೆಮನೆಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ‘ಪರಿಸರದೊಳಗಿನ
ಸತ್ಯದ ಮಾತು’ ಪರಿಸರ ಬರಹಗಳು,
‘ಗುಬ್ಬಿಗೊಂದು ಮನೆಯ ಮಾಡಿ’ ಪರಿಸರ
ಆಧಾರಿತ ಮಕ್ಕಳ ಕಾದಂಬರಿ, ‘ಭೂಮಿ
ಮಾರಾಟಕ್ಕಿಲ್ಲ’ ಪರಿಸರ ನಾಟಕಗಳು, ‘ವಿಜ್ಞಾನದಲೆಯ
ಬೆಳಕು’ ವೈಚಾರಿಕ ಬರಹಗಳು, ‘ನಾಲ್ಕು
ವೈಜ್ಞಾನಿಕ ಕಥೆಗಳು’ ಕಥಾ ಸಂಕಲನ
‘ನೀರ್ ಬಾರ್’ಇವು ವಿಜ್ಞಾನ
ಸಾಹಿತ್ಯಕ್ಕೆ ಇವರ ಶ್ರೇಷ್ಠ ಕೊಡುಗೆಗಳಾಗಿವೆ.
ನಾಟಕಗಳು,
ಕಾದಂಬರಿ, ಕಥೆಗಳು, ಕವನಗಳು, ಪ್ರವಾಸ,
ಜೀವನ ಚರಿತ್ರೆ, ವಿಜ್ಞಾನ ಮತ್ತು ಪರಿಸರ
ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ
ಮಾಡಿದ ಹೆಗ್ಗಳಿಕೆ ಡಾ.ಲಿಂಗರಾಜ ರಾಮಾಪೂರ
ಅವರದ್ದು. ‘ಹುಗ್ಗಿ ಅಂದ್ರ ಹಿಂಗೈತಿ’,
‘ದೊಡ್ಡವರು ಚಿಕ್ಕವರಿದ್ದಾಗ’, ‘ಕಲಾಂ ನಿಮಗೊಂದು ಸಲಾಂ’
‘ನಿಸರ್ಗ ನ್ಯಾಯ’, ‘ನೀರ್ ಬಾರ್’ ಮೊದಲಾದ
ಕೃತಿಗಳನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ
ತಮ್ಮ ಹೆಸರನ್ನು ನೊಂದಾಯಿಸಿಕೊAಡಿದ್ದಾರೆ. ಆಧುನಿಕ ಮಕ್ಕಳ ಸಾಹಿತ್ಯ
ಹಾಗೂ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ
ಅವರ ಹೆಸರನ್ನು ನಮೂದಿಸದೇ ಇರಲು ಸಾಧ್ಯವೇ ಇಲ್ಲ.
ಅಂತಹ ಭರವಸೆಯ ಸಾಹಿತಿಯಾಗಿ ಡಾ.ಲಿಂಗರಾಜ ಬೆಳೆಯುತ್ತಿದ್ದಾರೆ. ರಾಜ್ಯ
ವಿಜ್ಞಾನ ಪರಿಷತ್ತಿನಿಂದ ಪ್ರಕಟಗೊಂಡ ‘ವಿಜ್ಞಾನದ ಅಲೆದಾಟ’ ಕೃತಿಗೆ ಕರ್ನಾಟಕ
ಸರಕಾರದ ಬಾಲವಿಕಾಸ ಅಕಾಡೆಮಿಯ ‘ಪುಸ್ತಕ ಚಂದಿರ’ ಪ್ರಶಸ್ತಿ
ಬಂದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
‘ಗುಬ್ಬಚ್ಚಿ ಗೂಡು’ ಮಕ್ಕಳ ಪತ್ರಿಕೆಯ
ಅಂಕಣಕಾರರಾಗಿ ಸಾಹಿತ್ಯ ಕೃಷಿ ಆರಂಭಿಸಿದ್ದ
ಡಾ.ಲಿಂಗರಾಜ ರಾಮಾಪೂರ ಒಬ್ಬ
ಶ್ರೇಷ್ಠ ಶಿಕ್ಷಕ, ಚಿಂತಕ, ಪರಿಸರವಾದಿ,
ಸಂಘಟಕ, ನಾಟಕಕಾರ. ಸಧ್ಯ ಆ ಪತ್ರಿಕೆಯ
ಸಹಸಂಪಾದಕರಾಗಿಯೂ ಕಾರ್ಯಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಶ್ರೇಷ್ಠ
ಕೊಡುಗೆಗಾಗಿ ಮಾಜಿ ರಾಷ್ಟçಪತಿ,
ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ
ಅವರಿಂದ ರಾಷ್ಟಿçÃಯ ಗುರುಪುರಸ್ಕಾರ
ಪಡೆದು ಅಮೆರಿಕದ ಶಾಲೆಗಳ ಅಧ್ಯಯನ
ಪ್ರವಾಸವನ್ನೂ ಕೈಗೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ
ಡಾಕ್ಟರೇಟ್ ಪಡೆದಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ 84ನೇ ಕನ್ನಡ
ಸಾಹಿತ್ಯ ಸಮ್ಮೇಳನದಲ್ಲಿ ‘ಶಿಕ್ಷಕನ ನೋಟದಲ್ಲಿ ಅಮೆರಿಕಾ’
ಎಂಬ ಕೃತಿ ಬಿಡುಗಡೆಗೊಳಿಸಿದ್ದಾರೆ. ಸಂಯುಕ್ತ ಕರ್ನಾಟಕದ
‘ನಂ ಮೇಷ್ಟುç’ ವಿಶೇಷ ಅಂಕಣ ಗೌರವ
ಲಭಿಸಿದ್ದು ವಿಶೇಷ. ರಾಜ್ಯ ಸರಕಾರ
ಶಿಕ್ಷಣ ಇಲಾಖೆಯ ‘ವಿಶೇಷ ಶಿಕ್ಷಕ
ರಾಜ್ಯ ಪ್ರಶಸ್ತಿ 2019’ ಇವರಿಗೆ ಲಭಿಸಿದೆ. 2020ರಲ್ಲಿ
ಟೈಮ್ಸ್ ಗ್ರುಪ್ ವತಿಯಿಂದ ಬೋಧನೆಯಲ್ಲಿ
ನಾವಿನ್ಯಯುತ ಪ್ರಯೋಗಗಳಿಗಾಗಿ ‘ಟಾಫಿಟ್’ ಪ್ರಶಸ್ತಿ ಲಭಿಸಿದೆ.
No comments:
Post a Comment